Tuesday, 1 June 2021

ಅಭಯವನಿತ್ತು ಕಾಯೊ ರಂಗಯ್ಯ ankita venkatakrishna

 by yadugiriyamma

ಅಭಯವನಿತ್ತು ಕಾಯೊ ರಂಗಯ್ಯ ನಿನ್ನಡಿಗೆರಗುವೆನು ನಾನು ಪ


ಭಾಷ್ಯಕಾರರಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ
ಪತಿಯ ಪಾದಾರವಿಂದಕೆ ನಮಸ್ಕರಿಸಿ
ಲಕ್ಷ್ಮೀಪತಿ ನಿಮ್ಮ ಕರಗಳ ಸ್ತುತಿಸಿ ಬೇಡುವೆ ನಾನು 1
ಮತ್ಸ್ಯಾವತಾರನಾಗಿ ವಾರಿಧಿಯೊಳಗಿರ್ಪ ದೈತ್ಯನ ಕೊಂದು
ಹೆಚ್ಚಿನ ವೇದವ ಅಜನಿಗೆ ತಂದಿತ್ತೆ
ಭಕ್ತವತ್ಸಲ ನಿಮ್ಮ ಕರಕಮಲಗಳಿಂದ 2
ದೇವದೈತ್ಯರ ಮಧ್ಯದೀ ವಾರಿಧಿಯನ್ನು ವೇಗದಿಂದಲೆ ಮಥಿಸೇ
ಆವಸುರರು ಅಪಹರಿಸಿದ ಅಮೃತವ ಸಾಧುಜನಗಿತ್ತ
ಆ ವಿನೋದದ ಕರಗಳಿಂದ 3
ಕ್ರೋಢರೂಪವ ಧರಿಸಿ ಹಿರಣ್ಯಾಕ್ಷನ ಕೋರೆಯಿಂದಲೆ ಕೊಂದು
ಧಾರುಣಿಯನು ತಂದು ಆದಿಮಾನವಗಿತ್ತ
ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ 4
ತರಳನ ನುಡಿಯ ಕೇಳಿ ಭರದಿ ಕಂಭದಲಿ ಬಂದು
ಕರುಳ ಬಗೆದ ವನಮಾಲೆಯ ಧರಿಸಿದೆ
ಶ್ರೀಪರಮಪಾವನ ನಿಮ್ಮ ಕರುಣಹಸ್ತಗಳಿಂದ 5
ಪುಟ್ಟ ಬ್ರಾಹ್ಮಣನಾಗಿ ಕಾಶ್ಯಪನುದರದಲಿ ಜನಿಸಿ ಬಂದು
ತಟ್ಟನೆ ಯಜ್ಞಶಾಲೆಗೆ ಬಂದು ದಾನವ
ಪುಟ್ಟ ಕರಗಳಿಂದ ಅರ್ತಿಯಲಿ ಬೇಡಿದ 6
ಅಂದು ಕ್ಷತ್ರಿಯರ ಕುಲವ ಕೊಡಲಿ ಪಿಡಿದುದ್ದಂಡ
ದಿಂದಲಿ ಕಡಿದು ತಂದೆಯ ನುಡಿ ಕೇಳಿ ತಾಯಿ ಶಿರವನರಿದೆ
ಇಂದಿರಾಪತಿ ನಿಮ್ಮ ಆನಂದ ಕರದಿಂದ 7
ದಶರಥನುದರದಲಿ ಜನಿಸಿ ಬಂದು ಅಸುರರ ಸಂಹರಿಸಿ
ಶಶಿಮುಖಿ ಸೀತೆಗೋಸ್ಕರ ಧನುವನು ಮುರಿದ
ಅಸಮಸಾಹಸ ನಿಮ್ಮ ಕುಶಲಹಸ್ತಗಳಿಂದ 8
[ಆ] ರೋಹಿಣೀ ಗರ್ಭದಲಿ ಜನಿಸಿ ರೇವತಿ ರಮಣನಾಗಿ
ಘೋರ ಪ್ರಳಯಸುರನ ಸಂಹರಿಸಿದೆ
ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ 9
