*
by acharya nagaraju haveri
" ಹರಿದಾಸ ಸಾಹಿತ್ಯ - ಒಂದು ಚಿಂತನೆ - ಭಾಗ - ೧ "
ವರ ವೇದ ಪುರಾಣ ವಿವಿಧ ಶಾಸ್ತ್ರ೦ಗಳಿಗೆ ।
ಸರಸಿಜೋದ್ಭವನರಸಿ ಸರಸ್ವತೀದೇವಿಯು ।
ಪರಮ ಮುಖ್ಯಾಭಿಮಾನಿಯೆಂದು ತಿಳಿದು ।
ನಿರುತ ಭಜಿಸುವ ಜನಕೆ ನಿಜ ಗತಿಯ ಸಲಿಸುವ ।
ಸಿರಿಯರಸ ಪುರಂದರವಿಠಲ ತಾನೊಲಿದು ।।
" ಪಂಚರಾತ್ರಾಗಮ " ದಲ್ಲಿ ಶ್ರೀ ಚತುರ್ಮುಖ ಬ್ರಹ್ಮದೇವರು ಶ್ರೀ ಹರಿಯನ್ನು ಕುರಿತು...
* ತವ ದಾಸೈಕ ಭಾವೇಸ್ಯಾತ್ ಸದಾ ಸರ್ವತ್ರ ಮೇ ರತಿ: ।।
* ನಿತ್ಯಂ ಕಿಂಕರ ಭಾವೇನ ಪರಿ ಗೃಹ್ಣಿಷ್ವಮಾಂ ವಿಭೋ ।।
* ಕಿಂಕರೋsಸ್ಮಿ ಹೃಷೀಕೇಶ ಭೂಯೋಭೂಯೋsಸ್ಮಿ ಕಿಂಕರಃ ।।
* ಚರೇಯಂ ಭಗವತ್ಪಾದ ಪರಿಚರ್ಯಾ ಸುವೃತ್ತಿಸು ।।
* ತವ ದಾಸೋsಸ್ಮಿ ಕೇವಲಮ್ ।।
ಮುಂತಾದ ಅನೇಕ ವಚನಗಳಿಂದ ತಮ್ಮ ದಾಸ್ಯ ಭಾವವನ್ನು ನಿವೇದನೆ ಮಾಡಿದ್ದಾರೆ.
ಭಾರತೀಯ ಆಧ್ಯಾತ್ಮಿಕ ಪ್ರಪಂಚದಲ್ಲಿ ಕರ್ನಾಟಕದ ಪಾತ್ರ ಅತಿ ಮಹತ್ವವಾದದ್ದು. ಕರ್ನಾಟಕಡಾ ಧಾರ್ಮಿಕ ಇತಿಹಾಸದಿಂದ ವೈಷ್ಣವ ಮತ ಕ್ರಿ ಶ 6ನೇ ಶತಮಾನದಲ್ಲಿ ಪ್ರಬಲವಾಗಿತ್ತು ಎಂದು ತಿಳಿದು ಬರುತ್ತದೆ.
ಜೈನ ಮತ ಕಳೆಗುಂದುತ್ತಿರುವಾಗ ಶೈವ ಹಾಗೂ ವೈಷ್ಣವ ಮತಗಳು ಪ್ರಬಲವಾದವು.
" ಶ್ರೀ ಶಂಕರಾಚಾರ್ಯರು "
ಶ್ರೀ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಕೇರಳದ " ಕಾಲಟಿ " ಯಲ್ಲಿ ಅವತರಿಸಿ ನರ್ಮದಾ ನದೀ ತೀರದಲ್ಲಿ ಸಂನ್ಯಾಸವನ್ನು ಸ್ವೀಕರಿಸಿ ಇಡೀ ಭಾರತ ಖಂಡದಲ್ಲೆಲ್ಲಾ ಅದ್ವೈತ ಸಿದ್ಧಾಂತವನ್ನು ಪ್ರಚುರ ಪಡಿಸಿದರು.
ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಶ್ರೀ ಶೃಂಗೇರಿ ಮಠವೂ ಒಂದು!!
" ಶ್ರೀ ಶಂಕರಾಚಾರ್ಯರು ಬ್ರಹ್ಮವಾದವನ್ನು ಪ್ರತಿಪಾದಿಸಿದರು ( ಕ್ರಿ ಶ 788 - 820 ) "
" ಶ್ರೀ ರಾಮಾನುಜಾಚಾರ್ಯರು "
ತಮಿಳುನಾಡಿನಲ್ಲಿ ಅವತರಿಸಿ ಅಲ್ಲಿಯ ಧಾರ್ಮಿಕ ಅಸಹಿಷ್ಣುತೆಯಿಂದ ನೊಂದು ತಾಯ್ನಾಡನ್ನು ಬಿಟ್ಟು ಬಂದ ಶ್ರೀ ರಾಮಾನುಜಾಚಾರ್ಯರು ಕರ್ನಾಟಕವನ್ನು ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡರು.
ಶ್ರೀ ರಾಮಾನುಜಾಚಾರ್ಯರು " ವಿಶಿಷ್ಟಾದ್ವೈತ ಸಿದ್ಧಾಂತ " ವನ್ನು ಪ್ರಚುರ ಪಡಿಸಿದರು.
" ಶ್ರೀ ರಾಮಾನುಜಾಚಾರ್ಯರ ಶ್ರೀ ನಾರಾಯಣನ ಮಹಿಮೆ - ದೈವೀ ಕೃಪೆ ಎಂಬ ಕಲ್ಪನೆ ಜನ ಸಾಮಾನ್ಯರಿಗೆ ಹಿಡಿಸಿದವು. ( ಕ್ರಿ ಶ 1017 - 1120 ) "
" ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯರು "
ದ್ವೈತ ಮತ ಸಂಸ್ಥಾಪಕರಾದ ಶ್ರೀಮನ್ಮಧ್ವಾಚಾರ್ಯರು ಕರ್ನಾಟಕದಲ್ಲೇ ಅವತರಿಸಿದರು.
" ಶ್ರೀಮನ್ಮಧ್ವಾಚಾರ್ಯರು " ಶ್ರೀ ಹರಿ ಸರ್ವೋತ್ತಮತ್ವ " ವನ್ನು ಪ್ರತಿಪಾದಿಸಿದರು. ( ಕ್ರಿ ಶ 1238 - 1317 ) "
1. ಪರಮಪೂಜ್ಯ ಶ್ರೀ ಶಂಕರಾಚಾರ್ಯರ ತತ್ತ್ವಗಳು ಆಡು ಭಾಷೆಯಾದ ಕನ್ನಡದಲ್ಲಿ ಬರದೇ ಇರುವುದರಿಂದ ಹೆಚ್ಚು ಪ್ರಚುರವಾಗಲಿಲ್ಲ!
2. ಪರಮಪೂಜ್ಯ ಶ್ರೀರಾಮಾನುಜಾಚಾರ್ಯರ ತತ್ತ್ವಗಳು ತಮಿಳಿನಲ್ಲಿರುವುದರಿಂದ ಕನ್ನಡದ ಜನಕ್ಕೆ ಹತ್ತಿರವಾಗಲಿಲ್ಲ.
3. ಆದರೆ, ದ್ವೈತ ಸಿದ್ಧಾಂತವು ಹರಿದಾಸರ ಕೈಯಲ್ಲಿ ಮನೆ - ಮನೆಯನ್ನೂ, ಮನ - ಮನವನ್ನೂ ಮುಟ್ಟಿದ್ದರಿಂದ ದ್ವೈತ ಭಕ್ತಿಗೆ ವ್ಯಾಪಕ ಪ್ರಚುರ ಸಿಕ್ಕಿತು!
" ಹರಿದಾಸ ಸಾಹಿತ್ಯದ ಮೂಲ ವೇದೋಪನಿಷತ್ತುಗಳು "
ದಾಸ ಸಾಹಿತ್ಯದ ಮೂಲ ಬೇರುಗಳನ್ನು ನಾವು ಋಗ್ವೇದದ ಮೂಲ ಮಂತ್ರಗಳಲ್ಲಿಯೇ ಕಾಣಬಹುದು.
ಋಗ್ವೇದದ ಋಷಿಗಳು ಸೃಷ್ಟಿಯ ಆಗು ಹೋಗುಗಳಲ್ಲಿಯೂ; ಪ್ರಕೃತಿಯ ಪಟಪರಿವರ್ತನೆಯಲ್ಲಿಯೂ ಮಾನವೀಯ ಜೀವನದ ಪತನ; ಪುನರುತ್ಥಾನಗಳಲ್ಲಿಯೂ ಪರಶಕ್ತಿಯ ಕೈವಾಡವನ್ನು ಕಂಡು ಹೃದಯ ತುಂಬಿ ಬಾಯಿ ತುಂಬಿ ಕೊಡಾಡಿದ್ದಾರೆ.
ಋಗ್ವೇದದ ವಿಷ್ಣುಸೂಕ್ತ - ಇಂದ್ರಸೂಕ್ತ - ಅಗ್ನಿ ಸೂಕ್ತಗಳಲ್ಲಿ ಆ ದೇವ ದೇವೋತ್ತಮನೂ, ಸರ್ವೋತ್ತಮನೂ, ಸಕಲ ಶಬ್ದ ವಾಚ್ಯನೂ, ಅಚಿಂತ್ಯಾದ್ಭುತ ಶಕ್ತಿ ಸಂಪನ್ನನೂ; ಸಚ್ಚಿದಾನಂದಮೂರ್ತಿಯೂ; ಪರಮ ಪುರುಷೋತ್ತಮನೂ ಆದ ಶ್ರೀಮನ್ನಾರಾಯಣನ ಕುರಿತು ಭಕ್ತಿಭಾವ ಭರಿತರಾಗಿ ಆ ಆದಿ ಮುನಿಗಳು ಧ್ಯಾನಭಾವದಿಂದ ಆತ್ಮ ನಿವೇದನೆ ಮಾಡಿದ್ದು ಕಂಡು ಬರುತ್ತದೆ.
ಮುಂದೆ ಉಪನಿಷತ್ಕಾಲದಲ್ಲಿ ಈ ದಾಸ್ಯ ಭಾವನೆಯು ಇನ್ನೂ ಅಭಿವೃದ್ಧಿ ಹೊಂದಿ ಪುರಾಣಗಳಲ್ಲಿ ಪರಿಪೂರ್ಣತೆಯನ್ನು ಕಂಡಿದೆ.
ಶ್ರೀಮದ್ಭಾಗವತದಲ್ಲಿಯಂತೂ ಶ್ರೀ ಪ್ರಹ್ಲಾದರಾಜರು " ಭಕ್ತಿಯೋಗ " ದ 9 ಅಂಗಗಳಲ್ಲಿ ದಾಸ್ಯವನ್ನೂ ಪರಿಗಣಿಸಿದ್ದಾರೆ.
ಶ್ರವಣಂ ಕೀರ್ತನಂ ವಿಷ್ಣೋ: ಸ್ಮರಣಂ ಪಾದ ಸೇವನಂ ।
ಅರ್ಚನಂ ವಂದನಂ ದಾಸ್ಯ೦ ಸಖ್ಯ೦ ಆತ್ಮ ನಿವೇದನಮ್ ।।
೧. ಭಗವಂತನ ಮಹಿಮೆಯನ್ನು ಕೇಳಬೇಕು.
೨. ಶ್ರೀ ಹರಿಯ ಮಹಿಮೆಯನ್ನು ಕೇಳಿ ಹಾಡಬೇಕು.
೩. ಮನಸ್ಸು ಭಗವಂತನ ಮಹಿಮೆಗಳನ್ನು ನೆನೆಯುತ್ತಿರಬೇಕು.
೪. ಭಗವಂತನ - ಭಗವದ್ಭಕ್ತರ ಪಾದ ಸೇವೆಯನ್ನು ಮಾಡಬೇಕು.
೫. ಶ್ರೀಮನ್ನಾರಾಯಣನನ್ನು ಪೂಜಿಸಬೇಕು.
೬. ಶ್ರೀಹರಿಗೆರಗಬೇಕು.
೭. ಶ್ರೀ ಹರಿಗೆ ದಾಸನಾಗಿರಬೇಕು.
೮. ಆತ್ಮೀಯ ಗೆಳೆಯನಂತೆ ಭಗವಂತನಲ್ಲಿ ಸರಸವಾಡಬೇಕು.
೯. ಇಡೀ ಬದುಕನ್ನೇ ಭಗವಂತನಗರ್ಪಿಸಿ ನಮ್ಮೊಳಗೆ ಅವನನ್ನು ಕಾಣಬೇಕು.
ಹೀಗೆ ನವವಿಧ ಭಕ್ತಿಯನ್ನು ಮಾಡಬೇಕು. ಯಾರು ಶ್ರೀ ಹರಿಯನ್ನು ನವವಿಧ ಭಕ್ತಿಯ ಉಪಾಸನೆಯಿಂದ ಒಲಿಸಿಕೊಂಡಿದ್ದಾನೋ ಅವನೇ ನಿಜವಾದ ಉತ್ತಮ ಅಧ್ಯಯನ ಮಾಡಿದವ! ಆತನ ಅಧ್ಯಯನ ಸಾರ್ಥಕ ಎಂದು ನನ್ನ ನಂಬಿಕೆ. ಆದ್ದರಿಂದ ಗೋವಿಂದನಲ್ಲಿ ಅನನ್ಯ ಭಕ್ತಿಯೇ ಜೀವನದ ಸಾರಸರ್ವಸ್ವ. ಭಗವಂತನನ್ನು ಎಲ್ಲೆಡೆ ಕಾಣುವುದಕ್ಕಿಂತ ಮಿಗಿಲಾದ ಪುರುಷಾರ್ಥ ಬೇರೆ ಇಲ್ಲವೆಂದು ಶ್ರೀ ಪ್ರಹ್ಲಾದರಾಜರು ಶ್ರೀ ಹರಿಯ ಮಹಿಮೆಯನ್ನು ಸಾರಿ ಹೇಳಿದ ಮಹಾನುಭಾವರು!
" ಶ್ರೀ ಹರಿ ದಾಸರ ಸಾಹಿತ್ಯದ ಪ್ರಪ್ರಥಮ ಹರಿದಾಸರು ಶ್ರೀ ವಾಯುದೇವರು "
ಶ್ರೀಮದಾನಂದತೀರ್ಥರು ಬಹು ಕಾಲದಿಂದ ರೂಢವಾಗಿ ಬಂದ " ಸೋsಹಂ " ಭಾವನನ್ನು ಖಂಡಿಸಿ " ದಾಸೋsಹಂ " ಭಾವನೆ ಶ್ರೀ ಈಶ ( ಶ್ರೀ ಹರಿ ) ಸೇವನೆಗಳಿಂದಲೇ " ಮುಕ್ತಿ " ಯೆಂದು ಯುಕ್ತಿಯುಕ್ತವಾಗಿ ಸಾಧಿಸಿ ತೋರಿಸಿದವರು!!
ಶ್ರೀಮದಾಚಾರ್ಯರ ಪ್ರಥಮಾವತಾರವಾದ ಶ್ರೀಹನುಮದ್ರೂಪದಲ್ಲಿ ರಾವಣ ಆಸ್ಥಾನಕ್ಕೆ ಹೋದಾಗ...
