by yadugiriyamma
ತಿರುಪತಿ
ಶೇಷಾದ್ರಿವಾಸ ಶ್ರೀನಿವಾಸ ಪ
ಶೇಷಾದ್ರಿವಾಸ ವಾಸುಕಿಶಯನನೆ
ಕೇಶಿಸಂಹಾರಕನೆ ಕ್ಲೇಶಭವದೂರನೆ ಅ.ಪ
ನಂಬಿದೆ ನಿನ್ನ ಪಾದವ ಬಂದು ಫಣಿಶಯನನೆ
ಅಂಬುಜನಾಭ ಪಾಪವಿನಾಶನೆ ಕೌಸ್ತು
ಭಾಭರಣನೇ ಕರುಣಾಸಾಗರನೆ 1
ಪಾಂಡವಪಕ್ಷ ಶ್ರೀನಿವಾಸ ದೈತ್ಯಕುಲಶಿಕ್ಷ
ಯಾದವರಕ್ಷ ಯದುಕುಲಪಕ್ಷನೆ
ಸಜ್ಜನ ರಕ್ಷನೆ ಕರುಣಾಕಟಾಕ್ಷನೆ 2
ಭವಭಯಭಂಗ ಶ್ರೀನಿವಾಸ ಕರುಣಾಪಾಂಗ
ಗರುಡತುರಂಗನೆ ನೀಲಮೇಘಾಂಗನೆ
ಸುಗ್ರೀವಸಂಗನೆ ವಾಲಿ ವಿಭಂಗನೆ 3
ಕ್ಷೀರಾಬ್ಧಿಯಿಂದ ನಾರಾಯಣ ಭರದಿ ತಾ ಬಂದ
ಕಮಲದೊಳಗೆ ಬಂದ ರಮಣೀಸಹಿತ ತಾ ನಿಂದ
ಭಕ್ತರ ಪೊರೆಯುತ ನಿಂದ ಗೋವಿಂದ 4
ಗರುಡವಾಹನನೆ ಶ್ರೀನಿವಾಸ ಪರಮಪಾವನನೆ
ಪಂಕಜನಯನನೆ ಪದ್ಮಿನೀ ಅರಸನೆ
ಶ್ರೀನಿವಾಸನೆ ಎನ್ನ ರಕ್ಷಿಸೊ ನೀನು 5
****
No comments:
Post a Comment