Wednesday, 28 July 2021

ಕರದಲಿ ತಾಳ ಸಂತರ ಮೇಳ ಅಲ್ಲಿರುವನು ಹರಿ ಗೋಪಾಲ ankita moolanarayana

kruti by Moolanarayanaru 1800+

ankita moolanarayana


ಕರದಲಿ ತಾಳ ಸಂತರ ಮೇಳ ಅಲ್ಲಿರುವನು ಹರಿ ಗೋಪಾಲ


ಪರಿಪರಿ ನುತಿಸುವ ಪರಮಭಕ್ತರನು ಪರಿಪಾಲಿಪ ಪುರಂದರ ವಿಠಲ ||


ಗೆಜ್ಜೆಯ ಕಟ್ಟು ಲಜ್ಜೆಯೆ ಬಿಟ್ಟು ಸಜ್ಜನ ಸೇವೆಯೊಳ್ ಮನಸಿಟ್ಟು


ಹೆಜ್ಜೆಹೆಜ್ಜೆಗೂ ಹರಿನಾಮವನು ಘರ್ಜಿಸಿ ಹೇಳುತ ಕರತಟ್ಟು ||೧||


ನಾಮವೆ ಧ್ಯಾನ ನಾಮವೆ ಪಾವನ ನಾಮ ಸಂಕೀರ್ತನ ಜೀವನ


ನಾಮವೆ ಘನಹರಿ ನಾಮವೆ ರಕ್ಷಣ ನಾಮವೆ ಮೋಕ್ಷದ ಸಾಧನ ||೨||


ಬಾಲಯೌವನ ವೃದ್ಧಾಪ್ಯದೊಳು ಕೋಳುಹೋಯ್ತು ಆಯುಷ್ಯವೆಲ್ಲ


ಮೂಲನಾರಾಯಣ ಆಲಯ ಸೇರಲು ನಾಮ ಹೊರತು ಗತಿ ಬೇರಿಲ್ಲ ||೩||

***


karadali taaLa saMtara mELa alliruvanu hari gOpaala


paripari nutisuva paramabhaktaranu paripaalipa puraMdara viThala ||


gejjeya kaTTu lajjeye biTTu sajjana sEveyoL manasiTTu


hejjehejjegU harinaamavanu gharjisi hELuta karataTTu ||1||


naamave dhyaana naamave paavana naama saMkIrtana jIvana


naamave ghanahari naamave rakShaNa naamave mOkShada saadhana ||2||


baalayouvana vRuddhaapyadoLu kOLuhOytu aayuShyavella


mUlanaaraayaNa aalaya sEralu naama horatu gati bErilla ||3||

***


 

No comments:

Post a Comment