" ದಾಸೋsಹಂ ಕೋಸಲೇಂದ್ರಸ್ಯ ರಾಮಸ್ಯ ಹಿ ಮಹಾತ್ಮನಃ "
ಯೆಂದು ನಿಸ್ಸಂಕೋಚವಾಗಿ ನುಡಿದು ಆ ಶ್ರೀ ವಾಯುದೇವರ ಅವತಾರರಾದ ಶ್ರೀ ಪ್ರಾಣದೇವರೇ ಶ್ರೀಕಾರ ಹಾಕಿದ್ದಾರೆ.
ದಾಸ ಸಾಹಿತ್ಯಕ್ಕೆ ಶ್ರೀಮದಾನಂದತೀರ್ಥರು ತಮ್ಮ ಗ್ರಂಥಗಳಲ್ಲಿ ಈ " ಭಗವದ್ದಾಸ್ಯಭಾವ " ಕ್ಕೆ ಪುಷ್ಟಿ ವೈಶಿಷ್ಟ್ಯಗಳನ್ನು ತಂದು ತೋರಿಸುವ ಅನೇಕ ಪದ್ಯಗಳನ್ನು ಶ್ರುತಿ - ಸ್ಮೃತಿ - ಪುರಾಣಗಳಿಂದ ಎತ್ತಿ ತೋರಿಸಿ ಸಂಗ್ರಹಿಸಿ " ಕೃಷ್ಣಾಮೃತ ಮಹಾರ್ಣವಾದಿ ಗ್ರಂಥ " ಗಳಲ್ಲಿ ಕೂಡಿಸಿ ಇಟ್ಟಿದ್ದಾರೆ.
ತ್ವಯೋಪಭುಕ್ತ ಸೃಗ್ಗಂಧ ವಾಸೋಲಂಕಾರಚರ್ಚಿತಾ: ।
ಉಚ್ಚಿಷ್ಟ ಭೋಜಿನೋ ದಾಸಾ: ತವ ಮಾಯಾ೦ ಜಯೇಮಹಿ ।।
ಮುಂತಾದ ಅಭಿಯುಕ್ತೋಕ್ತಿಗಳನ್ನು ಉದಾಹರಿಸಿ " ದಾಸ್ಯ ಭಾವ " ದ ಮೇಲ್ಮೆ - ಮಹತಿ ಮುಂತಾದ ಗುಣಗಳನ್ನು ಪ್ರಖ್ಯಾಪಿಸಿದ್ದಾರೆ.
ಶ್ರೀಮದಾಚಾರ್ಯರು ರಚಿಸಿದ " ದ್ವಾದಶ ಸ್ತೋತ್ರ " ವು ದಾಸ್ಯ ಭಾವಡಾ ಅತ್ಯತ್ತಮವಾದ ಇತ್ತೀಚಿನ ಯುಗದ ಪ್ರಥಮಾವಿಷ್ಕಾರವಾಗಿದೆ. ಈ ದ್ವಾದಶ ಸ್ತೋತ್ರದ ಉದ್ದಕ್ಕೂ...
ವಂದಿತಾಶೇಷವಂದ್ಯೋರು ವೃಂದಾರಕಂ
ಚಂದನಾಚರ್ಚಿತೋದಾರಪೀನಾಂಸಕಮ್ ।
ಇಂದಿರಾಚಂಚಲೋಪಾಂಗನೀರಾಜಿತಂ
ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಮ್ ।।
ಪ್ರೀಣಯಾಮೋ ವಾಸುದೇವಮ್
ದೇವತಾಮಂಡಲಾಖಂಡಮಂಡನಮ್ ।।
ವಿಧಿಭವಮುಖಸುರ ಸತತ ಸುವಂದಿತ
ರಮಾಮನೋವಲ್ಲಭ ಭವ ಮಮ ಶರಣಮ್ ।
ಶುಭತಮಕಥಾಶಯ ಪರಮ ಸದೋದಿತ
ಜಗದೇಕ ಕಾರಣ ರಾಮ ರಮಾರಮಣ ।।
ಅವನ ಶ್ರೀಪತಿರಪ್ರತಿರಧಿಕೇಶಾದಿಭವಾದೇ ।
ಕರುಣಾಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇತೇ ।।
ಯೆಂಬ ಮುಂತಾದ ಪಾದ ಪಲ್ಲವಿಗಳಲ್ಲಿ ದಾಸ್ಯ ಭಾವದ ಆತ್ಮಾರ್ಪಣೆಯ ಆರ್ತ ಭಾವನೆಯು ಅಣುರಣಿಸುತ್ತದೆ.
ಶಾಸ್ತ್ರ ಸಂಸ್ಕಾರದಿಂದ ಹದಗೊಂಡ ಹೃದಯದಲ್ಲಿ ಉಕ್ಕುವ ಭಗವದ್ಭಕ್ತಿಗೆ ಗೀತರೀತಿಯಲ್ಲಿ ಅಭಿವ್ಯಕ್ತಿಗೆ ಅನುವು ಮಾಡಿ ಶ್ರೀಮದಾನಂದತೀರ್ಥರು ಹರಿದಾಸ ಸಾಹಿತ್ಯಕ್ಕೆ ಆದ್ಯ ದ್ರಷ್ಟಾರರಾದ ಮಹಾ ಪುರುಷರಾಗಿದ್ದಾರೆ.
ಶ್ರೀ ವಾಯುದೇವರ ಪ್ರಥಮಾವತಾರದಲ್ಲಿ ( ಶ್ರೀ ಹನುಮಂತದೇವರ ಅವತಾರದಲ್ಲಿ ) ವ್ಯಕ್ತ ಪಡೆದ ದಾಸ್ಯಭಾವದ ಸಮ್ಯಗಭಿವ್ಯಕ್ತಿಗೆ ಈ ಶ್ರೀ ವಾಯುದೇವರ ತೃತೀಯಾವತಾರದಲ್ಲಿ ( ಶ್ರೀ ಮಧ್ವರಾಗಿ ಅವತಾರ ಮಾಡಿದ ಕಾಲದಲ್ಲಿ ) ಸರಸ ಸುಂದರವಾದ ಸಾಹಿತ್ಯಕ ಸುವರ್ಣ ಮಾಧ್ಯಮವನ್ನು ಗೊತ್ತು ಪಡಿಸಿದ ಶ್ರೇಯಸ್ಸು " ಶ್ರೀಮದಾಚಾರ್ಯ " ರಿಗೆ ಸಲ್ಲುತ್ತದೆ.
ನಿಜವಾದ ಭಗವದ್ಭಕ್ತಿಗೆ " ಮಧ್ವಮತ " ದಲ್ಲಿ ಮಾತ್ರ ಇಂಬು ( ಆಶ್ರಯ - ಜಾಗ - ಅನುಕೂಲ ) ದೊರೆತಿದ್ದರಿಂದ ಮಾಧ್ವ ಸಂಪ್ರದಾಯದ ಮುನಿ ಮಹಾನುಭಾವ ಮನುಜ ಮಾನ್ಯ ಸಾಮಾನ್ಯರ ಹೃದಯ ಕ್ಷೇತ್ರಗಳಲ್ಲಿ " ಭಕ್ತಿ ಭಾಗೀರಥಿ " ಯು ತುಂಬಿ ಹರಿದಿದ್ದಾಳೆ. ಶತಕಾನುಶತಗಳಿಂದ ವೈಭವದಿಂದ ಮೆರೆಯುತ್ತಿದ್ದಾಳೆ!!
ಇದನ್ನು ಅನುಲಕ್ಷಿಸಿಯೇ " ಪದ್ಮ ಪುರಾಣ " ದಲ್ಲಿ ಸಾಕ್ಷಾತ್ ಭಕ್ತಿ ದೇವಿಯು ತನ್ನ ಸ್ಥಿತಿ ಗತಿ ಪ್ರಗತಿಗಳನ್ನು ತಿಳಿಸುತ್ತಾ...
" ವೃದ್ಧಿ೦ ಕರ್ನಾಟಕೇ ಗತಾ "
ಯೆಂದು ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಬೆಳಗಿದ ಭಕ್ತಿ ಸಂಪ್ರದಾಯದ ಶುದ್ಧಿ ಸಿದ್ಧಿಗಳನ್ನು ಎತ್ತಿ ಹೇಳಿದ್ದಾಳೆ!!
ಕರ್ನಾಟಕದಲ್ಲಿಯಾಗಲೀ ಅಥವಾ ಸಮಗ್ರ ಭರತಖಂಡದಲ್ಲಿಯಾಗಲೀ ಇಂಥಾ ಶಾಸ್ತ್ರ ಶುದ್ಧವಾದ; ಪ್ರಮಾಣಬದ್ಧವಾದ; ವಿರೋಧ - ವಿಸಂಗತಿಗಳಿಂದ ಮುಕ್ತವಾದ ಸುಭದ್ರ ಬುನಾದಿಯ ಮೇಲೆ " ಭಕ್ತಿ ತತ್ತ್ವದ ಭವ್ಯ ಕಟ್ಟಡ " ವನ್ನು ಇಂಥಾ ದಿವ್ಯ ದೇಶಿಕರು ( ಆಚಾರ್ಯ ಮಧ್ವರು ) ಬೇರೊಬ್ಬರಿಲ್ಲ ಎಂದು ಎದೆತಟ್ಟಿ ಹೇಳಬಹುದು!
ಆದುದರಿಂದಲೇ " ಶ್ರೀ ಹರಿದಾಸ ಸಾಹಿತ್ಯ " ಯೆಂದರೆ " ಮಾಧ್ವ ಸಾಂಪ್ರದಾಯದ ಹರಿದಾಸ ಸಾಹಿತ್ಯ " ಯೆಂದೇ ಸಮೀಕರಣ ಮಾಡುವಂಥಾಗಿದೆ!!
" ಶ್ರೀ ನರಹರಿತೀರ್ಥರು "
ಶ್ರೀಮದಾನಂದತೀರ್ಥರಿಂದ ಪ್ರಾರಂಭವಾದ ಈ ಹರಿದಾಸ ಸಾಹಿತ್ಯದ ಭಕ್ತಿ ಭಾಗೀರಥಿಯನ್ನು ದೇಶ ಭಾಷೆಯ ಕಿರು ಕಾಲುವೆಗಳಲ್ಲಿ ಹರಿಯಿಸಿ ಜನ ಸಾಮಾನ್ಯರ ಹೃದಯದ ಹೊಲಗಳಿಗೆಲ್ಲಾ ನೀರನ್ನು ಉಣ್ಣಿಸಿ; ಮನಸ್ಸನ್ನು ತಣಿಸಿ ತೃಪ್ತಿಯನ್ನು ತಂದುಕೊಟ್ಟ ಪುಣ್ಯ ಪುರುಷರೆಂದರೆ ಶ್ರೀಮದಾಚಾರ್ಯರಿಂದಲೇ ಆಶ್ರಮ ಸ್ವೀಕಾರ ಮಾಡಿ ಶ್ರೀ ಪದ್ಮನಾಭತೀರ್ಥರ ಅನಂತರ ಸರ್ವಜ್ಞ ಸಿಂಹಾಸನವನ್ನು ಆರೋಹಣ ಮಾಡಿದ ಮಹಾನುಭಾವರು!!
ಸಂಸ್ಕೃತದಲ್ಲಿ ಶಾಸ್ತ್ರೀಯ ಉದ್ಗ್ರಂಥಗಳನ್ನು ಬರೆದಂತೆ ಕನ್ನಡದಲ್ಲಿಯೂ ಹರಿನಾಮ ಸಂಕೀರ್ತನೆಗಳನ್ನು ರಚಿಸಿ ಕನ್ನಡದ ದಾಸ ಕೂಟಕ್ಕೆ " ಆದ್ಯ ಪ್ರವರ್ತಕ " ರಾದ ಮೂಲ ಮಹರ್ಷಿಗಳಾದರು.
ಆಗಮದಲ್ಲಿಯ ಮಂತ್ರ ಸ್ತೋತ್ರಗಳಿದ್ದಂತೆ ಶ್ರೀ ನರಹರಿತೀರ್ಥರ ಕನ್ನಡ ರಾಗ - ತಾಳ ಬದ್ಧವಾದ ಗೀತಾನುಗೀತಗಳಲ್ಲಿ ನೈಚ್ಯಾನುಸಂಧಾನಪೂರ್ವಕವಾದ ಭಾಗವತ್ಪ್ರಶಕ್ತಿಯು ಪ್ರಮುಖವಾಗಿ ದೃಗ್ಗೋಚರವಾಗುತ್ತದೆ. ಇವರ ಅಂಕಿತ " ರಘುವತಿ ".
ರಾಗ : ಪಂತುವರಾಳಿ ತಾಳ : ಆದಿ
ಯೆಂತು ಮರುಳಾಗೀ ।
ಮರುಳಾಗಿ ಬಯಲಿಗೆ ಬೀಳುವೆ ನಾ ।
ಕರುಣಿಸೈಯ ರಘುಕುಲತಿಲಕಾ ।। ಪಲ್ಲವಿ ।।
.... ಯಜಿಸು ಬ್ರಹ್ಮಾದಿ ವಂದಿತನಾ ।
ತ್ಯಜಿಸು ನೀ ಕಾಮಾದಿ ಹಗೆಗಳನಾ ।
ಸುಜನ ವಂದಿತ ಸಿರಿ ನರಹರಿಯಾ ।
ಭಜಿಸಿ ಬದುಕು ಶ್ರೀ ರಘುಪತಿಯಾ ।।
ಶ್ರೀ ನರಹರಿತೀರ್ಥರಿಗೂ - ಶ್ರೀ ಶ್ರೀಪಾದರಾಜರಿಗೂ ಮಧ್ಯದಲ್ಲಿ ೬೦ ಜನ ಹರಿದಾಸರು ಬಾಳಿ ಬದುಕಿದ್ದಾರೆ. ಆ ೬೦ ಜನ ಹರಿದಾಸರಲ್ಲಿ " ಶ್ರೀ ಅಚಲಾನಂದದಾಸರು " ಒಬ್ಬರು. ಇವರು ಶ್ರೀ ಮದಾಚಾರ್ಯರು ಮತ್ತು ಶ್ರೀ ನರಹರಿತೀರ್ಥರ ನಂತರ ಬಂದವರು ಅಂದರೆ ೧೪ನೇ ಶತಮಾನದಲ್ಲಿ ಇದ್ದವರು!! ಅಲ್ಲದೆ ಶ್ರೀ ಅಚಲಾನಂದದಾಸರು ೯ನೇ ಶತಮಾನದಲ್ಲಿ ಇರಲಿಲ್ಲ ಎನ್ನುವುದು ಭಕ್ತಿ ಸಾಹಿತ್ಯದ ಇತಿಹಾಸದಿಂದ ತಿಳಿಯುತ್ತದೆ. ಕ್ರಿ ಶ ೭ ರಿಂದ ೯ ರ ವರೆಗೆ " ಆಳ್ವಾರರ " ಕಾಲ. ಆದ್ದರಿಂದ ಆ ಸಮಯದಲ್ಲಿ ಶ್ರೀ ಅಚಲಾನಂದದಾಸರು ಇರಲು ಸಾಧ್ಯವೇ ಇಲ್ಲ! ಎನ್ನುವುದು ಸ್ಪಷ್ಟ!!
