Tuesday, 1 June 2021

ಧನುರ್ಮಾಸದ ಸೇವೆಯ ನೋಡುವ ಬನ್ನಿ ಧನುರ್ಮಾಸದ ಸೇವೆಯ ಗೀತೆ ankita venkatakrishna

by yadugiriyamma  ankita ಶ್ರೀನಿವಾಸ ರಂಗ / venkatakrishna

ಧನುರ್ಮಾಸದ ಸೇವೆಯ ಗೀತೆ

ಧನುರ್ಮಾಸದ ಸೇವೆಯ ನೋಡುವ ಬನ್ನಿ

ದಾನವಾಂತಕ ರಂಗನ ಪ.


ಶ್ರೇಯೋನಿಧಿಗಳಿಗೆರಗಿ

ಶ್ರೀವೇದಾಂತ ಗುರುಗಳಿಗೆ ವಂದಿಸಿ

ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ

ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ 1

ಮಾರ್ಗಶಿರ ಮಾಸದಲಿ

ಮಹಾನುಭಾವ ಶ್ರೀರಂಗನಾಥನಿಗೆ

ಮಹದುತ್ಸವವನ್ನು ನಡೆಸಬೇಕೆನುತಲೆ

ಮಹಾಪುರುಷರು ಸಂಕಲ್ಪವ ಮಾಡಿದರು 2

ಕೇಶವ ಮಾಸದಲಿ ಎದ್ದು

ದಾಸರು ಮೂರನೆ ಜಾವದಲಿ

ಭೂಸುರರಿಗೆ ಎಚ್ಚರವಾಗಬೇಕೆಂದು ಬಾ

ರೀಸಿದರು ಭೇರಿ ದುಂದುಭಿ ವಾದ್ಯಗಳ 3

ಕನಕಿ ಸುಜೋತಿ ಹೇಮಾವತಿಯ

ಕಪಿಲೆ ಕಾವೇರಿ ತೀರ್ಥದಲಿ

ಸ್ನಾನವ ಮಾಡಿ ತೀರ್ಥವ ತಂದು ನೇಮದಿ

ನೀಲವರ್ಣನಿಗಭಿಷೇಕವ ಮಾಡಿದರು 4

ಛಳಿಗೆ ಕುಲಾವಿಯನಿಟ್ಟು

ಶಾಲುಗಳ ಹೊದಿಸಿ ನಳಿನನಾಭ ರಂಗಗೆ

ಪರಿಪರಿ ಪುಷ್ಪದ ಸರಗಳ ಧರಿಸಿಯೆ

ಶ್ರೀಮೂರ್ತಿಯ ಸರವನು ಧರಿಸಿದರಾಗ 5

ತಾಪಹರವಾದ ಸೂಕ್ಷ್ಮದ ದಿವ್ಯ

ಧೂಪವನು ಬೆಳಗಿದರು

ವ್ಯಾಪಿಸುವ ತಿಮಿರವ ಪರಿಹರಿಸಿ ರಂಜಿಸುವ

ದೀಪವ ಬೆಳಗಿದರು ಶ್ರೀಪತಿಗೆ 6

ಋಗ್ವೇದ ಯಜುರ್ವೇದವು ಸಾ

ಮವೇದ ಅಥರ್ವಣವೇದಂಗಳು

ದ್ರಾವಿಡವೇದ ಪುರಾಣಶಾಸ್ತ್ರಗಳನು ಬಾಗಿ

ಲಾ ವೊಳಗೆ ನಿಂತು ಭಕ್ತರು ಪೇಳಿದರು 7

ವಾರಾಂಗನೆಯರಾಗ ವೈಯ್ಯಾರದಿಂದ

ಆರತಿಗಳನೆ ತಂದು

ವಾರಿಜನಾಭಗೆ ನೇಮದಿಂದಲೆ ಗುಂ

ಭಾರತಿಗಳನೆತ್ತಿ ನೈವೇದ್ಯವ ತಂದರು 8

ಮುದ್ಗಾನ್ನ ಘಮಘಮಿಸುವ ಪಾಯಸ

ದಧ್ಯೋದನಗಳು ಪರಿಪರಿ ಶಾಕಪಾಕವು

ಆ ದಿವ್ಯ ಭಕ್ಷ್ಯನೈವೇದ್ಯವ ಪರಮಪುರುಷಗೆ

[ಆದ್ಯರು] ಆರೋಗಣೆ ಮಾಡಿದರು 9

ಕಳಿಯಡಿಕೆ ಬಿಳಿಯೆಲೆಯು ಕರ್ಪೂರದ

ಗುಳಿಗೆಗಳನ್ನೆ ತಂದು ಸೃಷ್ಟಿಗೀಶ್ವರಗೆ

ಒಳ್ಳೆ ತಾಂಬೂಲವ ಸಮರ್ಪಿಸಿ

ಹಿಟ್ಟಿನ ಮಂಗಳಾರತಿಯನೆತ್ತಿದರಾಗ 10

ಆ ಮಹಾ ಶ್ರೀನಿವಾಸ ರಂಗ ನೈವೇದ್ಯವ

ಶ್ರೀಮಧ್ರಾಮಾನುಜರ ಮತದಿ

ನೇಮದಲಿ ವಿನಿಯೋಗವ ಮಾಡಲು ಪಾವ

