Thursday, 22 July 2021

ಕೃತ ಕೃತ್ಯನಾದೆನಿಂದಿನ ದಿನದೊಳು ankita jagannathaa vittala vyasatatwajna teertha stutih

 ಕೃತ ಕೃತ್ಯನಾದೆನಿಂದಿನ ದಿನದೊಳು

ಕ್ಷಿತಿಸುತ ವೆಂಕಟರಾಮಾರ್ಯರನ ಕಂಡು ||pa||


ಭೂಮಂಡಲದೊಳುಳ್ಳ ಸಕಲ ತೀರ್ಥಸ್ನಾನ

ಹೇಮಾದ್ರಿ ಮೊದಲಾದ ಕ್ಷೇತ್ರ ಯಾತ್ರೆ

ನೇಮ ಜಪತಪ ವ್ರತಾದಿಗಳ ಮಾಡಿದ ಪುಣ್ಯ

ಈ ಮಹಾತ್ಮರ ಕಂಡ ಮಾತ್ರ ಸಮನಿಸಿತು ||1||


ಷಣ್ಣವತ್ಯಬ್ಧ ಪರಿಯಂತ ಹರಿಮಹಿಮೆಗಳ

ಸನ್ನುತಿಯಲೀ ಶ್ರುತಿಸ್ಮøತಿಗಳಿಂದ

ಧನ್ಯರೆಂದೆನಿಸಿ ಮಹಿಯೊಳಗೆ ಪೂರಿತರಾದ

ಪುಣ್ಯಚರಿತರ ದಿವ್ಯ ಪಾದವನೆ ನಾ ಕಂಡು ||2||


ಹೀನ ಜನರೇ ಬಹಳ ಕ್ಷೋಣಿಯ ಮೇಲೆ ಸು

ಜ್ಞಾನಿಗಳು ದುರ್ಲಭರು ಕಲಿಯುಗದಲಿ

ಆನತೇಷ್ಟಪ್ರದ ಜಗನ್ನಾಥ ವಿಠಲ

ತಾನೆ ಕರೆತಂದು ತೋರಿ ಪುನೀತನ ಮಾಡ್ದ ||3||

***


kRuta kRutyanAdenindina dinadoLu

kShitisuta venkaTarAmAryarana kaMDu ||pa||


BUmanDaladoLuLLa sakala tIrthasnAna

hEmAdri modalAda kShEtra yAtre

nEma japatapa vratAdigaLa mADida puNya

I mahAtmara kanDa mAtra samanisitu ||1||


ShaNNavatyabdha pariyanta harimahimegaLa

sannutiyalI SrutismaøtigaLinda

dhanyarendenisi mahiyoLage pUritarAda

puNyacaritara divya pAdavane nA kaMDu ||2||


hIna janarE bahaLa kShONiya mEle su

j~jAnigaLu durlaBaru kaliyugadali

AnatEShTaprada jagannAtha viThala

tAne karetaMdu tOri punItana mADda ||3||

***


No comments:

Post a Comment