Sunday, 16 May 2021

ಸತ್ಯವತಿ ಪುತ್ರ vijaya vittala ankita suladi ಪರಶುರಾಮ ಸ್ತೋತ್ರ ಸುಳಾದಿ SATYAVATI PUTRA PARUSHARAMA STOTRA SULADI


Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ ಶ್ರೀಪರಶುರಾಮದೇವರ ಸ್ತೋತ್ರ ಸುಳಾದಿ 


 ರಾಗ ಸಾರಂಗ 


 ಧ್ರುವತಾಳ 

ಸತ್ಯವತಿ ಪುತ್ರ ದುರ್ಗಾಕಳತ್ರ ನಿಜ

ಸತ್ಯಸಂಕಲ್ಪ ಸಿದ್ಧ ಸೂರಿ ಪ್ರಸಿದ್ಧ

ನಿತ್ಯ ನಿಸ್ಸಂಗಾ ನಿರ್ವಿಕಾರ ಗುಣ ತರಂಗ

ಭೃತ್ಯವತ್ಸಲ ಲೀಲಾ ಭೃಗುಕುಲ ಪಾಲಾ

ದೈತ್ಯಜಾತಿಮರ್ದನ ಸದ್ದರ್ಮವರ್ಧನಾ

ಅತ್ಯಂತ ಪರಾಕ್ರಮ ರಾಮರಾಮಾ

ಸತ್ಯಲೋಕೇಶನಯ್ಯಾ ಸತತ ವಿಜ್ಞಾನ ಕಾಯಾ

ಮೃತ್ಯುಂಜಯ ನಿಂದು ಜಯವೆನೆ ಸುರವೃಂದಾ

ಸ್ತೌತ್ಯನೆ ರಾಜರಿಪು ಬಲು ಧನ್ಯಾ

ಹತ್ಯಾದಿ ದೋಷದೂರ ಭೂಭಾರವನ ಕುಠಾರಾ

ನೃತ್ಯಗೀತಕೆ ಒಲಿದಾ ದೇವರದೇವಾ

ಇತ್ಯರ್ಥ ಕಂಡವರಾರು ಎಂದಿಗೆ ನಿನ್ನಾ

ಗತ್ಯಾದಿ ಮಿಗಿಲಾದ ಪ್ರವರ್ತಕಾ

ದ್ವಿತ್ಯಕ್ತ ಮಾಡಿಸು ಪರಿಣಾಮಕೆ ಚಿತ್ತ

ಸತ್ಯವಾಗಲಿ ನಿನ್ನಂಘ್ರಿಯಲಿ

ಸತ್ಯರ್ಥ ಮುಕುತಿಗೆ ಸಾಧನಾ ಧನ ವೈಪ -

ರಿತಳ ಇಲ್ಲವು ಕಾಣೊ ಕಮಲಾಕಾಂತಾ

ಅತ್ಯಧಿಕ ದೈವಾ ವಿಜಯವಿಟ್ಠಲರೇಯಾ ಕೃತ -

ಕೃತ್ಯನ್ನು ಮಾಡು ನಿನ್ನ ದಾಸರೊಳು ಪೊಂದಿಸಿ ॥ 1 ॥ 


 ಮಟ್ಟತಾಳ 


ರಾಮಾ ರಾಮಾ ಪೂರ್ಣಕಾಮಾ ಕಾಮಿತ ಫಲದಾ

ಜಾಮದಗ್ನಿ ಅಗ್ನಿನೇಮಕ ಪರಶುಧರಾ

ರಾಮ ವಲ್ಕಲವಾಸ ರಾಮಣೀಯ ಸರ್ವ ಸಾರ್ವ -

ಭೌಮಾ ಪೂರ್ಣಾಪೂರ್ಣಾ

ಭೂಮಿನಾಥಾ ತಾಮಸಗುಣಹಾರಿ

ಧೂಮಕೇತುವರ್ನಸ್ವಾಮಿ ಅಂತರ್ಯಾಮಿ

ಸಾಮಸ್ತ ಘನಶೌರಿ ರಾಮ ರಾಜೀವಾಕ್ಷಾ

ಸೋಮಕುಲವೈರಿ ವಿಜಯವಿಟ್ಠಲ ರಾಮಾ

ಕಾಮಧೇನು ಸತತ ಮನದಲಿ ನೆನೆದವಗೆ ॥ 2 ॥ 


 ತ್ರಿವಿಡಿತಾಳ 


ಮುನಿ ಕುಲೋದ್ಬವ ರಾಮಾ ರೇಣುಕಾನಂದನಾ

ಧನುರ್ಧಾರಿ ಖಡ್ಗ ಚರ್ಮಧಾರಿಯೇ

ರಣಭಯಂಕರ ಚಂಡಪ್ರಚಂಡ ಉದ್ದಂಡಾ