" ಶ್ರೀ ಅಚಲಾನಂದದಾಸರು " ಕೃತಿ..
ಕೇಳೋ ಜೀವನವೆ ನೀ ಮಧ್ವಮತವನನುಸರಿಸಿ ।
ಶ್ರೀಲೋಲನಂಘ್ರಿಗಳ ನೆನೆದು ಸುಖಿಸೋ ।। ಪಲ್ಲವಿ ।।
... ಕೊಡಲಿಬೇಕು ಪಾಪದ ಬೇರೆ ಕಡಿವಡೆ ।
ಕೊಡಲಿಬೇಕು ಗುರು ಹಿರಿಯರ ಕೈಯ್ಯಲ್ಲಿ ।
ಕೊಡಲಿಬೇಕು ಸತ್ಪಾತ್ರರಿದ್ದೆಡೆಯಲಿ ।
ಕೊಡಲಿಲ್ಲ ಕೊಡಲಿಲ್ಲ ಕೊಡಲಿಲ್ಲದವಗೆ ।
ಕೊಡಲಿಲ್ಲ ಎನ್ನ ವಡೆಯ ।
ಕೇಳೋ ಅಚಲಾನಂದವಿಠ್ಠಲ ।।
ಆದ್ದರಿಂದ ಮೇಲ್ಕಂಡ ಶ್ರೀ ಅಚಲಾನಂದವಿಠ್ಠಲರ ಕೃತಿಯ ಪ್ರಮಾಣದೊಂದಿಗೆ ಶ್ರೀ ಅಚಲಾನಂದವಿಠ್ಠಲರು ೯ನೇ ಶತಮಾನದವರು ಅಲ್ಲವೆಂದು ಖಚಿತವಾಗಿದೆ.
ಪಲ್ಲವಿ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಹರಿದಾಸ ಸಾಹಿತ್ಯ - ಒಂದು ಚಿಂತನೆ - ಭಾಗ - ೨"
" ಶ್ರೀ ಶ್ರೀಪಾದರಾಜರು "
ದಾಸ ಸಾಹಿತ್ಯಕ್ಕೆ ಶ್ರೀ ನರಹರಿತೀರ್ಥರು ಸಿದ್ಧ ಪಡಿಸಿದ ಉಚ್ಛ ವೇದಿಕೆಯ ಮೇಲೆ ಸುಂದರವಾದ ನಕ್ಷೆಯನ್ನು ಚಿತ್ರಿಸಲು ಮೊದಲು ಮಾಡಿದ ಮಹನೀಯರೆಂದರೆ ಶ್ರೀ ಶ್ರೀಪಾದರಾಜರು.
ಪ್ರಾಚೀನ ಪುರಾಣಗಳಲ್ಲಿ ಚಿತ್ರಿಸಿದ ಭಗವಂತನ ಮಹಿಮೆಗಳನ್ನು ಸರಳಗನ್ನಡ ಅರಳು ನುಡಿಗಳಲ್ಲಿ ಬಿಡಿಸಿ ಸುಂದರವಾಗಿ ಹಾಡಿದರು.
ಇದರಿಂದ ಕನ್ನಡ ಪದ್ಯಗಳಿಗೆ ಸಂಸ್ಕೃತ ಮಂತ್ರಗಳ ಸ್ಥಾನಮಾನ ದೊರೆತು ಕನ್ನಡವನ್ನು ಅಸಡ್ಡೆಯಿಂದ ಕಾಣುವ ಪಂಡಿತ ಪ್ರವೃತ್ತಿಯು ಖಂಡಿತವಾಯಿತು.
ಶ್ರೀ ಶ್ರೀಪಾದರಾಜರ ಕೃತಿಗಳ ವೈಶಿಷ್ಟ್ಯವೆಂದರೆ ಲಾಲಿತ್ಯ ಪೂರ್ಣವಾದ ಸಾಹಿತ್ಯ ಶೈಲಿ. ಶೃಂಗಾರದ ಸೊಗಸು ಕೂಡಾ ಭಕ್ತಿಯ ಸೊಬಗಿಗೆ ಮೆರಗು ಕೊಟ್ಟು ಸಾತ್ವಿಕ ಭಾವಗಳ ತಾತ್ವಿಕ ಕಾರಣವಾಗುತ್ತದೆ.
ಇವರ ಕೃತಿಗಳಲ್ಲಿಯ ಅಲಂಕಾರ ಝೇ೦ಕಾರವೂ ಪ್ರಾಸ ವಿಲಾಸವೂ ಅರ್ಥ ಚಮತ್ಕೃತಿಯೂ ಅವರ ವಿದಗ್ಧ ಶಿರಃ ಪಿಂಡದಲ್ಲಿ ಮಂಜುಳ ನಾದದಿಂದ ಹರಿಯುವ ಕವಿತಾ ನಿರ್ಝರಣಿಯ ಕಿಂಕಿಣಿ ನಿನಾದದ ಗುರುತು ತೋರುತ್ತದೆ. ಇವರ ಅಂಕಿತ " ರಂಗವಿಠ್ಠಲ ".
" ಶ್ರೀ ವ್ಯಾಸರಾಜ ಗುರುಸಾರ್ವಭೌಮರು "
ಮೈಸೂರು ದೇಶದ ಬನ್ನೂರು ಗ್ರಾಮದಲ್ಲಿ ಅವತರಿಸಿ ಶ್ರೀ ಬ್ರಹ್ಮಣ್ಯತೀರ್ಥರಿಂದ ಸಂನ್ಯಾಸಾಶ್ರಮ ಪಡೆದು; ಶ್ರೀ ಶ್ರೀಪಾದರಾಜರಲ್ಲಿ ವ್ಯಾಸಂಗ ಮಾಡಿ; ಅತ್ಯದ್ಭುತವಾದ ಪ್ರತಿಭೆ - ಪಾಂಡಿತ್ಯ - ತಪಸ್ಸು - ಸಿದ್ಧಿ - ಸರ್ವತೋಭದ್ರ ಬುದ್ಧಿಗಳೊಂದಿಗೆ ಪಂಡಿತ ಪ್ರಪಂಚಕ್ಕೆ ಮಂಡನಮಣಿಗಳಾದರು.
ವೇದಾಂತ ಪ್ರಪಂಚದಲ್ಲಿ ಇವರ ಸಾಧನೆ ಅಷ್ಟಿಷ್ಟಲ್ಲ. ಇವರು ರಚಿಸಿದ ಚಂದ್ರಿಕಾ - ನ್ಯಾಯಾಮೃತ - ತರ್ಕತಾಂಡವ ಎಂಬ ಮೂರು ಗ್ರಂಥಗಳು ಶ್ರೀ ನೃಸಿಂಹದೇವರ ಮೂರು ಕಣ್ಣುಗಳಂತೆಯೂ; ಸಾರಸ್ವತ ಪ್ರಪಂಚದ ಮೂರು ರತ್ನಗಳೆಂದು " ವ್ಯಾಸತ್ರಯ " ಗಳೆಂದೂ ಪ್ರಸಿದ್ಧವಾಗಿವೆ.
ಇಷ್ಟು ಮಾತ್ರವಲ್ಲದೆ ಜನ ಸಾಮಾನ್ಯರಲ್ಲಿ ಮಧ್ವ ಸಿದ್ಧಾಂತದ ಬಗೆಗೆ ಅರಿವು ಮೂಡಿ ತತ್ತ್ವ ಪ್ರಸಾರ ಕಾರ್ಯವು ಭರದಿಂದ ಆಗಬೇಕು ಎಂದು ದೂರಾಲೋಚನೆ ಮಾಡಿ ಶ್ರೀ ಪುರಂದರದಾಸ - ಶ್ರೀ ವೈಕುಂಠದಾಸ - ಶ್ರೀ ಕನಕದಾಸರಂಥ ದಾಸಕೂಟ ಧುರೀಣರನ್ನು ತಮ್ಮ ವೇದಾಂತದ ಗರಡಿಯಲ್ಲಿ ತರಬೇತು ಗೊಳಿಸಿದರು.
ಅವರಿಂದ ಕನ್ನಡದಲ್ಲಿ ಆಧ್ಯಾತ್ಮಿಕ ಗೀತೆಗಳನ್ನು ಬರೆಸಿದರು. ಊರು ಊರಿಗೆ ಹೋಗಿ, ಕೇರಿ ಕೇರಿಗಳಲ್ಲಿ ತಿರುಗಿ, ಕನ್ನಡ ಪದ್ಯಗಳನ್ನು ಹಾಡಿ, ಜನ ಸಾಮಾನ್ಯರಿಗೆ ಮಧ್ವ ಸಂದೇಶವನ್ನು ನೀಡಲು ಆಣತಿ ಕೊಟ್ಟರು.
ಮನೆ ಮನೆಗೆ ಹೋಗಿ ಮನ ಮನಕ್ಕೆ ಮುಟ್ಟುವಂತೆ, ಶ್ರೀ ಮಧ್ವರ ಸಂದೇಶ ಎಲ್ಲರ ಹೃದಯಕ್ಕೆ ತಟ್ಟುವಂತೆ ಹಾಡುಗಬ್ಬಗಳಿಂದ ಹಿರಿದಾದ ಕಾರ್ಯವನ್ನು ಮಾಡಿಸಿದ ಪ್ರೇರಣೆ ಕಾರಣಪುರುಷರೆಂದರೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರು!
ಕನ್ನಡದಲ್ಲಿ ಹೊರೆ ಹೊರೆಯಾಗಿ ಕೃತಿಗಳನ್ನು ರಚಿಸಿದ ಶ್ರೀ ಪುರಂದರದಾಸರಿಗೂ, ಶ್ರೀ ಕನಕದಾಸರಿಗೂ ಪಂಡಿತ ಪ್ರಪಂಚದಲ್ಲಿ ಅಗ್ರಪೂಜೆ ಸಲ್ಲಿಸಿ ವ್ಯಾ ಸಾಹಿತ್ಯಕ್ಕೆ ಸರಿದೊರೆಯಾಗಿ ದಾಸ ಸಾಹಿತ್ಯವನ್ನು ತಂದು ನಿಲ್ಲಿಸಿ, ಮನ್ನಿಸಿ, ಗೌರವಿಸಿದ್ದ ಮೊದಲ ಮಹನೀಯರೆಂದರೆ " ಶ್ರೀ ವ್ಯಾಸರಾಜ ಗುರುಸಾರ್ವಭೌಮರು ".
ತಮ್ಮ ವ್ಯಾಸ ಪೀಠದಲ್ಲಿ ಚಂದ್ರಿಕಾದಿ ಗ್ರಂಥಗಳ ಜೊತೆಯಲ್ಲಿ ಕನ್ನಡ ದಾಸರ ಕೃತಿಗಳನ್ನು ತಂದಿರಿಸಿದ ಎಂಟೆದೆಯ ಶ್ರೀಚರಣರೆಂದರೇ " ಶ್ರೀ ವ್ಯಾಸರಾಜ ಗುರುಸಾರ್ವಭೌಮರು "!
ದಾಸರ ಕೃತಿಗಳ ಕಟ್ಟಿಗೆ " ಪುರಂದರೋಪನಿಷತ್ " ಎಂದು ಹೆಸರು ಕೊಟ್ಟು ಭಕ್ತಿ ಪ್ರಧಾನವಾದ ಕನ್ನಡ ಭಾಷೆಯ ಆಧ್ಯಾತ್ಮಿಕ ಸಾಹಿತ್ಯಕ್ಕೆ ಔಪನಿಷದಿಕ ಮೇಲ್ಮೆ, ಮಹತಿಗಳನ್ನು ಸಲ್ಲಿಸಿದ ಬಲ್ಲಿದ ಅರಸೆಂದರೆ " ಶ್ರೀ ವ್ಯಾಸರಾಜ ಗುರುಸಾರ್ವಭೌಮರು "!
ಹೀಗೆ ವ್ಯಾಸಕೂಟದ ಅಧ್ವರ್ಯುಗಳಾದ ಶ್ರೀ ವ್ಯಾಸರಾಜರು ದಾಸಕೂಟದ ಧುರೀಣರೂ ಆಗಿ ನಿಂತುಕೊಂಡು " ಸವ್ಯಸಾಚಿ ಸ್ವಾಮಿ " ಗಳೆಂದು ಕಥಿತಪ್ರಥಿತರಾದರು!
ಶ್ರೀ ಪುರಂದರದಾಸರು ( ಶ್ರೀ ನಾರದಾಂಶರು ), ಶ್ರೀ ಕನಕದಾಸ ( ಶ್ರೀ ಯಮಾಂಶರು ) ರಂಥಾ ದಾಸ ಶ್ರೇಷ್ಠರಿಂದ ಕೂಡಿಕೊಂಡು ತಾಳ ಹಿಡಿದು - ಗೆಜ್ಜೆ ಕಟ್ಟಿಕೊಂಡು - ಕನ್ನಡ ಹಾಡು ಹಾಡಿ, ಪಾಡಿ, ಕುಣಿದು, ನಲಿದು, ನರ್ತಿಸಿ, ಜನ ಸಾಮಾನ್ಯರಲ್ಲಿ ಭಕ್ತಿಯನ್ನು ಬೆಳೆಸಿದರು. ದಾಸ ಸಾಹಿತ್ಯದ ಬಗೆಗೆ ಆದರಾತಿಶಯವನ್ನು ಇಮ್ಮಡಿಸಿದರು. ಜನರಲ್ಲಿ ಹರಿದಾಸರ ಬಗ್ಗೆ ಗೌರವ ಬುದ್ಧಿಯು ಉದಿಸುವಂತೆ ಮಾಡಿದರು.
ಹೀಗೆ ದಾಸರಿಗೂ, ದಾಸ ಸಾಹಿತ್ಯಕ್ಕೂ ಪ್ರೋತ್ಸಾಹನೆ ನೀಡುವದಲ್ಲದೇ ಚಂದ್ರಿಕಾದಿ ಗ್ರಂಥಗಳನ್ನು ಬರೆದ ಲೇಖನಿಯಿಂದ ಕನ್ನಡದಲ್ಲಿಯೂ ಪದ ಪದ್ಯ ಸುಳಾದಿ ಉಗಾಭೋಗಗಳನ್ನು ಬರೆದು ಕನ್ನಡಮ್ಮನ ಉಡಿ ತುಂಬಿದರು.
ಆ ನುಡಿದೇವಿಯ ಮುಡಿಗೆ ಶೃಂಗಾರ ಮಾಡಿದರು. ಅವರ ಹರಿನಾಮ ಕೀರ್ತನೆಗಳಿಂದ ಅಬಾಲಗೋಪಾಲರೂ; ಏನೂ ಅರಿಯದ ಹೆಣ್ಣುಮಕ್ಕಳೂ ಕನ್ನಡದಲ್ಲಿಯೇ ಮಧ್ವಮತವನ್ನು ತಿಳಿದು ಧನ್ಯರಾದರು.
