..
ಸತತ ಚಿಂತಾಮಣಿಯೆ | ಸುರರೊಳಗೆ ನಿನಗೆಣಿಯೆಸಂತರನ ಪೊರೆವಂಥ ಮುನಿಯೆ | ಸುಖ ಜ್ಞಾನ ಖಣಿಯೇ ಪ
ಭುವದಸುರ ಮರ್ದನನೆ | ತ್ರಿಭುವನಕಾಧಾರಕನೆಭುವನ ಸುತ ವಂದಿತನೆ | ಭವ ಭುವನ ನಿಧಿ ತಾರಕನೆ 1
ಭಾರತಿ ಮನೆ | ಕುಂಬಾರನ ವುಳಹಿದನೆಭಾರತದೊಳು ನೀನೆ | ಭೂಭಾರ ನಿಳುಹಿದವನೆ2
ಶಂಖ ಚಕ್ರಾಧರನೆ ನಿ- | ಶ್ಶಂಕ ಮಹಾಮಹಿಮನೆಶಂಕರ ಸುರಪಾಲಕನೆ | ಶಂಕ ಚಕ್ರವಿತ್ತವನೆ 3
ಘಟಿಕಾಚಲ ವಾಸ | ಉತ್ಕøಷ್ಟ ನರಹರಿಯ ದಾಸಭಟ ಜನರಿಗೆ ಬಲು ಲೇಸಾ ಅ- | ಜಟವಾಗಿ ಕೊಡುವ ಸಂನ್ಯಾಸಾ 4
ಪರಮ ಪಾವನ ಪಾವನ ಸರೋ- | ವರ ತೀರ ಸಿರಿ ಮೋಹನ್ನ ವಿಠ್ಠಲನ ನಿತ್ಯ ಸ್ಮರಿಸುವ ಗುರು ಶಿರೋರತ್ನಾ 5
***
No comments:
Post a Comment