ಸೆಣಿಸಿದವರ ಗಂಡಾ ರಿಪು ಭೇರುಂಡಾ

ಗಣನೆಗಾಣಿನೊ ನಿನ್ನ ಪ್ರತಾಪತನಕೆ ತ -

ಲ್ಲಣಿಸುತದೆ ರಾಯಾಕುಲ ಸಾಗರಾ

ಜನಕನ ಮಾತನು ಲಾಲಿಸಿ ಭ್ರಾತಾರಾ

ಜನನಿಯ ತರಿದು ಮಗುಳೆ ಉಳುಹಿದೆ

ಜನನ ಮರಣ ಶೂನ್ಯ ರಾಮ ಭಾರ್ಗವರಾಮ

ಬಿನಗು ದೈವಂಗಳು ನಿನಗೆ ಸಮನೆ

ಅನಿಮಿಷತತಿ ಅಭ್ರದಲಿ ನಿಂದು ಬಾಗಿ

ನೆನೆನೆನದುಘೇ ಯೆನೆ ನಿನ್ನ ಚರಿತೆ

ಪಣವ ಮಾಡುವನಾರು ನಿನ್ನ ಸಂಗಡ ಹೋ ಹೋ

ತೃಣ ಸಮವಾಗಿದೆ ತ್ರಿಭುವನಾ

ಸನಕಾದಿ ವಂದಿತಾ ವಿಜಯವಿಟ್ಠಲರೇಯಾ 

ಮಣಿದು ನಮೋ ಎಂಬೆ ಉದ್ದರಿಸು ಉರ್ಜಿತಾ ॥ 3 ॥ 


 ಅಟ್ಟತಾಳ 


ಕೃತವೀರ್ಯಸೂನು ಅರ್ಜುನನ ಸಾವಿರಹಸ್ತಾ

ಕ್ಷಿತಿಗುರುಳಿಸಿ ಅವನನ್ನ ಕೊಂದು ಅವನ

ಸುತರನ ಸದದು ಕಾಳಗದೊಳು ಏಕ ವಿಂ -

ಶತಿಸಾರಿಗೆಲಿ ನಿಕ್ಷತ್ರಿಯರ ಮಾಡಿ

ಕೃತು ಮಾಡಿ ಅವನಿಸುರರಿಗೆ ಸಕಲ ದಾನಾ

ಚತುರ್ದಿಗ್ಬಾಗವ ಕೊಟ್ಟು ಸಿಂಹ ಪ -

ರ್ವತದಲ್ಲಿ ಇದ್ದ ಬ್ರಾಹ್ಮಣರನ ಮನ್ನಿಸಿ ವಾರಿ -

ಪತಿಯಿಂದ ಭೂಮಿಯ ಪಡೆದು ರಾಮಭೋಜ

ಕ್ಷಿತಿಪನ್ನ ಪೊಂದಿಸಿ ಯಾಗವ ಮಾಡಿಸಿ

ಕೃತಕಾರ್ಯ ನೀನಾದೆ ಪಡುವಲ ವನಧೀಲಿ

ನುತಿಸಿದವರ ಪ್ರಾಣಾ ವಿಜಯವಿಟ್ಠಲರೇಯಾ 

ಪ್ರತಿಕೂಲ ಕಳೆವ ವಾಗಿಂದ್ರಿಯ ನಿವಾಸ ॥ 4 ॥ 


 ಆದಿತಾಳ 


ಪರುಶುರಾಮನೆಂದು ಸ್ಮರಿಸಿದ ಜನರಿಗೆ

ಸ್ಪರಿಸ ಮಾಡದು ಕಾಣೊ ನಿರಸವಾಗೊದು ನಿತ್ಯ

ಹರುಷದಿಂದಲಿ ಸಂಚರಿಸುವ ಪುಣ್ಯ ಭೂಮಿ

ಪುರುಷಾರ್ಥವಾಗುವದು ವರುಷ ವರುಷ ಜ್ಞಾನ

ವರುಷ ಸುರಿವದು ಪರುಶವಾಗಿಪ್ಪನೂ

ಅರಸಿನ ಸಹಿತ ಬಂದು ಅರಸಿದರೆ ದೊರಕನು

ಸುರ ಶಿರೋಮಣಿ ಪತಿಕರಿಸುವ ತಾನೆ ಉ -

ದ್ಧರಿಸುವ ಕರುಣದಿಂದ 

ಪುರುಷ ಪ್ರಧಾನ ಜನಕ ವಿಜಯವಿಟ್ಠಲರೇಯಾ 

ಸರಿಸಿಜ ಭವಾದ್ಯರಿಗೆ ಅರಸಾಗಿ ವೊಪ್ಪುತಿಹಾ ॥ 5 ॥ 


 ಜತೆ 


ಭಾವಿ ಸಪ್ತ ಋಷಿಯ ಭಕ್ತವತ್ಸಲ ಕರು -

ಣಾವಲೋಕನ ರಾಮಾ ವಿಜಯವಿಟ್ಠಲ ಮುಖ್ಯ ॥

********


No comments:

Post a Comment