Monday 26 July 2021

ಶೋಭಾನವೆನ್ನಿರೆ ಸುರರೊಳು ಸುಭಗನಿಗೆ ಶೋಭಾನವೆನ್ನೀ ಹಡಗಿನೊಳಗಿಂದ ankita hayavadana shobhane mangala song

 .

ಶೋಭಾನವೆನ್ನಿರೆ ಸುರರೊಳು ಸುಭಗನಿಗೆ ಶೋಭಾನವೆನ್ನೀ ಸುಗುಣನಿಗೆ |

ಶೋಭಾನವೆನ್ನಿರೆ ತ್ರಿವಿಕ್ರಮರಾಯನಿಗೆ ಶೋಭಾನವೆನ್ನೀ ಸುರಪ್ರಿಯಗೆ || ಶೋಭಾನೆ ||


ಹಡಗಿನೊಳಗಿಂದ ಬಂದ ಕಡು ಮುದ್ದು ಕೃಷ್ಣ ಕಡಗೋಲ ನೇಣ ಪಿಡಿದನೇ |

ಕಡುಗೋಲ ನೇಣ ಪಿಡಿದ ದೇವಕಿಯ ತನಯಗಾರುತಿಯ ಬೆಳಗೀರೆ || ೧ ||


ಆಚಾರ್ಯರ ಕೈಯಿಂದ ಅಧಿಕ ಪೂಜೆಯಕೊಂಬ ಕಾಂತೆ ಲಕ್ಷ್ಮೀಯ ಅರಸಗೆ |

ಕಾಂತೆ ಲಕ್ಷ್ಮೀಯ ಅರಸ ಶ್ರೀಕೃಷ್ಣಗೆ ಕಾಂಚನದಾರುತಿ ಬೆಳಗೀರೆ || ೨ ||


ಮಧ್ವ ಸರೋವರದಿ ಶುದ್ಧ ಪೂಜೆಯಕೊಂಬ ಮುದ್ದು ರುಕ್ಮಿಣಿಯ ಅರಸಗೆ |

ಮುದ್ದು ರುಕ್ಮಿಣಿಯ ಅರಸ ಶ್ರೀಕೃಷ್ಣಗೆ ಮುತ್ತಿನಾರುತಿಯ ಬೆಳಗೀರೆ || ೩ ||


ಪಾಂಡವರ ಪ್ರೀಯಗೆ ಚಾಣೂರ ಮರ್ದನಗೆ ಸತ್ಯಭಾಮೆಯ ಅರಸಗೆ |

ಸತ್ಯಭಾಮೆಯ ಅರಸ ಶ್ರೀಕೃಷ್ಣಗೆ ನವರತ್ನದಾರುತಿ ಬೆಳಗೀರೆ || ೪ ||


ಸೋದರ ಮಾವನ ಮಧುರೆಯಲಿ ಮಡುಹಿದ ತಾಯಿಯ ಸೆರೆಯ ಬಿಡಿಸಿದ |

ತಾಯಿಯ ಸೆರೆಯ ಬಿಡಿಸಿದ ಹಯವದನ ದೇವಗಾರುತಿಯ ಬೆಳಗೀರೆ || ೫ ||


ಮುತ್ತೈದೆಯರೆಲ್ಲರೂ ಮುತ್ತಿನಾರುತಿಯೆತ್ತಿ ಹತ್ತಾವತಾರದ ಹಯವದನಗೆ ||

ಹತ್ತಾವತಾರದ ಹಯವದನ ದೇವಗೆ ಹೊಸ ಮುತ್ತಿನಾರುತಿ ಬೆಳಗೀರೆ || ೬ ||


ಭಾರತಿ ರಾಮನ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು

***


Śōbhānavennire suraroḷu subhaganige śōbhānavennī suguṇanige |


śōbhānavennire trivikramarāyanige śōbhānavennī surapriyage || śōbhāne ||


haḍaginoḷaginda banda kaḍu muddu kr̥ṣṇa kaḍagōla nēṇa piḍidanē |


kaḍugōla nēṇa piḍida dēvakiya tanayagārutiya beḷagire || 1 ||


ācāryara kaiyinda adhika pūjeyakomba kānte lakṣmīya arasage |


kānte lakṣmīya arasa śrīkr̥ṣṇage kān̄canadāruti beḷagire || 2 ||


madhva sarōvaradi śud’dha pūjeyakomba muddu rukmiṇiya arasage |


muddu rukmiṇiya arasa śrīkr̥ṣṇage muttinārutiya beḷagire || 3 ||


pāṇḍavara prīyage cāṇūra mardanage satyabhāmeya arasage |


satyabhāmeya arasa śrīkr̥ṣṇage navaratnadāruti beḷagire || 4 ||


sōdara māvana madhureyali maḍ’̔uhida tāyiya sereya biḍisida |


tāyiya sereya biḍisida hayavadana dēvagārutiya beḷagire || 5 ||


muttaideyarellarū muttinārutiyetti hattāvatārada hayavadanage ||


hattāvatārada hayavadana dēvage hosa muttināruti beḷagīre || 6 ||


bhārati rāmana mukhyaprāṇāntargata śrī kr̥ṣṇārpaṇamastu

***



No comments:

Post a Comment