ಶ್ರೀ ವ್ಯಾಸರಾಜರ ಕೀರ್ತನೆಗಳಲ್ಲಿ ಸಂಗೀತದ ಚಾತುರ್ಯ; ಭಕ್ತಿಯ ನೈರ್ಭಯಗಳ ಜೊತೆಗೆ ಸಾಮಾಜಿಕ ಪ್ರಜ್ಞೆಯೂ; ಲೋಕ ಜಾಗೃತಿಯ ಕಳೆಕಳಿಯೂ ಎದ್ದು ಕಾಣುತ್ತದೆ.
ಒಟ್ಟಾರೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರು...
ವ್ಯಾಸ ಕೂಟದ ಧ್ವಜವನ್ನೂ; ದಾಸ ಕೂಟದ ಬಾವುಟವನ್ನೂ ತಮ್ಮ ಎರಡೂ ಕೈಗಳಿಂದ ಎತ್ತಿ ಹಿಡಿದು ದ್ವೈತ ಸಿದ್ಧಾಂತದ ತತ್ತ್ವ - ಸತ್ವ - ಮಹತ್ವಗಳನ್ನು ಜಗತ್ತಿಗೆಲ್ಲಾ ಸಾರಿ ಹೇಳಿದರು. ಇವರ ಅಂಕಿತ " ಶ್ರೀಕೃಷ್ಣ / ಸಿರಿಕೃಷ್ಣ "
ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೇ ।
ನರಕ ಭಾಜನರು ಅಲ್ಪ ಮೂಢರು ಕರಗುವರೇ ।
ಗುರು ಹಿರಿಯರಿಗೆರಗದವಗೆ ಹರಿ ಭಕುತಿ ಸೊಗಸುವದೇ ।
ಕೆರಹು ತಿಂಬ ನಾಯಿಗೆ ತುಪ್ಪ ಸಕ್ಕರೆ ಸೊಗಸುವುದೇ ।
ಚಂದ್ರಕಿರಣಕ್ಕೆ ಚಂದ್ರಕಾಂತ ವಸರುವದಲ್ಲದೇ ।
ಉರುಗಲ್ಲು ವಸರುವದೇ ಸಿರಿಕೃಷ್ಣ ।।
" ಶ್ರೀ ಪುರಂದರದಾಸರು "
ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪ್ರೀತಿಯ ಪಟ್ಟ ಶಿಷ್ಯರು ಶ್ರೀ ಪುರಂದರದಾಸರು. ಇವರು ದಾಸ ಶ್ರೇಷ್ಠರೆಂದು ಪ್ರಸಿದ್ಧರಾದವರು ಮತ್ತು ಶ್ರೀ ನಾರದಾಂಶರೆಂದು ಪುರಾಣ ಪ್ರತೀತರಾಗಿದ್ದಾರೆ!!
ಶ್ರೀ ವ್ಯಾಸರಾಯರು ಕನ್ನಡದಲ್ಲಿ ಪದ ಪದ್ಯಗಳನ್ನು ಬರೆದು ಮಧ್ವ ಮತವನ್ನು ಪ್ರಸಾರ ಮಾಡಬೇಕೆಂದು ಶ್ರೀ ಪುರಂದರದಾಸರಿಗೆ " ಪುರಂದರವಿಠ್ಠಲ " ಎಂಬ ಅಂಕಿತವನ್ನು ನೀಡಿ ಅಪ್ಪಣೆ ಕೊಟ್ಟರು. ಅವರ ಆಜ್ಞಾನುಸಾರ ಶ್ರೀ ಪುರಂದರದಾಸರು ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ ಪದ ಪದ್ಯ ಸುಳಾದಿ ಉಗಾಭೋಗಗಳನ್ನು ರಚಿಸಿದ್ದಾರೆ!!
ಶ್ರೀ ಪುರಂದರದಾಸರ ಕೃತಿಗಳಲ್ಲಿ ಆಧ್ಯಾತ್ಮನಿಷ್ಠತೆ, ಕವಿತಾಶಕ್ತಿ, ಹಾಸ್ಯ, ಸಮಾಜ ವಿಡಂಬನೆ, ಆಳವಾದ ಲೋಕಾನುಭವ, ಮಾನವೀಯ ಸ್ವಭಾವ ವಿಶ್ಲೇಷಣ ಮುಂತಾದ ಗುಣಗಳು ಪ್ರಮುಖವಾಗಿ ಎದ್ದು ಕಾಣುತ್ತವೆ.
ಕೆಲವು ಕಡೆಗಳಲ್ಲಿ ಅವರ ವಾಣಿಯು ಬಾಣವಾಗಿ, ನುಡಿಗಳೆಲ್ಲ ಕಿಡಿಗಳಾಗಿ; ಮಾತು ಮೊನಚಾಗಿ; ಚಾಟೂಕ್ತಿಗಳ ನೆವದಿಂದ ಚಾವಟಿಯ ಏಟುಗಳನ್ನು ಹಾಕಿದಂತೆ ತೋರಿದರೂ ಅದರ ಹಿಂದೆ ಲೋಕ ಕಲ್ಯಾಣಾಕಾಂಕ್ಷೆಯ ಕಳಕಳಿಯಿದೆ.
ಸಾಮಾಜಿಕ ಹೃದಯದ ಬಿರುಕುಗಳನ್ನು ಬೆಸೆಯುವ ಮರಕವೂ ಹಾಳು ಹರಕುಗಳನ್ನು ಹೊರೆಯುವ ಅವರ ಹೃದಯದ ಹಂಬಲವೂ ಒಳ ಹೊಕ್ಕು ಪರಿಕಿಸಿದರೆ ಗೋಚರವಾಗುವವು.
ಹೀಗೆ ವಿವಿಧ ಹಂತಗಳಲ್ಲಿ ನಾಡು - ನುಡಿ - ಸಿದ್ಧಾಂತ - ಸಮಾಜಗಳ ಸೇವೆಗೈಯ್ದ ಶ್ರೀ ಪುರಂದರದಾಸರು ಭಾರತದೇಶಕ್ಕೆ ಕೊಟ್ಟ ದೊಡ್ಡ ಕೊಡುಗೆ ಎಂದರೆ " ಕರ್ನಾಟಕ ಸಂಗೀತ ".
ಶ್ರೀ ಪುರಂದರದಾಸರು ಕರ್ನಾಟಕ ಸಂಗೀತದ ಮೂಲದಷ್ಟ್ರಾರರೆಂದು - ಮಹಾ ಮಹರ್ಷಿಗಳೆಂದು ಇಂದು ಎಲ್ಲಾ ವಿಚಾರವಂತರೂ ಒಪ್ಪಿಕೊಂಡಿದ್ದಾರೆ.
ಸರಸ ಸಾಹಿತ್ಯಕ್ಕೆ ಸುಂದರವಾದ ಸಂಗೀತದ ಮಾಧುರ್ಯವನ್ನು ಬೆರಸಿ, ಲಕ್ಷಣ ಶಾಸ್ತ್ರದ ಅಲಂಕಾರವನ್ನು ತೊಡಿಸಿ, ಆಧ್ಯಾತ್ಮದ ಒಪ್ಪವಿಟ್ಟು, ಜಗದೋದ್ಧಾರಕ್ಕಾಗಿ ಮೂಡಿ ಬಂದ ಶ್ರೀ ಪುರಂದರದಾಸರ ಹಾಡುಗಬ್ಬುಗಳನ್ನು ಹಾಡುವವರಿಗೂ; ಕೇಳುವವರಿಗೂ ಹೃದಯಕ್ಕೆ ಹಬ್ಬವಾಗಿ; ಕನ್ನಡ ವೇದಗಳಾಗಿ, ಬೋಧ - ಮೋದ - ವಿನೋದಗಳನ್ನು ಒದಗಿಸಿ ಆತ್ಮಶೋಧಕ್ಕೆ ದಾರಿ ತೋರಿಸುವ ಆತ್ಮಾನಂದದ ಆಸ್ವಾದಕ್ಕೆ ಮುತ್ತಿನ ಮಾಲೆಗಳಂತೆ ಇರುತ್ತವೆ.
ಏಳುತ್ತ ಗೋವಿಂದಗೆ ಕೈಯ ಮುಗಿವೆ ।
ಕಣ್ಣೆವೆ ತೆಗೆದು ನೋಡುವ ಶ್ರೀ ಹರಿಯ ।
ನಾಲಿಗೆಯಲಿ ನಾರಾಯಣ ನರಹರಿ ।
ಸೋಳಸಾಸಿರ ನಾರಿಯರರಸ ಯೆಂದೆ ।
ಎನ್ನಾಳುವ ಧೊರೆಯೇ ಪುರಂದರವಿಠ್ಠಲ।।
" ಶ್ರೀ ಕನಕದಾಸರು "
ಶ್ರೀ ಕನಕದಾಸರು ಶ್ರೀ ಯಮಧರ್ಮರಾಜರ ಅವತಾರರು. ಒಮ್ಮೆ ಪರಚಕ್ರದಾಳಿಗೆ ತುತ್ತಾದಾಗ ಅವರಿಗೆ ವೈರಾಗ್ಯ ಉದಯವಾಯಿತು. ಆಗಲೇ ತಮ್ಮ ಢಣಾಯಕ ಪದವೀ, ಅಧಿಕಾರ, ಐಶ್ವರ್ಯಗಳಿಗೆಲ್ಲಾ ತಿಲಾಂಜಲಿಯಿತ್ತು ಹರಿದಾಸರಾದರು.
ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲಿ ಎಕಾದಾರಿ ತಂಬೂರಿ, ಚಿಟಿಕೆಗಳನ್ನು ಹಿಡಿದು ತಮ್ಮ ಕುಲಸ್ವಾಮಿಯಾದ ಕಾಗಿನೆಲೆಯ ಆದಿಕೇಶವನ ಕೊಡಾಡುತ್ತಾ ವಿಜಯನಗರಕ್ಕೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿದ್ದಲ್ಲಿಗೆ ಬಂದರು.
ಶ್ರೀ ವ್ಯಾಸರಾಜರಿಂದ " ಆದಿಕೇಶವ " ಯೆಂಬ ಅಂಕಿತವನ್ನೂ; ದ್ವೈತ ಸಿದ್ಧಾಂತದ ದಿವ್ಯ ಜ್ಞಾನವನ್ನೂ ಪಡೆದು ಹರಿ ಭಕ್ತಿಯ ಹರಿಕಾರರಾಗಿ ಶ್ರೀ ಕನಕದಾಸರು ಅನೇಕ ಕೃತಿಗಳನ್ನೂ, ಷಟ್ಪದಿ, ಸಾಂಗತ್ಯ ಕಾವ್ಯಗಳನ್ನೂ ಮಧುರ ಮನೋಹರವಾದ ಸರಸ ಶೈಲಿಯಲ್ಲಿ ಕವನಿಸಿದರು!!
೧. ಹರಿಭಕ್ತಿಸಾರ
೨. ಮೋಹನತರಂಗಿಣೀ
೩. ರಾಮಧಾನ್ಯ ಚರಿತ್ರೆ
೪. ನಳ ಚರಿತ್ರೆ
೫. ನೃಸಿಂಹ ಸ್ತವ
ಮುಂತಾದ ಖಂಡ ಕಾವ್ಯಗಳು ನವರಸಗಳ ಅಖಂಡ ಕಾರಂಜಿಗಳಂತೆ ರಸಿಕರಿಗೆ ಆನಂದವನ್ನುಂಟು ಮಾಡುತ್ತಲಿವೆ. ಇವುಗಳಲ್ಲಿ ೧೮ನೇ ಶತಮಾನದ ಕನ್ನಡ ಸಾಹಿತ್ಯದ ಸೊಬಗು, ಸೊಗಸು, ಛಂಧೋವೈವಿಧ್ಯ ಬಂಧನದ ಬಿಗುವು; ಮಾತಿನ ಮೆರಗು; ಉಕ್ತಿ ವೈಚಿತ್ರ್ಯ; ಭಾವಾವಿಷ್ಕರಣದ ನ್ಯಾಯ - ನೈಪುಣ್ಯ ಮುಂತಾದ ಗುಣಗಳು ಸ್ಫುಟವಾಗಿ, ಹೇರಳವಾಗಿ ಕಂಡು ಬರುತ್ತವೆ.
ಶ್ರೀ ಕನಕದಾಸರ ಮಾತುಗಳಲ್ಲಿ ಮಾರ್ಮಿಕವಾದ ದೃಷ್ಟಾಂತಗಳಿಂದ, ಉಪಮೆ - ಉತ್ಪ್ರೇಕ್ಷಾದಿ ಅಲಂಕಾರಗಳಿಂದ, ಸಂಸಾರದಲ್ಲಿ ವೈರಾಗ್ಯವನ್ನುಟ್ಟಿಸಿ, ಮುಕ್ತಿಗೂ ಅದಕ್ಕೆ ಸಾಧನವಾದ ಭಕ್ತಿಗೂ ಜನರನ್ನು ಅಭಿಮುಖಗೈಯುವ ಯುಕ್ತಿಯಿದೆ.
ಹಲವು ಜನುಮದಿ ತಾಯಿ ಯೆನಗಿತ್ತ ಮೊಲೆ ಹಾಲು ।
ನಲಿದುಂಬಾಗ ಹನಿ ನೆಲಕ್ಕೆ ಬಿದ್ದುದು ಕೂಡಿ ।
ಅಳೆಯೇ ಕ್ಷೀರಾಂಬುಧಿಗೆ ಇಮ್ಮಿಗಿಲೋ ।।
" ಶ್ರೀ ಭಾವಿಸಮೀರ ವಾದಿರಾಜರು "
ಶ್ರೀ ವಾದಿರಾಜ ಗುರುಸಾರ್ವಭೌಮರು ಲಾತವ್ಯರ ಅಂಶ ಸಂಭೂತರು. ಶಾಸ್ತ್ರ ಪ್ರಪಂಚದಲ್ಲಿ ಸೀಮಾ ಪುರುಷರಾದ ಶ್ರೀ ವಾದಿರಾಜರು ಸಂಸ್ಕೃತದಲ್ಲಿ ಪ್ರೌಢ ಶಾಸ್ತ್ರೀಯ ಪದ್ಧತಿಯಲ್ಲಿ ೧೬ ಗ್ರಂಥಗಳನ್ನೂ; ಅದರಂತೆ ಕನ್ನಡದಲ್ಲಿಯೂ " ಹಯವದನ " ಹರಿ ಪ್ರಸಾದಾಂಕಿತದಲ್ಲಿ ಅನೇಕ ಪದ ಪದ್ಯಗಳನ್ನೂ; ವೈಕುಂಠ ವರ್ಣನೆ, ಲಕ್ಷ್ಮೀ ಶೋಭಾನೆ; ಗುಂಡಕ್ರಿಯೆ, ಸ್ವಪ್ನಪದ, ಮಧ್ವಸುವ್ವಾಲಿ, ಭ್ರಮರಗೀತೆ, ಕೀಚಕವಧೆ ಮುಂತಾದ ಸರಸ ಕೃತಿಗಳನ್ನು ರಚಿಸಿದ್ದಾರೆ.
