Monday, 19 July 2021

ಧ್ಯಾನಿಸುವ ಸುಜನರಿಳೆಯೊಳೇನು ಧನ್ಯರೊ ankita gururama vittala

 ರಾಗ - : ತಾಳ -


ಧ್ಯಾನಿಸುವ ಸುಜನರಿಳೆಯೊಳೇನು ಧನ್ಯರೊ ll ಪ ll


ಶ್ರೀನಿಧಿ ನಮ್ಮ ನಾರಾಯಣನ ಚರಣಕಮಲವ ll ಅ ಪ ll


ಬ್ರಹ್ಮ ರುದ್ರ ಪ್ರಮುಖ ಸುರರಿಗೇನು ಮೂಲವೊ

ಸಮ್ಮತಿ ವೇದ ಶಾಸ್ತ್ರ ಪುರಾಣವೇನು ಪೇಳ್ವುದೊ ll 1 ll


ಕಾಲಕರ್ಮ ಜೀವ ಮಾಯ ಯಾರಧೀನವೊ

ಮೇಲೆ ಅನುಭವದಲಿ ತಿಳಿವುದದುವೆ ಜ್ಞಾನವೊ ll 2 ll


ಅರ್ಥ ಚತುಷ್ಟಯವ ಕೊಡುವ ಪಾರ್ಥಸಾರಥಿ

ಕರ್ತಾ ಭೋಕ್ತಾ ಗುರುರಾಮವಿಟ್ಠಲ ಮೂರುತಿ ll 3 ll

***


No comments:

Post a Comment