Sunday, 1 August 2021

ಕಂಡು ಧನ್ಯಳಾದೆ ನಾ ಪಾಂಡುರಂಗವಿಠಲನಾ ankita gopalakrishna vittala

ಕಂಡು ಧನ್ಯಳಾದೆ ನಾ

ಪಾಂಡುರಂಗವಿಠಲನಾ ಪ.


ಕಂಡು ಧನ್ಯಳಾದೆ ಹರಿಯ

ಪುಂಡರೀಕ ಪದದಿ ಎನ್ನ

ಮಂಡೆ ಇಟ್ಟು ವಂದಿಸುತಲಿ

ಪುಂಡರೀಕ ವರದ ನಾ ಅ.

ದೂರದಿಂದ ಬಂದು ಹರಿಯ

ಸೇರಿವಂದಿಸುತಲಿ ಈಗ

ಹಾರಹಾಕಿ ನಮಿಸಿ ಮನೋ

ಹಾರ ನೋಡಿ ದಣಿದೆನಿಂದು 1

ಗುರುಗಳಂತರ್ಯಾಮಿ ಹರಿಯ

ಇರಿಸಿ ಎನ್ನ ಬಿಂಬ ಸಹಿತ

ಸ್ಮರಿಸಿ ಚಿಂತಿಸಿ ವಿಠಲನಲ್ಲಿ

ಕರುಣಮೂರ್ತಿ ಪಾಂಡುರಂಗನ 2

ಗುರುಪುರಂದರ ಸ್ತಂಭ ಕಂಡೆ

ವರದ ಚಂದ್ರಭಾಗ ತೀರದಿ

ಚರಣ ಇಟ್ಟಿಗೆಯಲಿ ಇಟ್ಟು

ಸಿರಿ ಗೋಪಾಲಕೃಷ್ಣವಿಠಲನ 3

****


No comments:

Post a Comment