Friday, 30 July 2021

ಪರಾಕೆಂಬೆ ಕರಿಗಿರೀಶ ಪರಾಕೆಂಬೆನೋ ankita gurugovinda vittala


ರಾಗ -  :  ತಾಳ - 


ಪರಾಕೆಂಬೆ ಕರಿಗಿರೀಶ l ಪರಾಕೆಂಬೆನೋ ll ಪ ll


ಪರಾವರನೆ ಅರೀಧರನೆ l

ಹರಾದಿನುತ - ವಿರೋಧಿ ಹತ ll ಅ ಪ ll


ಹತನು ದಿತಿಜ l ಉದರ ದ್ವಿಜ l ಕೃತನು ವಿರಜ 

ನುತ ಕಶಿಪುಜ l ನುತ ಭೂಭುಜ l ಪ್ರತಿರಹಿತಜ ಸ್ತುತ 

ವ್ರತತಿಜ l ಸುತ ಕಮಲಜ l ಕೃತ ಕಾರ್ಯಜ ವಿತತಾಚ್ಯುತ 

ಹಿತ ಭಾಗ್ವತ l ಕ್ರತು ಶತಗತ - ಸಿತ ಫಲದಾತ ll 1 ll


ಮದನತಾತ l ವಿಧಿಯು ಪೋತ l ಸದಮಲಹಿತ ಬುಧ 

ಸುವ್ರಾತ ಸದಯ ಚರಿತ l ಮಧು ಅಹಿತ ಹತ

ಸದಯ ವಿಧೃತ ಹೃದಯ ಶೋಭಿತ 

ಬುಧ ಜನಾಪ್ತ ವದಗೊ ಅಚ್ಯುತ ll 2 ll


ದೇವಜಾಲ l ಕಾವಲೀಲ l ಭಾವ ಶೀಲ

ಭೂವಿಲೋಲ l ಭಾವುಕ ಪಾಲ l ಈವ ವರಗಳ 

ಲಾವುಕ ಜನ l ತೀವರ ಹನ l

ಶ್ರೀವರ ಗುರುಗೋವಿಂದವಿಟ್ಠಲ ll 3 ll

***


No comments:

Post a Comment