Monday, 19 July 2021

ಪ್ರಭು ಪಾಂಡುರಂಗ ವಿಟ್ಠಲ ಅಭಯಪ್ರದಾತಾ ankita govinda vittala

 ಪ್ರಭು ಪಾಂಡುರಂಗ ವಿಟ್ಠಲ l ಅಭಯಪ್ರದಾತಾ ll ಪ ll


ಇಭವರದ ನೀನಾಗಿ l ಪೊರೆಯ ಬೇಕಿವನಾ ll ಅ ಪ ll


ಮರ್ಮಗಳ ನರಿಯದಲೆ l ಕರ್ಮಾನುಭವದೊಳಗೆ

ಪೆರ್ಮೆಯಲಿ ಸಿಲ್ಕಿ ಬಲು l ನೊಂದಿಹನೊ ಬಹಳ 

ಧರ್ಮಕೃದ್ಧರ್ಮಿ ಹರಿ l ಧರ್ಮಸೂಕ್ಷ್ಮವ ತಿಳಿಸಿ

ನಿರ್ಮಮನ ಮಾಡಿವನ l ಕರ್ಮನಾಮಕನೇ ll 1 ll


ಮಧ್ವರಾಯರ ಕರುಣ l ಬದ್ಧ ನಿರುವನು ಈತ

ಸಿದ್ಧಾಂತ ತತ್ವಗಳು l ಬುದ್ಧಿಗೇ ನಿಲುಕೀ 

ಅದ್ವಯನು ನೀನೆಂಬ l ಶುದ್ಧಬುದ್ಧಿಯನಿತ್ತು

ಉದ್ಧಾರಮಾಡೊ ಹರಿ l ಕೃದ್ಧಖಳಹಾರೀ ll 2 ll


ನಾನು ನನ್ನದು ಎಂಬ l ಹೀನಮತಿಯನು ಕಳೆದು

ನೀನು ನೀನೇ ಎಂಬ l ಸುಜ್ಞಾನವಿತ್ತು

ದಾನವಾರಣ್ಯ ಕೃ l ಶಾನು ಶ್ರೀಹರಿಯೇ

ಸಾನುರಾಗದಿ ಪೊರೆಯೊ l ದೀನವತ್ಸಲ್ಲಾ ll 3 ll


ಹರಿ ನಾಮ ವೆಂತೆಂಬೊ l ವಜ್ರಕವಚತೊಡಿಸಿ

ದುರಿತಾಳಿ ಅಟ್ಟುಳಿಯ l ದೂರಗೈ ಹರಿಯೇ 

ಸರುವ ಕಾರ್ಯಗಳಲ್ಲಿ l ಹರಿಯು ಓತಪ್ರೋತ

ನಿರುವ ನೆಂಬುದ ತಿಳಿಸಿ l ಪೊರೆಯ ಬೇಕಿವನಾ ll 4 ll


ಪಾದನಾತ್ಮಕನೆನಿಸಿ l ಪಾವ ಮಾನಿಯ ಪ್ರೀಯ

ಧೀವರನೆ ಶ್ರೀವರನೆ l ಕಾವ ಕರುಣಾಳು

ಗೋವುಗಳ ಕಾವ ಗುರು l ಗೋವಿಂದವಿಟ್ಠಲನೆ

ನೀವೊಲಿಯದಿನ್ನಿಲ್ಲ l ದೇವ ದೇವೇಶಾ ll 5 ll

***


No comments:

Post a Comment