Monday, 21 June 2021

ಬಿನ್ನಪವ ಮಾಡುವೆ vasudeva vittala ankita suladi ಪ್ರಾರ್ಥನಾ ಸುಳಾದಿ BINNAPAVA MAADUVE PRARTHANA SULADI

Audio by Mrs. Nandini Sripad


ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ  (ವಾಸುದೇವವಿಟ್ಠಲ ಅಂಕಿತ) 


 ಪ್ರಾರ್ಥನಾ ಸುಳಾದಿ 


 ರಾಗ ಹಿಂದೋಳ 


 ಧ್ರುವತಾಳ 


ಬಿನ್ನಪವ ಮಾಡುವೆ ಯಜ್ಞ ಶ್ರೀನಿವಾಸ

ನಿನ್ನ ಶರಣಗೆ ಹಲವು ಹಂಬಲ ಸಲ್ಲ

ಇನ್ನು ತಾನೊಮ್ಮೊಮ್ಮೆ ಬಯಸಿದೇ ಭಕುತಿಗೆ

ಅನ್ಯಥಾವಾಗದಂತೆ ಬಯಸಿಕೊಳಲಿ ಮನ

ಚಿನ್ನರ್ಗೆ ಫಲವಿತ್ತೆ ಓದು ಪೇಳುವ ತೆರ

ಚನ್ನಾಗಿ ನೀನೆವೇ ಫಲವನ್ನು ವೊಲಿದಿತ್ತ

ಮನ್ನೆ ವಾಕು ಆದರಿಸೊ ವಾಸುದೇವವಿಟ್ಠಲ ॥ 1 ॥ 


 ಮಟ್ಟತಾಳ 


ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ

ದಿಂಡೇರ ಕೈಯಿಂದ ನೋಯಗೊಳಿಸದಿರೊ

ಅಂಡಜವಾಹನ ಬಿರುದು ನಿನ್ನದು ನೋಡು

ಕೊಂಡಾಡುವೆ ವಾಸುದೇವವಿಟ್ಠಲರೇಯಾ 

ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ ॥ 2 ॥ 


 ತ್ರಿವಿಡಿತಾಳ 


ಆವಾವ ಆಶ್ರಮವನ್ನು ವೋಲಿದಿತ್ತು ನೀನೇವೆ

ಆವಾವ ಬಗೆಯಲ್ಲಿ ಸಾಧನ ಮಾಡಿಸೊ

ಆವಾವ ಬಗೆಯಲ್ಲಿ ಬಲ್ಲ ಸರ್ವಜ್ಞನೆ

ಆವಾವ ವಿಧದಿಂದ ಬಿನ್ನೈಪದೇನೆಲೊ

ಕಾವ ಕರುಣಿ ವಾಸುದೇವವಿಟ್ಠಲರೇಯಾ 

ಆವಾವ ಬಗೆಗಳ ಬಿನ್ನೈಪದೇನಯ್ಯಾ॥ 3 ॥ 


 ಅಟ್ಟತಾಳ 


ಕೊಡಗೈಯ್ಯ ದೊರೆ ಎಂದು ನಂಬಿಲ್ಲಿಗೆ ಬಂದ

ಬಡನಡವಳ ನೀನು ಕಡೆಗೆ ನೋಡುವರೇನೊ

ತೊಡರುಗಳಿದ್ದರು ಬಿಡಿಸುವ ಬಗೆ ಬಲ್ಲ್ಯೋ

ತಡೆಕೊಡುವ ದೋಷ ಒಡೆಯ ನಿನ್ನೆದುರಿಗೆ

ಅಡರಿ ನಿಲ್ಲುವದುಂಟೆ ಆವಾವ ಕಾಲಕ್ಕೆ

ಪೊಡವಿಯ ತಳದಲ್ಲಿ ಪುಟ್ಟಿ ಸಾಧನಗಳು

ಪಡಿಯಲಿಬೇಕೆಂಬ ಭಕುತ ಜನರುಗಳು

ಕಡಿಮೇನೊ ಅವರೊಶ ಮಾಡಿಸೊ ಭಕ್ತರ

ಭಿಡಿಯ ಬಿರುದಿನ ವಾಸುದೇವವಿಟ್ಠಲ ॥ 4 ॥ 


 ಆದಿತಾಳ 


ಒಂದೊಂದು ಕೊಡಲು ಮತ್ತೊಂದು ಕೊಡಲಿ ಎಂದು

ಸಂದಣಿಸುತಲಿವ ವಿಷಯಗಳೊಂದು

ತಂದೆ ತಡಮಾಡಬೇಡವೊ ಅದರಿಂದ

ಒಂದೆ ಸಾಧನ ಬಹಳಾಗುವದೊ

ಇಂದಿರೇಶ ಬಯಸಿದೆ ನಿನ್ನಲ್ಲಿ

ಬಂದು ಒದಗಿಸೊ ವಾಸುದೇವವಿಟ್ಠಲ ॥ 5 ॥ 


 ಜತೆ 


ಕರುಣಾಳು ಸ್ವಾತಂತ್ರ ವಾಸುದೇವವಿಟ್ಠಲ 

ಸರ್ವಜ್ಞ ನಿನಗೆ ಮೊರೆ ಇಡೊದಿದೆ ಚಿತ್ರಾ ॥

****


No comments:

Post a Comment