Tuesday, 1 June 2021

ರಂಗನಾಥ ಎನ್ನ ಕಣ್ಗಾಳೆದುರು ನಿಂತಿದಂತಿದೆ ankita venkatakrishna

by yadugiriyamma  

 ಶ್ರೀರಂಗ

ರಂಗನಾಥ ಎನ್ನ ಕಣ್ಗಾಳೆದುರು ನಿಂತಿದಂತಿದೆ ಪ


ವಜ್ರಮಾಣಿಕದ ಕಿರೀಟವನಿಟ್ಟು

ಪ್ರಜ್ಜಲಿಸುವ ಹಣೆಯ ಕಸ್ತೂರಿಬಟ್ಟು

ವಜ್ರದ ಕರ್ಣಕುಂಡಲ ಅಳವಟ್ಟು

ಸಾಜದ ಅಧರಚಂದವಿನ್ನೆಷ್ಟು 1


ಕಬ್ಬುಬಿಲ್ಲನು ಪೋಲ್ವ ಪುಬ್ಬಿನ ಚಂದ

ಅಬ್ಜದಂತೆಸೆವಾ ನಯನದಾನಂದ

ಕುಸುಮವ ಪೋಲುವ ನಾಸಿಕದಂದ

ಕನ್ನಡಿಯಂತೆ ಕದಪು ಹೊಳೆಯುತ್ತ ಬಂದ 2


ಕಂಠದೊಳಗೆ ಇಟ್ಟ ಕೌಸ್ತುಭಮಣಿಯು

ಎಂಟು ಪದಕಗಳನಳವಡಿಸಿದ ಅಣಿಯು

ಗಂಟೆ ಗೆಜ್ಜೆವುಡಿದಾರದ ಫಣಿಯು

ಸಂಧ್ಯರಾಗವ ಪೋಲ್ವ ಪೀತಾಂಬರದಣಿಯು 3


ಶಂಖಚಕ್ರವು ಗದೆ ಆಭಯಹಸ್ತಗಳು

ಪಂಕಜಮುಖಿ ಇರುವ ವಕ್ಷಸ್ಥಳವು

ಶಂಕರನಪಿತನ ಪಡೆದ ನಾಭಿದಳವು

ಶಂಕೆ ಇಲ್ಲದ ಕಣಕಾಲಿನ ಹೊಳವು 4


ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು

ಕುಂದಣದ ಪಾಡಗವನಳವಟ್ಟು

ಚಂದದಿಂ ವಜ್ರದಾವುಗೆಯ ಮೆಟ್ಟು ತ

[ಬಂದ] ಗಂಗೆ ಪಡೆದನಖಾಪಂಕ್ತಿಗಳೆಷ್ಟು5


ವಜ್ರಾಂಕುಶ ಧ್ವಜರೇಖೆಗಳಿಂದ

ಪದ್ಮಪಾದದ ಕೆಂಪುಗಳು ಬಹುಚಂದ

ಹೊದ್ದಿದ ಭಕ್ತರ ಪಾಪವನೆಲ್ಲ ಒದ್ದು

ಮುಕ್ತಿಯನೀವ ಮುದ್ದು ಶ್ರೀ ವೆಂಕಟಕೃಷ್ಣ 6

****


No comments:

Post a Comment