ಮಧುರೆಯೊಳಗೆ ಜನಿಸಿ ಗೋಕುಲಕೈತಂದು ಲೀಲೆಯ ತೋರಿ
ಮುದದಿಂದ ಪಾಲಬೆಣ್ಣೆ ಕದ್ದು ಗೋಪಿಯರಲ್ಲಿ ಪಿ
ಡಿದೆಳೆದೆ ಉಡುರಾಜನನು ಶ್ರೀಕರದೊಳು 10
ಪತಿವ್ರತೆಯ ವ್ರತವ ಭಂಗವ ಮಾಡಿ ಚಪಳಚಾರನಾಗಿ
ಅತಿಶಯವಾದ ರಾಕ್ಷಸರ ಸಂಹರಿಸಿದೆ
ಪೃಥವಿ ಪಾಲಿಪ ನಿಮ್ಮ ಚತುರಹಸ್ತಗಳಿಂದ 11
ಕಲ್ಯ್ಕಾವತಾರನಾಗಿ ಕುದುರೆ ಏರಿ ಸಂಹರಿಸುತಲೆ ಬಹು
ಬಲನಾದಂಥ ಕಲಿಯ ನಿಗ್ರಹಿಸಿದ ನಿಮ್ಮಕ
ಮಲಕರಗಳಿಂದ ದೇವ ಪರಮಪುರುಷ 12
ಕಂದ ಧ್ರುವ ತಾನಡವಿಯಲಿ ನಿಂದು ತಪ ಮಾಡಲು
ಚಂದದಿ ಮಾಡಲು ಬಂದು ಸೇವೆಯನಿತ್ತು ಮತಿಗಾಗಿ
[ಅಂದು] ಶಂಖವನೊತ್ತಿದ ಕರದೊಳು 13
ಅಂದು ಮಕರಿ ಕಾಲ ಪಿಡಿಯೆ ಗಜೇಂದ್ರ ನಿಮ್ಮ ಸ್ತುತಿಸೆ ಚಕ್ರ
ನಿಂದಲೇ ನಕ್ರನ ಕೊಂದು ಬೇಗದಿ ಕರಿಯ ರಕ್ಷಿಸ
ಬಂದ ಕರುಣಹಸ್ತಗಳಿಂದ 14
ಅಂದು ಸುಧಾಮ ತಾನು ಶ್ರೀಹರಿಯ ಮಂದಿರಕೆ ಬರಲು
ಚಂದದಿಂದಲೆ ಆತಿಥ್ಯ ಮಾಡಿ ಅವ
ತಂದ ಅವಲಕ್ಕಿಯ ಕೊಂಡ ಕರಗಳಿಂದ 15
ದುರುಳ ದುಶ್ಯಾಸನ ಸಭೆಯೊಳು ದ್ರೌಪದಿಯ ಸೀರೆಯೆಳೆಯು
ತಿರುವಾಗ ಹಾ ಕೃಷ್ಣ ದ್ವಾರಕಾವಾಸ ಯೆಂದು
ಮೊರೆಯಿಡೆ ಕೇಳಿ ಅಕ್ಷಯವೆನುತ ನೆಚ್ಚವನೆಚ್ಚ ಕರದೊಳು 16
ವನದಿ ಪಾಂಡವರಿರಲು ದೂರ್ವಾಸರು ಬಂದು
ಗ್ರಾಸವ ಬೇಡಲು ಪರಮಪುರುಷ ನೀನೇ ಗತಿಯೆಂದು ದ್ರೌಪದಿ
ಮೊರೆಯಿಡೆ ಅಕ್ಷಯವ ಮಾಡಿದ ಕರದೊಳು * 17
ಮಂದಮತಿಯು e್ಞÁನವೂ ನಿಮ್ಮ ಮಹಿಮೆ ಒಂದು ತಿಳಿಯದು
ಇಂದಿರೆ ರಮಣ ಶ್ರೀರಂಗನ ದಯದಿಂದ
ವಂದಿಸಿ ಬೇಡಿದೆ ಆನಂದಕರಗಹಳನ್ನು 18
ವೇದಶಾಸ್ತ್ರಗಳನ್ನು ಅರಿಯದ ಪಾಮರಸ್ತ್ರೀಜನ್ಮವು ಕಾಮ
ಕ್ರೋಧವು ಲೋಭ ಮೋಹದಿಂದಲೆ ಬಿಡಿಸಿ ನಿಮ್ಮ
ಪಾದದೊಳಿರಿಸೆನ್ನ ಶ್ರೀನಿವಾಸನೆ ಅಭಯವನಿತ್ತು ಕಾಯೊ 19
****

No comments:

Post a Comment