ಇವುಗಳಲ್ಲಿ ವೇದ - ಉಪನಿಷತ್ - ನಿಗಮಾಗಮ, ಸೂತ್ರ ಪುರಾಣಗಳಲ್ಲಿ ಪ್ರತಿಪಾದಿತವಾದ ಪ್ರಮೇಯಗಳನ್ನು ಸಾಹಿತ್ಯದ ಶೈಲಿಗೆ ಒಗ್ಗುವಂತೆ ಹಿಗ್ಗಿಸಿ - ಬಗ್ಗಿಸಿ - ಅಂದಚಂದವಾಗಿ ಹೆಣೆದು ಹೊಂದಾಣಿಕೆ ಮಾಡಿ ಹಾಡಿದ್ದಾರೆ.
ವೇದಾಂತದ ಮುದ್ರಾಧಾರಣ ಮಾಡಿದ ಇವರ ಕೃತಿಗಳಳ್ಳಿ ಶಾಸ್ತ್ರೀಯ ಸಾಹಿತ್ಯದ ಹೊಸ ಸೊಗಸು ಮೂಡಿ ಮೆರೆದಿದೆ.
ಈ ಮೊದಲ ಘಟ್ಟದ ಪರಂಪರೆಯಲ್ಲಿ...
ಶ್ರೀ ವಿಜಯೀ೦ದ್ರತೀರ್ಥರು ( ವಿಜಯೀ೦ದ್ರರಾಮ )
ಶ್ರೀ ವೈಕುಂಠದಾಸರು ( ವೈಕುಂಠ ವಿಠ್ಠಲ )
ಶ್ರೀ ಗೋವಿಂದ ಒಡೆಯರು ( ಮುದ್ದುಕೃಷ್ಣ )
ಶ್ರೀ ಪರಶು ಭಾಗವತ ( ಶ್ರೀ ವರದ ಪುರಂದರವಿಠ್ಠಲ )
ಶ್ರೀ ಅಪ್ಪಣ್ಣ ಭಾಗವತ ( ಶ್ರೀ ಗುರು ಪುರಂದರವಿಠ್ಠಲ )
ಶ್ರೀ ಅಭಿನವ ಪುರಂದರವಿಠ್ಠಲ
ಶ್ರೀ ಗುರುಮಧ್ವಪತಿ
ಶ್ರೀ ತಿಮ್ಮಣ್ಣಾರ್ಯರು ( ಖಾದ್ರಿ ನರಸಿಂಹ )
ಶ್ರೀ ಸಿಕಾರಿಪುರ ನಾರಾಯಣಪ್ಪ ಕೋಳಿವಾಡ ( ಗದುಗಿನ ವೀರ ನಾರಾಯಣ - ಕುಮಾರವ್ಯಾಸ )
" ಆಧುನಿಕ ಹರಿದಾಸರ ಮೂಲ ಸ್ಫೂರ್ತಿ ಮತ್ತು ಪ್ರೇರಕ ಶಕ್ತಿ "
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ( ಅಂಕಿತ : ವೇಣುಗೋಪಾಲ )
ಶ್ರೀ ವಾದೀಂದ್ರತೀರ್ಥರು ( ವಾದೀಂದ್ರಯತಿ )
ಶ್ರೀ ವರದೇಂದ್ರತೀರ್ಥರು ( ವರದೇಂದ್ರಯತಿ )
ಶ್ರೀ ಮಹಿಪತಿವಿಠ್ಠಲ
ಶ್ರೀ ಗುರು ಮಹಿಪತಿವಿಠ್ಠಲ
ಶ್ರೀ ತಂದೆ ಮಹಿಪತಿವಿಠ್ಠಲ
ಶ್ರೀ ಪ್ರಸನ್ನವೆಂಕಟದಾಸರು ( ಶ್ರೀ ಪ್ರಸನ್ನವೆಂಕಟಕೃಷ್ಣ )
ಶ್ರೀ ದಾಸಪ್ಪದಾಸರು ( ಶ್ರೀ ವಿಜಯವಿಠ್ಠಲ )
ಶ್ರೀ ಆನಂದದಾಸರು ( ಶ್ರೀ ಹಯವದನವಿಠ್ಠಲ )
ಶ್ರೀ ಭಾಗಣ್ಣದಾಸರು ( ಶ್ರೀ ಗೋಪಾಲವಿಠ್ಠಲ )
ಶ್ರೀ ವ್ಯಾಸತತ್ವಜ್ಞತೀರ್ಥರು ( ಶ್ರೀ ವಾಸುದೇವವಿಠ್ಠಲ )
ಸಾಧ್ವೀ ಗಿರಿಯಮ್ಮನವರು ( ಶ್ರೀ ಹೆಳವನಕಟ್ಟೆ ರಂಗ )
ಶ್ರೀ ಮೋಹನದಾಸರು ( ಶ್ರೀ ಮೋಹನವಿಠ್ಠಲ )
ಶ್ರೀ ಪಂಗನಾಮದ ತಿಮ್ಮಣ್ಣದಾಸರು ( ಶ್ರೀ ವೇಣುಗೋಪಾಲವಿಠ್ಠಲ )
ಶ್ರೀ ಬೇಲೂರು ವೆಂಕಟದಾಸರು ( ಶ್ರೀ ವೆಂಕಟೇಶವಿಠ್ಠಲ )
ಶ್ರೀ ಹೊನ್ನಾಳಿ ವೆಂಕಪ್ಪಾಚಾರ್ ( ಶ್ರೀ ವೆಂಕಟವಿಠ್ಠಲ )
ಶ್ರೀ ಮೀನಪ್ಪದಾಸರು ( ಶ್ರೀ ಮುದ್ದುವಿಠ್ಠಲ )
ಶ್ರೀ ಕೂಡ್ಲಿ ಮಧ್ವಾಚಾರ್ಯ ( ಶ್ರೀ ಗುರುಮಧ್ವೇಶವಿಠ್ಠಲ )
ಶ್ರೀ ಶೇಷಗಿರಿದಾಸರು ( ಶ್ರೀ ಹಯಗ್ರೀವವಿಠ್ಠಲ )
ಶ್ರೀ ಗುರು ವಾಸುದೇವವಿಠ್ಠಲ
ಶ್ರೀ ತಂದೆ ವಾಸುದೇವವಿಠ್ಠಲ
ಶ್ರೀ ನರಸಿಂಹಾಚಾರ್ಯರು ( ಶ್ರೀ ನರಸಿಂಹವಿಠ್ಠಲ )
ಶ್ರೀ ಶೀನಪ್ಪದಾಸರು ( ಶ್ರೀ ಗುರುಗೋಪಾಲವಿಠ್ಠಲ )
ಶ್ರೀ ದಾಸಪ್ಪ ದಾಸರು ( ಶ್ರೀ ವರದ ಗೋಪಾಲವಿಠ್ಠಲ)
ಶ್ರೀ ಶ್ರೀನಿವಾಸಾಚಾರ್ಯರು ( ಶ್ರೀ ಜಗನ್ನಾಥವಿಠ್ಠಲ )
ಶ್ರೀ ಯೋಗೀ೦ದ್ರರಾಯರು ( ಶ್ರೀ ಪ್ರಾಣೇಶದಾಸರು )
ಶ್ರೀ ಕರ್ಜಗಿ ದಾಸಪ್ಪನವರು ( ಶ್ರೀ ಶ್ರೀದವಿಠ್ಠಲ )
ಶ್ರೀ ರಂಗಪ್ಪ ದಾಸರು ( ಶ್ರೀ ತಂದೆ ಗೋಪಾಲವಿಠ್ಠಲ )
ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರು ( ಶ್ರೀ ವ್ಯಾಸವಿಠ್ಠಲ )
ಶ್ರೀ ಹುಂಡೇಕಾರದಾಸರು ( ಶ್ರೀ ಶ್ರೀಶವಿಠ್ಠಲ )
ಶ್ರೀ ಬುದ್ದಿನ್ನಿ ನಾರಪ್ಪಾ ( ಶ್ರೀ ಮನೋಹರವಿಠ್ಠಲ )
ಶ್ರೀ ಅಣ್ಣಿಗೇರಿ ರಾಮರಾಯರು ( ಶ್ರೀ ಗೋಪತಿವಿಠ್ಠಲ )
ಶ್ರೀ ವೈರಾಗ್ಯಶಾಲಿ ತಿಮ್ಮಣ್ಣದಾಸರು ( ಶ್ರೀ ರಘುಪತಿವಿಠ್ಠಲ )
ಶ್ರೀ ಜನಾರ್ದನವಿಠ್ಠಲ
ಶ್ರೀ ಪ್ರೇಮದಾಸರು ( ಶ್ರೀ ಅಭಿನವ ಜನಾರ್ದನವಿಠ್ಠಲ )
ಶ್ರೀ ಗುರು ಪ್ರಾಣೇಶವಿಠ್ಠಲ
ಶ್ರೀ ಶ್ರೀಶ ಪ್ರಾಣೇಶವಿಠ್ಠಲ
ಶ್ರೀ ಗುರು ಶ್ರೀಶ ಪ್ರಾಣೇಶವಿಠ್ಠಲ
ಶ್ರೀ ಭಾಗ್ಯನಿಧಿವಿಠ್ಠಲ
ಶ್ರೀ ಕೇಶವವಿಠ್ಠಲ
ಶ್ರೀ ಶ್ರೀಶ ಕೇಶವವಿಠ್ಠಲ
ಶ್ರೀ ಕುಂಟೋಜಿದಾಸರು ( ಶ್ರೀ ಗುರು ಶ್ರೀಶವಿಠ್ಠಲ )
ಶ್ರೀ ಸುರಪುರದ ಆನಂದದಾಸರು ( ಶ್ರೀ ಕಮಲೇಶವಿಠ್ಠಲ )
ಶ್ರೀ ಶ್ರೀಪತಿವಿಠ್ಠಲ
ಶ್ರೀ ತಂದೆ ಶ್ರೀಪತಿವಿಠ್ಠಲ
ಶ್ರೀ ಮೊದಲಕಲ್ಲು ಶೇಷದಾಸರು
ಶ್ರೀ ಗುರು ಜಗನ್ನಾಥದಾಸರು
ಶ್ರೀ ಶ್ರೀ ವೆಂಕಟೇಶವಿಠಲರು
ಶ್ರೀ ಲಕ್ಷ್ಮೀಶವಿಠಲರು
ಶ್ರೀ ವರದೇಶವಿಠಲರು
ಶ್ರೀ ವರದೇಂದ್ರವಿಠಲರು
ಶ್ರೀ ಆನಂದವಿಠಲರು
ಶ್ರೀ ಸುಂದರವಿಠ್ಠಲ
ಶ್ರೀ ಸಿರಿ ಗೋವಿಂದವಿಠ್ಠಲ ( ಶ್ರೀ ಅಸ್ಕಿಹಾಳ ಗೋವಿಂದದಾಸರು )
ಶ್ರೀ ಶ್ಯಾಮಸುಂದರದಾಸರು
ಶ್ರೀ ಮುದ್ದುಮೊಹನವಿಠ್ಠಲ
ಶ್ರೀ ತಂದೆ ಮುದ್ದುಮೊಹನವಿಠ್ಠಲ
ಶ್ರೀ ಪದ್ಮನಾಭದಾಸರು
ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ( ಶ್ರೀ ಲಕುಮೀಶ )
ಶ್ರೀ ಉರಗಾದ್ರಿವಾಸವಿಠ್ಠಲ
ಶ್ರೀ ಗುರುಗೋವಿಂದವಿಠ್ಠಲ
ಶ್ರೀ ತಂದೆ ವೆಂಕಟೇಶವಿಠ್ಠಲ
ಶ್ರೀ ಸೀಮಾಮ
ಇಲ್ಲಿ ಪ್ರಥಮ - ದ್ವಿತೀಯ ಮತ್ತು ತೃತೀಯ ಘಟ್ಟದ ಹರಿದಾಸರುಗಳಲ್ಲಿ ಕೆಲವು ಹರಿದಾಸರುಗಳನ್ನು ಮಾತ್ರ ಕೊಡಲಾಗಿದೆ. ಹರಿದಾಸ ಶಿಷ್ಯ - ಪ್ರಶಿಷ್ಯ ಪರಂಪರೆಯಲ್ಲಿ ಸುಮಾರು ೫೦೦೦ಕ್ಕೂ ಅಧಿಕ ಹರಿದಾಸರುಗಳು ಇದ್ದಾರೆಂದು ತಿಳಿದುಬಂದಿದೆ. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ.
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
Women Writers
8 MAR 2020 ವಿಜಯವಾಣಿ ಸಾಹಿತ್ಯ ಸಂಗೀತದಲ್ಲಿ ಸ್ತ್ರೀಶಕ್ತಿ
ಮಹಿಳೆಯರ ಸಾಧನೆಯ ಪರಿಚಯವೆಂದರೆ ಸಂಬಂಧಿತ ಕ್ಷೇತ್ರದ ಚರಿತ್ರೆಯ ಪರಿಚಯವೇ. ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯನ್ನು ಹತ್ತು ಜನ ಬರೆದರೆ, ಬರವಣಿಗೆಯ ಶೈಲಿ ಮತ್ತು ವಿಧಾನಗಳಲ್ಲಿ ವ್ಯತ್ಯಾಸವಾಗಬಹುದೇ ವಿನಾ ಸಂಗತಿಗಳಲ್ಲಿ, ನಡೆದ ಘಟನೆಗಳಲ್ಲಿ ಯಾವುದೇ ವ್ಯತ್ಯಾಸ ಕಾಣಲಾಗದು. ಹಾಗೆಯೇ ಸಾಧಕಿಯರ ಚರಿತ್ರೆಯಲ್ಲೂ ಅಂಥದೊಂದು ಪುರಾವೆ ಇಲ್ಲದೇ ಯಾವುದೇ ವ್ಯತ್ಯಾಸಗಳನ್ನು ಮಾಡಲಾಗದು. ಬಿಡಲಾಗದ ಬಿಡಬಾರದ ಅದೇ ಮೈಲುಗಲ್ಲು ಸ್ಥಾಪಿಸಿದ ಹೆಸರುಗಳು, ಅದೇ ಸಂಗತಿಗಳು, ಅದೇ ಕ್ರಮ. ವ್ಯತ್ಯಾಸ ಕಂಡರೆ ಕೆಲವು ಅಂಶಗಳಲ್ಲಿ ಮಾತ್ರ. ಒಂದೋ ಎರಡೋ ಕೃತಿ ರಚನೆಗಳೇ ದೊಡ್ಡ ಸಾಧನೆಯಾಗಿದ್ದ ಕಾಲದಿಂದಲೇ ಮಹಿಳೆಯರೂ ತಂತಮ್ಮ ಉತ್ತಮ ಕೃತಿ ರಚನೆಗಳಿಂದ ಸಾಧಕಿಯರ ಪಟ್ಟಿಯಲ್ಲಿ ಸೇರಿರುವುದನ್ನು ಬಾದಾಮಿ ಚಾಲುಕ್ಯರ ಕಾಲದಿಂದಲೇ ಕಾಣಬಹುದು. ಸಂಸ್ಕೃತ ಪಂಡಿತೆಯಾಗಿದ್ದ ಚಂದ್ರಾದಿತ್ಯನ ಪತ್ನಿ ವಿಜಯ ಭಟ್ಟಾರಿಕೆ (ವಿಜ್ಜಿಕಾ) ಬರೆದ ಕೌಮುದೀ ಮಹೋತ್ಸವ ಎಂಬ ಸಂಸ್ಕೃತದ ನಾಟಕವೇ ಮಹಿಳಾ ರಚಿತ ಪ್ರಥಮ ಕೃತಿ ಎನಿಸುತ್ತದೆ. ಇದು ಚಾಲುಕ್ಯರ ಕಾಲದ ಒಂದು ಉತ್ತಮ ಕೃತಿ ಎಂದು ಪರಿಗಣಿತವಾಗಿತ್ತೆಂದರೆ ಅದು ಮಹತ್ಸಾಧನೆಯೇ ಸರಿ. ದ್ವಾರ ಸಮುದ್ರದ ಬಲ್ಲಾಳರಾಯನ ಸಭೆಯಲ್ಲಿ ಪಂಡಿತೆಯಾಗಿದ್ದ ಕಂತಿಯು ಹನ್ನೊಂದನೆಯ ಶತಮಾನದಲ್ಲಿ (1010) ಕಾಣಬರುವ ಕನ್ನಡದ ಮೊದಲ ಕವಯತ್ರಿ. ತಿರುಪು ಪದ ಬಳಕೆ, ದತ್ತಪಾದಿ ಪದ್ಯ ರಚನೆ, ನಿರೋಷ್ಠ್ಯ (ತುಟಿ ಸೇರದ) ಪದಗಳಿಂದ ಪದರಚನೆ ಮಾಡುತ್ತಿದ್ದ ಕಂತಿಯು ಅವಧಾನ ಕಲೆಯ ಸಾಹಿತ್ಯ ರಚಿಸಿದ ಮೊದಲ ಮಹಿಳೆಯೂ ಹೌದು.
