Sunday, 1 August 2021

ಶ್ರೀನಿವಾಸ ಗುರು ಗುಣಾಧೀಶ ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ankita mohana vittala

..

ತಿರುಪತಿ ದಿಗ್ಗಾವಿ ಶ್ರೀನಿವಾಚಾರ್ಯರ ಸ್ತೋತ್ರ


ಶ್ರೀನಿವಾಸ ಗುರು ಗುಣಾಧೀಶ | ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ಪ


ಏನಾದರು ಎನ್ನ ಹೀನತೆ ಎಣಿಸದೇಸಾನುರಾಗದಿ ನಿನ್ನ ಅಧೀನದೊಳಗಿರುವುದು ಅ.ಪ.


ನಾನು ನನ್ನದು ಎಂಬುದು ಬಿಡಿಸಿ | ಸುಜ್ಞಾನವ ಕೊಡಿಸಿ ಸು-ಜ್ಞಾನವಂತರ ಸಂಗದೊಳಿರಿಸಿ | ಸನ್ಮಾನದಿ ನೀ ಇಡಿಸಿ ಮಾನಸದೊಳು ಅನುಮಾನವಿಲ್ಲದೇ ನಿನ್ನ ಧ್ಯಾನವ ಕೊಡುವುದು ಉದಾಸೀನ ಮಾಡದೆ ನಿತ್ಯ 1

ಅಗ್ನಿಹೋತ್ರವ ನಡೆಸುವ ತೆರದಿ | ಆಗ್ಯನ್ನನು ಮುದದಿಸುಜ್ಞಾನಿ ನೀನೇ ಕರಗಳ ಪಿಡಿದೀ | ಅಜ್ಞಾನವ ಬಿಡಿಸೀವಿಘ್ನವಗೊಳಿಸದೆ ಸರ್ವಜ್ಞ ಪಾದದೀಮಗ್ನನ ಮಾಡು ಪ್ರಾಜ್ಞ ಶಿರೋಮಣಿ2

ನಿನ್ನ ನಂಬಿದ ಪಾಮರ ನಾನು | ಪಾವನ್ನ ನೀನುಎನ್ನ ಗುಣ ದೋಷಗಳನ್ನು | ಮನ್ನಿಸುವಾದೇನು ಅನ್ನಂತ ಪಾಪಿ ನಾನು ನೀನಾದರೊ ದಯವನ್ನು ಮಾಡುನಿನ್ನ ಪೊಂದಿದೆ ಮಹಾನುಭಾವ 3

ಹರಿದಾಸನು ಎನಿಸಿದ ಬಳಿಕ ಎನ್ನ |ಗುರು ಶಿರೋರನ್ನ ||ಪರಮ ಪಾತಕಿ ನಾನಾದರೂ ನಿನ್ನಚರಣಕ್ಕೆ ಸುತ್ತಿದ ಬಿರಿದು ಬಿಡುವುದುಂಟೇ4

ಅನ್ಯರಿಗಾನು ಎರಗುವನಲ್ಲ | ನೀ ಬಲ್ಲಿ ಎಲ್ಲಮನ್ನಿಸಿ ದಯದಿ ಎನ್ನಯ ಸೊಲ್ಲ ಶಿರಿ ಲ-ಕ್ಷ್ಮೀ ನಲ್ಲ ಎನ್ನ ಪಿಡಿಯೊ ಮೋ-ಹನ್ನ ವಿಠಲನ್ನ ತೋರಿ ಪಾವನನೆನಿಸುವುದು 5

***

 

No comments:

Post a Comment