Saturday, 4 December 2021

ಎಂಥ ಮಹಿಮ ಬಲವಂತ ನಮ್ಮ ಹನುಮಂತ ನಿಂತು ankita bheemesha krishna ENTHA MAHIMA BALAVANTA NAMMA HANUMANTA NINTU



ಎಂಥ ಮಹಿಮ ಏನು ಚಲುವನೆ 

ಶ್ರೀ ಉಡುಪಿ ನಿಲಯನೆ ||ಪ||


ಎಂಥ ಮಹಿಮ ಏನು ಚಲುವ 

ಕಂತುಪಿತ ಶ್ರೀ ಬಾಲಕೃಷ್ಣ

ಶಾಂತಯತಿಗಳಿಂದ ಪೂಜಿತ ನಿಂತ 

ಮಧ್ವಮುನಿಕರಾರ್ಚಿತ ||ಅ.ಪ||


ಕಂಡ ಕ್ಷಣದಿ ಮಂಡೆ ಬಾಗಿದ

ಹಿಂಡು ಭಕ್ತರಘ ಕಳೆವ

ಪುಂಡರೀಕ ನೇತ್ರ ಕನಕ

ಕಿಂಡಿಯಲ್ಲಿ ಕಾಂಬ ರೂಪ ||೧||


ಬಾಲರೆಂಟು ಯತಿಗಳಿಂದ

ಲೀಲೆಯಿಂದ ಪೂಜೆಗೊಂಬ

ಲೀಲಮಾನುಷರೂಪ ರುಕ್ಮಿಣಿ

ಲೋಲ ಲೋಕಪಾಲ ಜಾಲ ||೨||


ಕಾಲಕಾಲದ ಪೂಜೆಗೊಂಬ

ಬಾಲತೊಡಿಗೆ ಧರಿಸಿಕೊಂಬ

ವ್ಯಾಳಶಯನ ಮುದ್ದುಮುಖ 

ಗೋಪಾಲಕೃಷ್ಣವಿಠ್ಠಲನೀತ ||೩||

***


Entha mahima enu chaluvane 

sri udupi nilayane ||pa||


Entha mahima enu chaluva 

kantupita sri balakrishna

santayatigalinda pujita ninta 

madhvamunikararchita ||a.pa||


Kanda kshanadi mande bagida

hindu bhaktaragha kaleva

pundarika netra kanaka

kindiyalli kamba rupa ||1||


Balarentu yatigalinda

lileyinda pujegomba

lilamanusharupa rukmini

lola lokapala jala ||2||


Kalakalada pujegomba

balatodige dharisikomba

vyalashayana muddumukha 

gopalakrishnavittalanita ||3||

***


ಎಂಥ ಮಹಿಮ ಬಲವಂತ ನಮ್ಮ ಹನುಮಂತ

ನಿಂತು ನೀ ಸಲಹೋ ನಿರಂತರದಲ್ಲೆನ್ನ ಪ


ರಾಮನುಂಗುರ ಸೀತೆಗಿಟ್ಟ ಮರವ ಕಿತ್ತಿಸೂ-

ರೆ ಮಾಡ್ಯಕ್ಷಕುಮಾರನ್ನ ಮುರಿದು

ರಾವಣೇಶನ ಲಂಕಾದ್ವೀಪಕೆ ದೀಪಗಳ್ಹಚ್ಚಿ

ಹಾರಿದ್ವಾರಿಧಿ ವಾರ್ತೆ ಹರಿಗೆ ಬಂದರುಹಿದ 1


ಭೀಮಸೇನವತಾರ ಮಾಡಿ ತಾ ಪಾಂಚಾಲಿ

ಕೂಡಿ ಕೊಂಡ್ವನವಾಸ ಚರಿಸಿ ಬಂದು

ಕ್ರೂರ ಕುರುಪತಿ ಕುಲಕಂತಕನೆಂದರಸನ ಪಟ್ಟ-

ರಾಜ್ಞಿ ದ್ರೌಪದಿಧರ್ಮರಾಜಗ್ವಂದಿಸಿದನು 2


ಮಾಯಾವಾದಿಯ ಮುರಿದೊತ್ತಿದ ತಾ ಮಧ್ವ-

ರಾಯರಾಗಿ ರಜತಪೀಠಪುರದಲ್ಲೆ

ಭೀಮೇಶ ಕೃಷ್ಣನ್ನ ನಿಲಿಸಿ ಬಂದೀ ಬೊಮ್ಮ

ಗ್ರಾಮದಿ ನಿಂತನೆ ಸೀತಾರಾಮರ ಸಹಿತವಾಗಿ3

****


No comments:

Post a Comment