ನಂತರ ಸಮಾಜ ಸುಧಾರಣೆ, ಅಧ್ಯಾತ್ಮದ ಮಾರ್ಗ, ಅಧರ್ಮದ ಟೀಕೆ, ವೈರಾಗ್ಯ, ಅಸಮಾನತೆ, ಸ್ತ್ರೀಯರು ಅಂದು ಅನುಭವಿಸುತ್ತಿದ್ದ ಸಮಸ್ಯೆಗಳು ಇತ್ಯಾದಿಗಳೆಲ್ಲದರ ಕಡೆ ತಮ್ಮ ಚಿಂತನೆಗಳನ್ನು ಹರಿಸಿ, ವಚನಗಳ ಮೂಲಕ ಜನರನ್ನು ಎಚ್ಚರಿಸಿ, ಅವರ ಮನೋಭಾವವನ್ನು ಬದಲಿಸುವ ಕಾರ್ಯಕ್ಕೆ ಇಳಿದವರು ಹನ್ನೆರಡನೇ ಶತಮಾನದ ವಚನಕಾರ್ತಿಯರು. ಸಮಾಜದ ಎಲ್ಲ ವೃತ್ತಿಗಳಿಂದ, ಎಲ್ಲ ವರ್ಗ, ಜಾತಿಗಳಿಂದ ಬಂದು ಒಟ್ಟಾಗಿ ಸೇರಿ, ಒಂದು ಸಾಮೂಹಿಕ ಚಳವಳಿಯನ್ನೇ ನಡೆಸಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮರೆಯಲಾಗದ ದಾಖಲೆಯನ್ನು ನಿರ್ವಿುಸಿದವರು ಅಕ್ಕನಾಗಮ್ಮ, ಗೊಗ್ಗವ್ವೆ, ಕಾಳವ್ವೆ, ಗಂಗಾಂಬಿಕೆ, ನೀಲಾಂಬಿಕೆ, ವರದಾನಿ ಗುಡ್ಡವ್ವೆ ಮುಂತಾದ ವಚನಕಾರ್ತಿಯರು. ಸರಳ ಹಾಗೂ ಅಚ್ಚ ಕನ್ನಡದಲ್ಲಿ ವಚನಗಳನ್ನು ರಚಿಸಿ ಸಮಾಜದ ಬದಲಾವಣೆಯನ್ನು ಸಾಧಿಸಿದವರು. ಈ ಮಹಿಳೆಯರೆಲ್ಲರ ಶಿಖಾಮಣಿಯಂತೆ ಮೆರೆದ ಮೇರು ಪ್ರತಿಭೆಯೆಂದರೆ, ಶಿವಶರಣೆ ಅಕ್ಕಮಹಾದೇವಿ. ದೈವಭಕ್ತೆ, ವಿರಾಗಿ, ಚಿಂತಕಿ ಎಲ್ಲವೂ ಆದ ಮಹಾನ್ ಸ್ತ್ರೀಶಕ್ತಿ. ಮದುವೆ, ಸಂಸಾರ, ಬಾಳಬಂಧನಗಳ ಸಂಕೋಲೆಗಳನ್ನು ಕಡಿದೊಗೆದು, ಅಗೋಚರ ಚೆನ್ನಮಲ್ಲಿಕಾರ್ಜುನನ್ನು ಪತಿಯಾಗಿ ವರಿಸಿ, ತನ್ನ ವಚನಗಳ ದೀವಿಗೆ ಹಿಡಿದು ಆತನಿಗಾಗಿ ನಡೆಸಿದ ಹುಡುಕಾಟ, ಆ ಆಂತರಿಕ ಹೋರಾಟ, ಇನ್ನಾರಲೂಲ ಕಾಣಲಾಗದ ಒಂದು ಉಗ್ರ ಸಾಧನೆಯೇ ಸರಿ. ಭಕ್ತಿ ಭಂಡಾರಿ ಬಸವಣ್ಣನವರ ನಾಯಕತ್ವದಲ್ಲಿ ವಚನ ಚಳವಳಿ ನಡೆದಂತೆ, ಪುರಂದರ ದಾಸರ ನಾಯಕತ್ವದಲ್ಲಿ ಮುಂದುವರೆದದ್ದು ದಾಸ ಸಾಹಿತ್ಯ ಚಳವಳಿ. ಈ ಕಾಲದಲ್ಲಿ ಜನರ ಮನಸ್ಸನ್ನು ಆಕರ್ಷಿಸಿದ್ದು ಭಕ್ತಿಯ ಸಾಧನೆ. ಸರಳ ಮಾರ್ಗದ ಮೂಲಕ ಲಭ್ಯವಾಗುವ ಹರಿಸ್ಮರಣೆಯ ಸೌಲಭ್ಯ, ಹೃದಯದಲ್ಲೇ ಅಡಗಿರುವ ಹರಿಯ ಉಪಾಸನೆ. ಪುರಂದರ ದಾಸರ ಸಾಹಿತ್ಯರಚನೆಯ ಆಸಕ್ತಿಯನ್ನು ತಮ್ಮೊಳಗಿಟ್ಟುಕೊಂಡು ಮುಂದುವರೆಸಿದ ದಾಸ ಕವಯತ್ರಿಯರ ಸಾಹಿತ್ಯವನ್ನು ಅವರ ನಂತರದ ಶತಮಾನಗಳಲ್ಲೂ ಕಾಣಬಹುದು. ರಾಣೆಬೆನ್ನೂರಿನಲ್ಲಿ ಜನಿಸಿದ ಹೆಳವನಕಟ್ಟೆ ಗಿರಿಯಮ್ಮ, ಬಿಜಾಪುರದ ಗಲಗಲಿ ಅವ್ವ, ಪ್ರಯಾಗಬಾಯಿ, 16-17ನೇ ಶತಮಾನದ ದಾಸ ಮಹಿಳೆಯರು. ಅಂಬಾಬಾಯಿ 20ನೇ ಶತಮಾನದಾಕೆ.
ಅವ್ವಂದಿರ ಸಾಹಸಯಾತ್ರೆ
'ಮಡಿಹೆಂಗಸು ಅಥವಾ ವಿಧವೆ ಎಂದರೆ ಅಪಶಕುನ, ಇವರು ಮುಟ್ಟಿದ್ದು, ನೋಡಿದ್ದು ಹಾಳು' ಎಂಬ ನಂಬಿಕೆಯಿಂದ, ಇಂಥವರ ಜೀವನವನ್ನು ಅಡುಗೆಮನೆಗೇ ಸೀಮಿತಗೊಳಿಸುತ್ತಿದ್ದ ಕಾಲದಲ್ಲಿ, ತಮ್ಮ ವೈಧವ್ಯವನ್ನು ಸಾಹಿತ್ಯ ರಚನೆಯಿಂದ ಮತ್ತು ಸಮಾಜ ಸೇವೆಯಿಂದ ಸಾರ್ಥಕಪಡಿಸಿಕೊಂಡವರು, ಚರಿತ್ರೆಯ ಉದ್ದಕ್ಕೂ ಕಾಣಸಿಗುತ್ತಾರೆ. ಹನ್ನೆರಡು ವರ್ಷದ ಕನ್ಯೆ ಗಲಗಲಿ ಅವ್ವ ತೊಂಬತ್ತೈದರ ಮುದುಕ ವಿದ್ವಾಂಸರನ್ನು ಮದುವೆಯಾದ ಎಂಟನೆ ದಿನವೇ ವಿಧವೆಯಾದವಳು. ನಂತರ ಮನೆಯವರಿಂದಲೇ ಓದು ಕಲಿತು ಕೃತಿ ರಚಿಸಿದವರು. ದೇವರಾಯನ ದುರ್ಗದ ಪರಮಪ್ರಿಯ ಸುಬ್ಬರಾಯದಾಸರ ಶಿಷ್ಯೆಯಾಗಿ ಅಂಕಿತ ಪಡೆದ ಅಂಬಾಬಾಯಿ ಅವರ ಸಾಧನೆ ಅನುಪಮ. 1902ರಲ್ಲಿ ಹುಟ್ಟಿ ದಾಸ ಸಾಹಿತ್ಯವನ್ನು ಅಪ್ಪಿಕೊಂಡು, ಜೀವ ಸವೆಸಿದ ದಾಸ ಕವಯತ್ರಿ. ನಾಲ್ನೂರು ದೇವರನಾಮಗಳನ್ನೂ, ಸುದೀರ್ಘ ಪದಗಳನ್ನೂ ಅಲ್ಲದೆ, 1935ರಲ್ಲಿಯೇ 'ಶ್ರೀರಾಮ ಕಥಾಮೃತ ಸಾರ' ಎಂಬ ರಾಮಾಯಣ ಮಹಾಕಾವ್ಯವನ್ನು ಬರೆದ ಪ್ರಥಮ ಮಹಿಳೆ. ಅಕ್ಷರಶಃ ದಾಸಿಯಾಗಿ ಭುಜಕ್ಕೆ ಜೋಳಿಗೆ ಜೋತಾಡಿಸಿ, ತಂಬೂರಿ ಹಿಡಿದು, ಏಕಾಂಗಿಯಾಗಿ ಊರೂರು ಅಲೆದು ದಾಸವಾಣಿಯನ್ನು ಪ್ರಸಾರ ಮಾಡಿದ ಒಂಟಿ ವಿಧವೆ.
ಸಾಹಿತ್ಯದ ಕೋಟೆ ಕಟ್ಟಿದವರು
ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲು ಕಾಣಿಸುವ ಹೆಸರಾದ ನಂಜನಗೂಡು ತಿರುಮಲಾಂಬಾ ಹದಿನಾಲ್ಕನೇ ವಯಸ್ಸಿನಲ್ಲಿ ವಿಧವೆಯಾದರೆ, ಆರ್. ಕಲ್ಯಾಣಮ್ಮನವರೂ ಸಂಸಾರ ಶಬ್ದದ ಅರ್ಥ ತಿಳಿಯುವ ಮೊದಲೇ ವೈಧವ್ಯದ ಕ್ರೂರ ನಿಯಮಗಳಿಗೆ ತುತ್ತಾದವರು. ಈ ಇಬ್ಬರೂ ತಮ್ಮ ಬದುಕನ್ನು ಸಹನೀಯಗೊಳಿಸಲು ಆರಿಸಿಕೊಂಡಿದ್ದು ಸಾಹಿತ್ಯಸೇವೆಯ ಮಾರ್ಗವನ್ನು. 'ಸತಿ ಹಿತೈಷಿಣಿ ಗ್ರಂಥಮಾಲೆ'ಯನ್ನು ಪುಸ್ತಕ ಪ್ರಕಾಶನಕ್ಕಾಗಿಯೂ, 'ಕರ್ನಾಟಕ ನಂದಿನಿ' ಎಂಬ ಮಾಸಪತ್ರಿಕೆಯನ್ನು ಹೆಣ್ಣುಮಕ್ಕಳಿಗಾಗಿಯೂ, 'ಸನ್ಮಾರ್ಗ ದರ್ಶಿನಿ' ಎಂಬ ಪತ್ರಿಕೆಯನ್ನು ಮಕ್ಕಳಿಗಾಗಿಯೂ ತಿರುಮಲಾಂಬಾ ಅವರು ಕೆಲಕಾಲ ನಡೆಸಿದರೆ; ಆರ್. ಕಲ್ಯಾಣಮ್ಮನವರು 'ಮಕ್ಕಳ ಕೂಟ'ವನ್ನು 'ಶಾರದಾ ಸ್ತ್ರೀ ಸಮಾಜ'ವನ್ನು ಕ್ರಮವಾಗಿ ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಸ್ಥಾಪಿಸಿ ನಿರ್ವಹಿಸಿದರು. 'ಸರಸ್ವತಿ' ಎಂಬ ಪತ್ರಿಕೆಯನ್ನು 43 ವರ್ಷಗಳ ಕಾಲ ನಡೆಸಿದ್ದಂತೂ ದಾಖಲಾರ್ಹ ಸಂಗತಿ. ಈ ಇಬ್ಬರೂ ತಮ್ಮ ಪತ್ರಿಕೆಗಳು, ತಮ್ಮ ಕಥೆ, ಕಾದಂಬರಿ ಮತ್ತು ನಾಟಕ ಕೃತಿಗಳ ಮೂಲಕ ಸ್ತ್ರೀ ಶಿಕ್ಷಣದ ಅಗತ್ಯ, ಮೂಢ ಸಂಪ್ರದಾಯಗಳ ನಿಮೂಲನೆ, ಮಕ್ಕಳ ಬೆಳವಣಿಗೆ, ಶಿಶು ಪ್ರಾಮುಖ್ಯತೆ, ಜಾತಿ ಮತ್ತು ಲಿಂಗಸಮಾನತೆ - ಇವೇ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದು, ಸಮಾಜದ ಸುಧಾರಣೆಗೆ ಕಾಯಾ ವಾಚಾ ಮನಸಾ ಶ್ರಮಿಸಿದ್ದು ಸದಾ ಸ್ಮರಿಸಬೇಕಾದ ವಿಚಾರ. ನಂತರದ ಬರಹಗಾರ್ತಿಯರಿಗೆ ಓದು, ವಿದ್ಯೆಗಾಗಲೀ ಕೃತಿರಚನೆಗಾಗಲೀ ದಾರಿ ಸುಗಮವಾಗಿತ್ತು. ಶಾಂತಾಬಾಯಿ ನೀಲಗಾರ ಅವರು ಕನ್ನಡದ ಮೊದಲ ಕಾದಂಬರಿಗಾರ್ತಿ. ಇವರ ಸದ್ಗುಣಿ ಕೃಷ್ಣಾಬಾಯಿ (1908) ಕಾದಂಬರಿಯಲ್ಲಿ ಹೆಣ್ಣೆಗೆ ವಿದ್ಯೆ ಅತ್ಯಗತ್ಯ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅನುಭವಾಧಾರಿತ ಕೃತಿರಚನೆಗೆ ಎಂ.ಕೆ. ಇಂದಿರಾ, ಕನ್ನಡದ ಉಳಿಕೆಗಾಗಿ 'ಕನ್ನಡ ಕೋಟೆ' ಕಟ್ಟಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಜಯದೇವಿತಾಯಿ ಲಿಗಾಡೆ, ಅರವತ್ತೆಂಟನೇ ಸಮ್ಮೇಳನಾಧ್ಯಕ್ಷರಾದ ಶಾಂತಾದೇವಿ ಮಾಳವಾಡ ಮುಂತಾಗಿ, ಬರೆವಣಿಗೆ ಮುಂದುವರೆಸಿದ ಅನೇಕ ಲೇಖಕಿಯರ ಸುದೀರ್ಘ ಪಟ್ಟಿಯೇ ಇದೆ.