ನಾಮಾದೆವೆಂದೆನುತ ಪೋದರು ಎಲ್ಲ 11

*****

 ಧನುಮಾ೯ಸದ ಸೇವೆಯ ನೋಡುವ ಬನ್ನಿ

   .  ದಾನವಾಂತಕ ರಂಗನ..ಪ☘️

     🌷ಶ್ರೇಯೋನಿಧಿಗಳಿಗೆರಗಿ

ಶ್ರೀ ವೇದಾಂತ ಗುರುಗಳಿಗೆ ವಂದಿಸಿ

ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ

ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ..1☘️

   .  🌷ಮಾಗ೯ಶಿರ ಮಾಸದಲಿ

ಮಹಾನುಭಾವ ಶ್ರೀರಂಗನಾಥನಿಗೆ

ಮಹದುತ್ಸವವನ್ನು ನಡೆಸ ಬೇಕೆನುತಲೆ

ಮಹಾ ಪುರುಷರು ಸಂಕಲ್ಪವ ಮಾಡಿದರು..2☘️

🌷ಕೇಶವ ಮಾಸದಲಿ ಎದ್ದು

  .  ದಾಸರು ಮೂರನೆ ಜಾವದಲಿ

ಭೂಸುರರಿಗೆ ಎಚ್ಚರವಾಗಬೇಕೆಂದು 

ಬಾರೀಸಿದರು ಭೇರಿ ದುಂದುಭಿ ವಾದ್ಯಗಳ..3☘️

🌷ಕನಕಿ ಸುಜೋತಿ ಹೇಮಾವತಿಯ

    ಕಪಿಲೆ ಕಾವೇರಿ ತೀಥ೯ದಲಿ

ಸ್ನಾನವ ಮಾಡಿ ತೀಥ೯ವ ತಂದು ನೇಮದಿ

ನೀಲವಣ೯ನಿಗಭಿಷೇಕವ ಮಾಡಿದರು..4☘️

      🌷ಛಳಿಗೆ ಕುಲಾವಿಯನಿಟ್ಟು

ಶಾಲುಗಳ ಹೊದಿಸಿ ನಳಿನನಾಭ ರಂಗಗೆ

ಪರಿಪರಿ ಪುಷ್ಪದ ಸರಗಳ ಧರಿಸಿಯೆ

ಶ್ರೀ ಮೂತಿ೯ಯ ಸರವನು ಧರಿಸಿದರಾಗ..5☘️

🌷ತಾಪಹರವಾದ ಸೂಕ್ಷ್ಮದ ದಿವ್ಯ

     ಧೂಪವನು ಬೆಳಗಿದರು

ವ್ಯಾಸಿಸುವ ತಿಮಿರವ ಪರಿಹರಿಸಿ ರಂಜಿಸುವ

ದೀಪವ ಬೆಳಗಿದರು ಶ್ರೀಪತಿಗೆ..6☘️

🌷ಋಗ್ವೇದ ಯಜುವೇ೯ದವು

ಸಾಮವೇದ ಅಥವ೯ಣ ವೇದಂಗಳು

ದ್ರಾವಿಡವೇದ ಪುರಾಣ ಶಾಸ್ತ್ರಗಳನು ಬಾಗಿ

ಲಾವೊಳಗೆ ನಿಂತು ಭಕ್ತರು ಪೇಳಿದರು..7☘️

🌷ವಾರಾಂಗನೆಯರಾಗ ವೈಯಾರದಿಂದ

  .   ..ಆರತಿಗಳನೆ ತಂದು

ವಾರಿಜನಾಭಗೆ ನೇಮದಿಂದಲೆ ಗುಂ

ಭಾರತಿಗಳನೆತ್ತಿ ನೈವೇದ್ಯವ ತಂದರು..8☘️

🌷ಮುದ್ಗಾನ್ನ ಘಮ ಘಮಿಸುವ ಪಾಯಸ

ದಧ್ಯೋದನಗಳು ಪರಿಪರಿ ಶಾಕಪಾಕವು

ಆ ದಿವ್ಯ ಭಕ್ಷ್ಯ ನೈವೇದ್ಯವ ಪರಮ ಪುರುಷಗೆ

[ಆದ್ಯರು]ಆರೋಗಣೆ ಮಾಡಿದರು..9☘️

🌷ಕಳಿಯಡಿಕೆ ಬಿಳಿಯೆಲೆಯು ಕಪೂ೯ರದ

ಗುಳಿಗೆಗಳನ್ನೆ ತಂದು ಸೃಷ್ಟಿಗೀಶ್ವರಗೆ

ಒಳ್ಳೆ ತಾಂಬೂಲವ ಸಮಪಿ೯ಸಿ

ಹಿಟ್ಟಿನ ಮಂಗಳಾರತಿಯನೆತ್ತಿದರಾಗ..10☘️

🌷ಆಮಹಾ  ಶ್ರೀನಿವಾಸ ರಂಗ ನೈವೇದ್ಯವ

ಶ್ರೀಮಧ್ರಾಮಾನುಜರ ಮತದಿ

ನೇಮದಲಿ ವಿನಿಯೋಗವ ಮಾಡಲು ಪಾವ

ನಾಮದೆವೆಂದೆನುತ ಪೋದರು ಎಲ್ಲ..11

***


No comments:

Post a Comment