ಈಗಲೂ ನೀ ಕಾಯ ಬೇಕೋ ಇಂದಿರೆ ರಮಣ
ಆಗಲೂ ನೀ ಕಾಯಬೇಕೋ ಅರವಿಂದ ನಯನ ಪ.
ಈಗ ಈ ಜನ್ಮದಲ್ಲಿ
ಆಗ ಭವ ದಾಟುವಲ್ಲಿ ಅ.ಪ.
ನಾನಾ ಜನ್ಮದಲಿ ತಿರುಗಿ ಮಾನವ ನಾನಾಗಿ ಪುಟ್ಟಿ
ಶ್ವಾನ ಸೂಕರನಂತೆ ಕಾಲ ಕಳೆದು
ದೀನನಾಗೀಗ ಇನ್ನು ನೀನೆ ಗತಿಯೋ ಎನಲು
ಶ್ರೀನಾಥ ನಿನ್ನ ನಾಮ ಎನ್ನ ನಾಲಗೆಯಲಿ ನುಡಿಸಿ 1
ಮಾಯಾಪತಿಯೆ ಕೇಳೋ ಆ ಯಮಭಟರು ಎಳೆದು
ನೋಯಿಸುತ್ತಿರಲು ಎನ್ನ ಬಾಯಬಿಡುತಲಿ
ತೋಯಜಾಂಬಕನೆ ಎನ್ನ ಕಾಯೋ ಎಂದೆನುತ ಒದರೆ
ಆ ಯಮಬಾಧೆ ಬಿಡಿಸಿ ಸಾಯದಾ ಸೌಖ್ಯವನಿತ್ತು 2
ವೈಷ್ಣವ ಜನ್ಮವ ನೀನು ಇತ್ತುದು ಪಿರಿಯದಲ್ಲೊ
ವೈಷ್ಣವ e್ಞÁನವ ನೀಡೊ ಸುಭಕ್ತಿ ಸಹಿತ
ಕೃಷ್ಣಮೂರುತಿಯೆ ನೀನು ಅಷ್ಟದಳÀ ಪದ್ಮದಲಿ ನಿಂತು
ಉಷ್ಣ ಶೀತ ದ್ವಂದ್ವ ಸಹಿಷ್ಣುತೆ ವಿರಕ್ತಿಯೊಡನೆ 3
ತ್ರಿಗುಣದಿಂದ ಬದ್ಧವಾದ ವಿಗಡದೇಹ ತೊಲಗುವಂತೆ
ಬಗೆಬಗೆಯ ನಿನ್ನ ಲೀಲೆ ಅಂತರದಿ ತಿಳಿಸಿ
ಜಗದಾವರಣ ತೊಲಗುವಾಗ ಬಗೆಬಗೆಯ ಲಯದ ಚಿಂತೆ
ತಗಲಿ ಮನಕೆ ನಿನ್ನ ಮಹಿಮೆ ಆನಂದವಾಗುವಂತೆ 4
ಗೋಪಾಲಕೃಷ್ಣವಿಠಲ ನೀ ಪರದೈವನೆನಿಸಿ
ಆಪಾದಮೌಳಿ ನಿನ್ನ ರೂಪವ ತೋರಿ
ಅಪವರ್ಗದಲಿ ಎನಗೆ ಶ್ರೀಪಾದಾಸ್ಥಾನವಿತ್ತು
ಈ ಪರಿಯಿಂದ ಉಭಯ ವ್ಯಾಪಾರದಲ್ಲಿ ಹರಿಯೆ 5
***
No comments:
Post a Comment