ಬೆಕ್ಕಿನ ಕಣ್ಣು, ಬೆಳ್ಳಿಮೋಡದಂತಹ ಕಾದಂಬರಿಗಳಲ್ಲಿ, ವಸ್ತು, ನಿರೂಪಣೆ ಮತ್ತು ಹೊಸ ವಿಚಾರಗಳಿಂದಾಗಿ, ಮೈಲಿಗಲ್ಲು ನೆಟ್ಟ ತ್ರಿವೇಣಿಯವರ ಹೆಸರಿಲ್ಲದೇ ಕನ್ನಡ ಸಾಹಿತ್ಯ ಚರಿತ್ರೆ ಪೂರ್ಣಗೊಳ್ಳುವುದಿಲ್ಲ. ರಾಜ್ಯದ ಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸಿದ ಕೀರ್ತಿಗೆ ಭಾಜನರಾದವರು ಈಕೆ. ಅಶ್ವಿನಿ, ಆರ್ಯಾಂಬ ಪಟ್ಟಾಭಿ, ಜಯಲಕ್ಷ್ಮಿ, ಈಚನೂರು ಶಾಂತ, ಜಯಲಕ್ಷ್ಮಿ, ಟಿ. ಸುನಂದಮ್ಮ, ವಾಣಿ, ನೀಳಾದೇವಿ, ಅನುಪಮಾ ನಿರಂಜನ, ಮುಂತಾದವರು ಜನಮೆಚ್ಚುಗೆ ಸಾಧಿಸಿದ ಲೇಖಕಿಯರು.
1975ರಿಂದ 'ಸ್ತ್ರೀವಾದ ಚಳವಳಿ' ಆರಂಭಗೊಂಡ ಆಸುಪಾಸಿನಲ್ಲಿ, ಲಿಂಗ ಸಮಾನತೆಯ ವಾದವನ್ನನ್ವಯಿಸಿ ಕೃತಿಗಳನ್ನು ರಚಿಸತೊಡಗಿದ ಅನೇಕ ಮಹಿಳೆಯರ ಕೃತಿಗಳು; ವಿಷಯದ ಆಯ್ಕೆ, ನಿರೂಪಣೆಯ ವಿಧಾನ ಮತ್ತು ಗಟ್ಟಿತನದಿಂದಾಗಿ ಲೇಖಕಿಯರ ಕುರಿತಾಗಿದ್ದ ಅಸಡ್ಡೆಯ ಅಭಿಪ್ರಾಯವನ್ನು ಸಂಪೂರ್ಣ ಮಗುಚಿ ಹಾಕಿದವು. ಮಹಿಳೆಯರ ಕೃತಿಗಳಲ್ಲಿನ ಆಳ ಮತ್ತು ಪ್ರಭಾವಿಸುವ ಶಕ್ತಿಗೆ ಮಣಿಯದವರೇ ಇಲ್ಲ. ಎಚ್.ಎಸ್. ಪಾರ್ವತಿ, ವಿಜಯಾ ದಬ್ಬೆ, ಡಾ. ವೀಣಾ ಶಾಂತೇಶ್ವರ, ಬಿ.ಎನ್. ಸುಮಿತ್ರಾಬಾಯಿ, ಎನ್. ಗಾಯತ್ರಿ, ನೇಮಿಚಂದ್ರ, ಪ್ರತಿಭಾ ನಂದಕುಮಾರ್, ಡಾ. ವಿಜಯಾ, ಚಿ.ನ. ಮಂಗಳ, ವೈದೇಹಿ, ಸಾರಾ ಅಬೂಬಕರ್ ಮುಂತಾದವರ ಸಾಧನೆ ಹಾಗೂ ಕೃತಿಗಳು ಈ ವಾದಕ್ಕೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿದ್ದವು. ಗೀತಾ ರಾಮಾನುಜಂ, ಮಾಲತಿ, ಬಿ. ಜಯಶ್ರೀ ಮುಂತಾದವರು ನಾಟಕ ಪ್ರಕಾರದಲ್ಲಿ ಸಾಧನೆ ಮಾಡಿದ ಸ್ತ್ರೀಯರು. ಅಲ್ಲಿಂದ ಈವರೆಗೆ ನೂರಾರು ಲೇಖಕಿಯರು ಸಾಹಿತ್ಯ ರಚನೆಗೆ ಇಳಿದಿದ್ದಾರಾದರೂ ಕೆಲವರ ರಚನೆಯಷ್ಟೇ ಶಕ್ತಿಯುತವೆನ್ನಬಹುದು.
ಸಂಗೀತ ಸಾಧನೆ
ಓದುಬರಹ ಕಲಿಯಲೂ ಅವಕಾಶವಿಲ್ಲದ ಸಮಾಜದಲ್ಲಿ ಅದನ್ನು ವಿರೋಧಿಸಿ, ಓದು ಕಲಿತು ಸಾಹಿತ್ಯ ಸೃಷ್ಟಿಸುವ ಸಮಸ್ಯೆ ಇದ್ದಂತೆ ಸಂಗೀತ ಕಲಿಯಲು, ಹೆಣ್ಣಿಗೆ ಸಮಾಜದ ವಿರೋಧವಿರಲಿಲ್ಲ. ಹೊಲಿಗೆ, ಕಸೂತಿ, ಅಡುಗೆಗಳಂತೆ ಸಂಗೀತವೂ ಕುಟುಂಬದ ಆನಂದವರ್ಧನೆಗೆ ಪೂರಕವಾಗಿತ್ತು. ಆದರೆ ಬಹಿರಂಗದಲ್ಲಿ ಸಂಗೀತ ಕಛೇರಿ ನಡೆಸಲು ಅನುಮತಿ ಇರಲಿಲ್ಲ. ಕೆಲವು ಭಾಗಗಳಲ್ಲಿ ಸಂಗೀತ ಕಲಿಕೆ ಮದುವೆಯಾಗಲಿರುವ ಹೆಣ್ಣಿಗೆ ವಿಶೇಷ ಅರ್ಹತೆಯೇ ಆಗಿತ್ತು. ಆದರೂ ಸ್ವಆಸಕ್ತಿಯಿಂದ ಹಾಗೂ ಸ್ವಪ್ರಯತ್ನದಿಂದ ಸಾಧಿಸಿದವರ ಮತ್ತು ಹೊಸ ದಾಖಲೆಗಳನ್ನು ಸೃಷ್ಟಿಸಿದ ಕೆಲವರನ್ನು ಮಾತ್ರ ಇಲ್ಲಿ ಉಲ್ಲೇಖಿಸಲು ಸಾಧ್ಯ.
ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಜೊತೆಯಾಗಿಸಿ, ಉಳಿಸಿದ ನರ್ತಕಿಯರ ಪಂಗಡದಲ್ಲಿ ಮೂಗೂರು ಜೇಜಮ್ಮ, ಬೆಂಗಳೂರು ನಾಗರತ್ನಮ್ಮ, ಕೋಲಾರ ನಾಗರತ್ನಮ್ಮ ಮತ್ತು ಮೂಗೂರು ಪುಟ್ಟದೇವಮ್ಮ ಇವರ ಹೆಸರು ಖ್ಯಾತಿಯಲ್ಲಿತ್ತು. ಗಂಗೂಬಾಯಿಯವರ ತಾಯಿ ಅಂಬಾಬಾಯಿ ಹಾನಗಲ್ ಅವರೂ ನರ್ತಕಿ ಹಾಗೂ ಕರ್ನಾಟಕ ಸಂಗೀತ ಕಲಾವಿದೆ.
ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ಅದ್ಭುತ ಸಾಧನೆಗೈದು ಶಿಖರದೆತ್ತರಕ್ಕೇರಿದ ಗಂಗೂಬಾಯಿ ಹಾನಗಲ್ ಅವರದು ವೈಶಿಷ್ಟ್ಯಪೂರ್ಣ ಗಡಸುಧ್ವನಿ. ಗಂಟಲಿನಲ್ಲಿ ಬೆಳೆದು ತೃಣ ಉಳಿದ ದುರ್ವಂಸದಿಂದಾಗಿ, ಅವರ ಮಧುರಧ್ವನಿಯು ಗಡುಸಾಗಿ ಪರಿವರ್ತಿತಗೊಂಡಿತ್ತು. ಆದರೂ ಧೃತಿಗೆಡದೆ ಸಾಧನೆಯಿಂದ ಮಣಿಸಿ ಸಂಗೀತದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು ಈಕೆ. ಅನೇಕಾನೇಕ ಗಮನಾರ್ಹ ಪ್ರಶಸ್ತಿಗಳಲ್ಲದೆ, ಆರು ಡಾಕ್ಟರೇಟ್ಗಳನ್ನು, ತಾನ್ಸೇನ್ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ ಫೆಲೋಶಿಪ್, ಪದ್ಮಭೂಷಣ/ವಿಭೂಷಣ ಪ್ರಶಸ್ತಿಗಳನ್ನು ಪಡೆದವರು.
ಮಧುರ ಕಂಠ
ಹಾಡಲು ಅವಕಾಶ ಮಾಡಿಕೊಡುತ್ತಿದ್ದ, ತೆರೆಮರೆಯ ಆಕಾಶವಾಣಿಯಲ್ಲಿ ಹಾಡುವ ಮೂಲಕ ಬೆಳಕಿಗೆ ಬಂದವರು ಅನೇಕರು. ನೀಲಮ್ಮಕಡಾಂಬಿ, ಚೊಕ್ಕಮ್ಮ, ಪಾಪಾ ಚೂಡಾಮಣಿ, 50-60ರ ದಶಕದಲ್ಲಿ ಹೀಗೆ ಮಿಂಚಿದ ಮೊದಲಿಗರು. ಸೀತಾ ಮುಲ್ಕಿ, ತಾರಾಬಾಯಿ ಗದಗಕರ್, ಗುಲಾಬಿಬಾಯಿ ಬಿಜಾಪುರಕರ್ ಮರಾಠಿ ಭಾವಗೀತೆಗಳ ಮಟ್ಟುಗಳಲ್ಲೆ ಕನ್ನಡದ ಭಾವಗೀತೆಗಳನ್ನು, ಮುಂಬಯಿ ಆಕಾಶವಾಣಿಯಿಂದ ಹಾಡಿದ ಮೊದಲಿಗರಲ್ಲಿ ಕೆಲವರು. 1952ರಲ್ಲಿ ಕೆ.ಎಸ್.ನ. ಅವರ ಕವಿತೆಗಳನ್ನು ಮೊದಲ ಧ್ವನಿಮುದ್ರಿಕೆಯಾಗಿಸಿದವರು ಜಯವಂತಿದೇವಿ ಹಿರೇಬೆಟ್ರವರು. ಅಗಣಿತ ಗೀತೆಗಳನ್ನು ಹಾಡಿರುವ ಅನುರಾಧಾ ಧಾರೇಶ್ವರ್ ಮತ್ತು ಉಷಾ ಖಾಡಿಲ್ಕರ್ ಕನ್ನಡಿಗರ ಮನಗೆದ್ದವರು. ಶ್ಯಾಮಲಾ ಭಾವೆ, ಲಲಿತಾ ಉದಯಶಂಕರ್, ಗಂಗೂಬಾಯಿ ಮತ್ತು ಕೃಷ್ಣಾ ಹಾನಗಲ್ ಅವರು ಕರ್ನಾಟಕ ಸಂಗೀತದೊಂದಿಗೆ, ಹಿಂದೂಸ್ಥಾನಿ ಪದ್ಧತಿಯನ್ನು ಸೇರಿಸಿ ಇಲ್ಲಿಯ ಕ್ಷೇತ್ರವನ್ನು ಸಮೃದ್ಧಗೊಳಿಸಿದವರು. ಅಮೀರ್ಬಾಯಿ ಕರ್ನಾಟಕಿ ಅನೇಕ ಸಿನಿಮಾಗಳಲ್ಲಿ ಹಾಡಿ ಹೆಸರಾದ ಮಧುರ ಗಾಯಕಿ. 'ಉಡುಗಣವೇಷ್ಠಿತ' ಹಾಡಿನಿಂದ ಕನ್ನಡ ಮನಗಳಲ್ಲಿ ನೆಲೆಸಿರುವ, ಎಚ್.ಆರ್. ಲೀಲಾವತಿ ಸುಗಮ ಸಂಗೀತದ ಮಹಿಳಾ ಹರಿಕಾರರು, ಸಂಗೀತ-ಸಂಯೋಜಕಿ, ಕ್ಯಾಸೆಟ್, ಸಿ.ಡಿ. ಸಿನಿಮಾಗಳ ಹಿನ್ನೆಲೆ ಗಾಯಕಿ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ನಿಸ್ವಾರ್ಥದಿಂದ ದುಡಿದವರು. ಈಗಲೂ ಸದ್ದಿಲ್ಲದೇ ಸಂಗೀತ-ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೇರು ಸಾಧಕಿ. ಇವರ ಈ ಹಾಡು ಮಾಸ್ಕೋ ರೇಡಿಯೋದಿಂದ ಪ್ರಸಾರಗೊಂಡಿರುವುದು ಉಲ್ಲೇಖನೀಯ.
