Tuesday, 1 June 2021

ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಜ್ಯೇಷ್ಠಾಭಿಷೇಕ ಗೀತೆ ankita venkatakrishna

 by yadugiriyamma 

ಜ್ಯೇಷ್ಠಾಭಿಷೇಕ ಗೀತೆ

ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಸೃಷ್ಟಿಯೊಳಾಶ್ಚರ್ಯವಾ ಪ.

[ಒಪ್ಪುವ] ಮಿಥುನಮಾಸದ ಶುಕ್ಲಪಕ್ಷ ಚತುರ್ದಶಿಯಲ್ಲಿ

ವಿಪ್ರರು ಕೂಡಿ ಸಹ್ಯೋದ್ಭವೆಯನ್ನು ತರುವೆವೆಂದೆನುತಲೆ

ವಿಪ್ರರು ಪೋದ ವಿಚಿತ್ರ[ವ] ನೋಡಿದೆ 1

ಅಂದು ಗಜೇಂದ್ರನ ತಂದು ಸಿಂಗಾರ ಮಾಡಿ

ಕುಂದಣದ ಕೊಡವ ಕುಂಭಸ್ಥಳದೊಳಿಟ್ಟು

ಕುಂದಣದ ಛತ್ರಿ ಚಾಮರ ಬೀಸುತ್ತ ವಿಪ್ರರು ಬರುವುದ 2

ವೇದಘೋಷಗಳಿಂದ ವಿಪ್ರರು ಕೊಡಗಳ ವಿ

ನೋದದಿಂದಲೆ ಪೊತ್ತು ತಾ[ಳ] ತಮ್ಮಟೆ ಭೇರಿ ನಾನಾ

ವಾದ್ಯಂಗಳ ಮುಂದೆ ರಜತದಕೊಡ ಬರುವ ವೈಭೋಗವ 3

ಕುಶಲದಿಂದಲೆ ಕರಿ ಕೊಡವನ್ನು ಇಳಿಸಲು

ಅಸಮಾನ [2ನಿ2]ರಿಗಳ ಬಿಚ್ಚಿ ಹೊಸಬಟ್ಟೆಗಳ ಹಾಸಿ

ಕುಶಲದಿಂದಲೆ ಹೊಲೆದು ಪೊಸದಾಗಿ ಕಟ್ಟುವತಿಶಯ[ವ] 4

ಗರ್ಭಗೃಹವು ಗಾಯಿತ್ರಿ ಮಂಟಪವನ್ನು

ಶುಭ್ರವಾಗಿಯೆ ತೊಳೆದು ಘಮಘಮಿಸುವ ದಿವ್ಯ ಪರಿಮಳ

ವು ಬರುವಂಥ ಗಂಧÀವ ತಳಿದರು ಅಂದು ಆಲಯಕ್ಕೆಲ್ಲ 5

ಭಕ್ತರಿಗೆ ತೊಟ್ಟಕವಚವ ಕಳೆದು ಅಭಯ ಹಸ್ತ ಪಾದವ

ನಿತ್ತು ಕಸ್ತೂರಿ ಕಮ್ಮೆಣ್ಣೆ ಒತ್ತಿ ಸಂಭ್ರಮದಿಂದ

ಮಿತ್ರಸಹಿತ ನಿಂದ ಭಕ್ತವತ್ಸಲ ರಂಗ 6

ಛಂದದಿ ಇಕ್ಷುರಸವು ಚೂತ ಕದಲಿ ರಸಂಗಳು

ಮಧು ದಧಿ ತಿಂತ್ರಿಣಿ ನಿಂಬೆರಸ ಕ್ಷೀರ ಘೃತಗಳಿಂದ ಆ

ನಂದದಿ ಯೆರೆದರು ಇಂದಿರೆರಮಣಗೆ 7

ಕಸ್ತೂರಿ ಕರ್ಪೂರ ಕೇಸರಿ ಪುನಗಿನ ತೈಲವನೆ ತೆಗೆದು

ವಾಸುಕಿಶಯನಗೆ ಲೇಪವನು ಮಾಡಿ ಸ

ಹಸ್ರಕೊಡದ ಅಭಿಷೇಕವ ಮಾಡಿದರು 8

ಪಟ್ಟುಪೀತಾಂಬರವನುಟ್ಟು ಶ್ರೀರಂಗನು ಕಳೆದ ಕವಚ

ತೊಟ್ಟು ಹತ್ತುಸಾವಿರಸೇರಿನ ಅಕ್ಕಿ ಅನ್ನವ

ನಿಟ್ಟು ವಿಪ್ರರು ಸುರಿದರು ವಿಸ್ತಾರವಾಗಿಯೆ9

ಛಂದದಿಂದಲೆ ದಧಿ ಚೂತ ಕದಳಿ ಫಲದಿಂದ ನೈ

ವೇದ್ಯ ಮಾಡಿ ಆನಂದದಿಂದುಂಡೆಯು ಮಾಡಿ ಭಕ್ತ

[ವೃಂದಕ್ಕೆ] ಕರೆಕರೆದು ಕೊಡುವ ಪರಿಯ ನಾ 10

ರಂಗನಾಯಕಿ ಪಟ್ಟದರಸಿ [ವೆರಸಿ]ನರಹರಿ ಚಕ್ರಮೂರುತಿಗೆ

ಆಗ ಕಲ್ಪೋಕ್ತದಿಂದಭಿಷೇಕವ ಮಾಡೆ ಕರ್ಪೂರ ತೈಲವ [ಲೇ

ಸಾಗಿ]ಹಚ್ಚಿ ಮಲಗಿದ ವೆಂಕಟರಂಗ[ನ] 11

***


No comments:

Post a Comment