Tuesday 1 June 2021

ಗಜರಾಜವರದ ಗಂಗಾಜನಕ ಸಲಹೆನ್ನ ankita helavana katte

 ಗಜರಾಜವರದ ಗಂಗಾಜನಕ ಸಲಹೆನ್ನ

ಭುಜಗೇಂದ್ರಶಯನ ಶ್ರೀರಂಗ 3


ಧಾತ್ರಿಗಾಧಾರ ಅನಾಥರಕ್ಷಕನೆ ದಯವ್ಯಾತಕೆನ್ನೊಳಿಲ್ಲ ರಂಗ

ವಿಹಿತವೆ ನಿನಗೆ ನಡುನೀರೊಳಗೆ ಕೈಬಿಡುವುದು ಶ್ರೀಕಾಂತ

ಕಡೆಹಾಯಿಸೊ ರಂಗ 4


ನೋಡೆ ಶ್ರೀ ಹರಿಯೆ ನೀನಲ್ಲದನ್ಯತ್ರ ದಾತ್ರರಿಲ್ಲವೊ ರಂಗ

ನೀ ಪರಂಜ್ಯೋತಿಮೂರುತಿಯೆಂದು ನಂಬಿದೆನು ಅಪಾರ

ಮಹಿಮ ಶ್ರೀರಂಗ 5


ಕೋಪವನು ಬಿಡು ಎನ್ನ ಕುಂದನೆಣಿಸದಿರಯ್ಯ ಆಪತ್ಬಂಧು ಶ್ರೀರಂಗ

ದ್ರೌಪದಿವರದ ಹೆಳವನಕಟ್ಟೆರಂಗಯ್ಯ ಲಕ್ಷ್ಮೀಪತಿ

ಸಲಹಯ್ಯ ರಂಗ 6

****


No comments:

Post a Comment