ಮನೆಮಾತಾದ ಗಾಯಕಿಯರು
ಎಂ.ಎಸ್. ಶೀಲಾ, ಎಂ.ಎನ್. ರತ್ನ, ನಾಗವಲ್ಲಿ ನಾಗರಾಜ್, ಟಿ.ಎಸ್. ಸತ್ಯವತಿ, ಟಿ.ಎಸ್. ವಸಂತಮಾಧವಿ, ನಾಗಮಣಿ ಶ್ರೀನಾಥ್, ಶಾಸ್ತ್ರೀಯ ಸಂಗೀತ-ಕಲಾವಿದೆಯರು. ಶ್ಯಾಮಲಾ ಜಾಗೀರ್ದಾರ್, ಸಿ.ಕೆ. ತಾರಾ, ಎಸ್.ಕೆ. ವಸುಮತಿ ಸಂಗೀತದಲ್ಲಿ ಹೆಸರು ಮಾಡಿದ ಗಾಯಕಿಯರು. ಎಂಬತ್ತರ ದಶಕದಲ್ಲಿ ಮನೆಮಾತಾದ ಗಾಯಕಿಯರೆಂದರೆ ರತ್ನಮಾಲಾ ಪ್ರಕಾಶ್, ಮಾಲತಿ ಶರ್ವ, ಬಿ.ಆರ್. ಛಾಯಾ, ಕಸ್ತೂರಿ ಶಂಕರ್, ಮಂಜುಳಾ ಗುರುರಾಜ್, ಬಿ.ಕೆ. ಸುಮಿತ್ರಾ ಮುಂತಾದವರು. ಈಗಿನ ಗಾಯಕಿಯರಲ್ಲಿ ಎಂ.ಡಿ. ಪಲ್ಲವಿ, ಸಂಗೀತಾ ಕಟ್ಟಿ ಕುಲಕರ್ಣಿ ಹೆಸರಾಂತರು. 'ನಾದವೇ ತಾನಾಗಬೇಕು' ಎಂಬ ಆಶಯದಲ್ಲಿ ಹಾಡುತ್ತಿರುವ ಸಂಗೀತಾ ಕಟ್ಟಿಯವರು, ತಮ್ಮ ಸ್ವರಮಾಧುರ್ಯವನ್ನು ಕೇಳುಗರ ಹೃದಯದಲ್ಲಿಳಿಸುವ ಶಕ್ತಿಯುಳ್ಳ ಸಂಗೀತ-ತಪಸ್ವಿ. ಅರ್ಚನಾ ಉಡುಪ, ಸುನೀತಾ, ಜಯಶ್ರೀ ಅರವಿಂದ್, ಇಂದು ವಿಶ್ವನಾಥ್ ಅವರ ಸಾಧನೆಯೂ ಕಡಿಮೆಯದಲ್ಲ. ಸಿ.ಡಿ.ಗಳಲ್ಲಿ ಕ್ಯಾಸೆಟ್ಗಳಲ್ಲಿ ಹಾಡದವರೇ ಇಲ್ಲ. ಈಗ ದೂರದರ್ಶನ ಚಾನಲ್ಗಳ ಸ್ಪರ್ಧೆಯಲ್ಲಿ ಗೆದ್ದು ವಿಖ್ಯಾತರಾಗುತ್ತಿರುವವರ ಸಂಖ್ಯೆ ದೀರ್ಘ ಪಟ್ಟಿಯಾಗುವಷ್ಟು ಇದೆ. ಅದರಲ್ಲಿ ಸಂಗೀತ ಸಾಧನೆಗಿಳಿದ ಹದಿಹರೆಯದ ಬಾಲಕಿಯರೂ, ಮಕ್ಕಳೂ ಇದ್ದಾರೆ. ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯರಾಗಿರುವ ಅನನ್ಯಾ ಭಟ್, ಶಮಿತಾ ಮಲ್ನಾಡ್, ಅನುರಾಧಾ ಭಟ್ ಮುಂತಾಗಿ ಅನೇಕ ಸಿರಿಕಂಠದ ಗಾಯಕಿಯರಿದ್ದಾರೆ.
ಸಂಶೋಧನೆಗೂ ಸೈ
ವಿಶ್ವವಿದ್ಯಾಲಯಗಳಲ್ಲಿ ಸಂಗೀತ ಒಂದು ವಿಷಯವಾದ ಮೇಲೆ ಅನೇಕಾನೇಕರು ಸಂಶೋಧನೆಗೂ ತೊಡಗಿದರು. ಇವರಲ್ಲಿ ಪದ್ಮಾಮೂರ್ತಿ, ಜಯಶ್ರೀ, ಸುಶೀಲಾ, ಸುಮಾ ಸುಧೀಂದ್ರ, ಟಿ.ಎಸ್. ಸತ್ಯವತಿ, ಸುಕನ್ಯಾ ಪ್ರಭಾಕರ್ ಇವರುಗಳ ಹೆಸರು ಮೇಲ್ಪಂಕ್ತಿಯಲ್ಲಿದೆ. ಟಿ.ಎಸ್. ಸತ್ಯವತಿಯವರು ಉತ್ತಮ ವಿಮರ್ಶಕಿ, ವಾಗ್ಮಿ ಮತ್ತು ಶಿಕ್ಷಕಿಯೂ ಆಗಿ ಖ್ಯಾತರು. ಜಿ. ಚನ್ನಮ್ಮನವರು ವಿಶ್ವವಿದ್ಯಾಲಯದಲ್ಲಿ ಉತ್ತಮ ಸಂಗೀತ-ಬೋಧಕಿಯಾಗಿ ಪ್ರಸಿದ್ಧರಾಗಿದ್ದ ಹಳೆಯ ತಲೆಮಾರಿನ ಗಾಯಕಿ. ಶಾಸ್ತ್ರೀಯ, ಸುಗಮ ಸಂಗೀತ, ಫ್ಯೂಶನ್ ಮ್ಯೂಸಿಕ್, ಜಾನಪದ, ಯಕ್ಷಗಾನ, ಸಂಶೋಧನೆ, ಪತ್ರಿಕಾ-ವಿಮರ್ಶೆ, ಸಂಗೀತ-ಶಿಕ್ಷಣ, ದೂರದರ್ಶನ, ಧ್ವನಿ-ಮುದ್ರಿಕೆ, ಗಮಕ, ಕಥಾ-ಕೀರ್ತನ, ಇತ್ಯಾದಿ ಸಂಗೀತದ ಸರ್ವಮಾರ್ಗಗಳಲ್ಲಿಯೂ ಅನೇಕ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು, ಸಂಗೀತಕ್ಷೇತ್ರದ ವ್ಯಾಪ್ತಿಯನ್ನು ಹಿಗ್ಗಿಸುತ್ತಿರುವುದು ಗಮನಾರ್ಹ ಸಂಗತಿ. ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಹಾಗೂ ಸಂಗೀತ ಕ್ಷೇತ್ರದ ಹಲವು ವಿಭಾಗಗಳಲ್ಲಿ ವಿವಿಧ ರೀತಿಯಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡಿರುವವರನ್ನು ಗಮನಿಸಿದರೆ, ಮಹಿಳೆಯರ ಸಾಧನೆ ಹಾಗೂ ಕೊಡುಗೆ ಅಪಾರವಾಗಿದೆ, ಮೌಲ್ಯಯುತವಾಗಿದೆ.
ವಿಜಯಲಕ್ಷ್ಮಿ ಕೆ.ಎಂ. (ಲೇಖಕರು ಕನ್ನಡದ ಕಥೆಗಾರ್ತಿ)
****
Women Writers
info from Wikipedia - read here
CLICK
***
ವಿಕಿಪೀಡಿಯ ಮಾಹಿತಿ
ಸಂಪಾದಿಸಿಈ ಪುಟವನ್ನು ವೀಕ್ಷಿಸಿಇನ್ನೊಂದು ಭಾಷೆಯಲ್ಲಿ ಓದು
ಹರಿದಾಸ
ಹರಿದಾಸ ಭಕ್ತಿ ಚಳುವಳಿಯು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಮಹತ್ವದ ತಿರುವು ನೀಡಿತ್ತು. ಆರು ಶತಮಾನಗಳ ಅವಧಿಯಲ್ಲಿ ಹಲವು ಸಂತರು ಹಾಗು ಯೊಗಿಗಳು ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿಕರ್ನಾಟಕದ ಸಂಸ್ಕಾರ, ತತ್ವ ಹಾಗು ಕಲೆಯನ್ನು ರೂಪಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ, ಅವರು ಸಾಕಷ್ಟು ಧಾರ್ಮಿಕ ಪ್ರಭಾವವನ್ನು ಜನ ಸಮೂಹ ಹಾಗು ದಕ್ಷಿಣ ಭಾರತವನ್ನು ಆಳಿದ ರಾಜ್ಯಗಳ ಮೇಲೆ ಬೀರಿದರು.[೧]
ಈ ಚಳುವಳಿಯನ್ನು ಪ್ರಾರಂಭಿಸಿದ್ದು ಹರಿದಾಸರು(ಕನ್ನಡ:ಹರಿದಾಸರು,ಇದರ ಅಕ್ಷರಶಃ ಅರ್ಥವೆಂದರೆ 'ಹರಿಯ ಸೇವಕರು') ಹಾಗು ಆಕಾರ ಪಡೆದದ್ದು ೧೩ನೆಯ- ೧೪ನೆಯ ಶತಮಾನದ, ಕಾಲಮಾನದಲ್ಲಿ, ವಿಜಯನಗರಸಾಮ್ರಾಜ್ಯ ಆಳ್ವಿಕೆಯಾ ಕಾಲದಲ್ಲಿ ಹಾಗು ಅದರ ಮುನ್ನ. ಈ ಚಳುವಳಿಯ ಮುಕ್ಯ ಗುರಿ ಮಧ್ವಾಚಾರ್ಯರ ದ್ವೈತತತ್ತ್ವಶಾಸ್ತ್ರ (ಮಧ್ವ ಸಿದ್ಧಾಂತ )ವನ್ನು ಜನಸಾಮಾನ್ಯರಲ್ಲಿದಾಸ ಸಾಹಿತ್ಯ (ಭಗವಂತನ ಸೇವಕರ ಸಾಹಿತ್ಯ)ದ ಮಾಧ್ಯಮದಲ್ಲಿ ಪ್ರಸಾರಿಸುವುದು.[೨]
ಶ್ರೀಪಾದರಾಯ, ವ್ಯಾಸತೀರ್ಥ, ವಾದಿರಾಜತೀರ್ಥ,ಪುರಂದರ ದಾಸ ಹಾಗು ಕನಕ ದಾಸರಂತಹ ಪ್ರಖ್ಯಾತಹಿಂದೂ ತತ್ವಜ್ಞಾನಿಗಳು, ಕವಿಗಳು ಹಾಗು ವಿದ್ವಾಂಸ ಈ ಸಮಯದಲ್ಲಿ ಮುಖ್ಯ ಪಾತ್ರ ವಹಿಸಿದರು.[೨] ಈ ಚಳುವಳಿ ಕನ್ನಡನಾಡಿನಲ್ಲಿ ಆರಂಭವಾಗಿ ನಂತರ ದಕ್ಷಿಣ ಭಾರತದ ಬೇರೆಡೆ ಹಬ್ಬಿದರೂ, ಇದು ಮುಂಚಿನ ಭಕ್ತಿ ಚಳುವಳಿಗಳಾದ ಬಸವಣ್ಣನವರು ೧೨ನೆಯ ಶತಮಾನದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸಿದ್ದ ವೀರಶೈವ ಚಳುವಳಿ (ಕನ್ನಡದ ವಚನ ಸಾಹಿತ್ಯ ) ಹಾಗುತಮಿಳು ನಾಡಿನ ಆಳ್ವಾರ್ ಸಂತರ ೧೦ನೆಯ ಶತಮಾನದ ಚಳುವಳಿಗಳ ಫಲ.[೩][೪] ಮುಂದೆ, ವಲ್ಲಭಾಚಾರ್ಯಗುಜರಾತ್‌ನಲ್ಲಿ ಹಾಗು ಗುರು ಚೈತನ್ಯ ಮಹಾಪ್ರಭು ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತರಾದರು. ಅವರ ಭಕ್ತರು ವಿಶ್ವಾದ್ಯಂತ ಇಸ್ಕಾನ್(ISKCON) ಚಳುವಳಿ ಶುರುಮಾಡಿದರು.[೫]
ಹರಿದಾಸರು ಸಂತರು, ಕೆಲವರು ಅಲೆದಾಡುವ ಹಾಡುಗರು, ಹಾಗು ತಮ್ಮನು ತಾವು - ಹರಿಯಾ ಸೇವಕರೆಂದು ಭಾವಿಸುತಿದ್ದರು. ಈ ಚಳುವಳಿ ಮುಖ್ಯವಾಗಿ ಬ್ರಾಹ್ಮಣರುನಡೆಸಿದರೂ, ಸಮಾಜದ ಎಲ್ಲ ವರ್ಗದವರು ಇದಕ್ಕೆ ಕೊಡುಗೆಯನ್ನು ನೀಡಿದ್ದಾರೆ.[೬]ಹರಿದಾಸ ಚಳುವಳಿ ಕನ್ನಡ ಭಕ್ತಿ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದೆ.[೭]
ಹುಟ್ಟುಸಂಪಾದಿಸಿ
ಹರಿದಾಸ ಚಳುವಳಿಯಾ ಮೂಲ ಸರಿಯಾಗಿ ಗುರ್ತಿಸಲಾಗದು, 9ನೆಯ ಶತಮಾನದಲ್ಲಿ ಈ ಚಳುವಳಿ ಶುರುವಾಯಿತು ಎನ್ನಲಾಗುತದೆ. ಆದರೆ ೧೩ನೆಯ ಶತಮಾನದಲ್ಲಿ ಉಡುಪಿಯಾ ಮಧ್ವಾಚಾರ್ಯರ(೧೨೩೮-೧೩೧೭) ಆಶ್ರಯದಿಂದ ದಾಸ ಕೂಟ ಎಂಬ ವೈಷ್ಣವ ಭಕ್ತಿ ಚಳುವಳಿ ಕರ್ನಾಟಕದಲ್ಲಿಶುರುವಾಯಿತು.[೩]
ಈ ಕಾಲಮಾನದಲ್ಲಿ, ಈ ಚಳುವಳಿ ಒಂದು ಬಲಶಾಲಿ ಧಾರ್ಮಿಕ ಶಕ್ತಿಯಾಯಿತು,ಇದರಿಂದಾಗಿ ಹಿಂದೂಮನೋಭಾವನೆ ದಕ್ಷಿಣ ಭಾರತದಲ್ಲಿ ನವಚೈತನ್ಯಭರಿತವಾಯಿತು, ಈ ವೇಳೆ ಉತ್ತರ ಭಾರತ ಆಗಲೇ ಮುಸ್ಲಿಂ ಆಳ್ವಿಕೆಗೆ ಸಿಲಿಕಿತ್ತು. ಹರಿದಾಸರಿಗೆವಿಜಯನಗರ ಸಾಮ್ರಾಜ್ಯದಲ್ಲಿ ಪೋಷಣೆ ದೊರಕಿತು.[೮]ವ್ಯಾಸತೀರ್ಥ, ಕೃಷ್ಣದೇವರಾಯನ ಗುರುವೆಂದು ಭಾವಿಸಲಾಗುತ್ತದೆ.[೯][೧೦][೧೧]
ಹರಿದಾಸರು ಹಿಂದೂಧರ್ಮದ ವೈಷ್ಣವ ಭಕ್ತರು ಹಾಗು ವಿಠ್ಠಲ, ವಿಷ್ಣುವಿನ ಅವತಾರ ಹಾಗು ಕೃಷ್ಣನನ್ನುಪುಜಿಸ್ಸುತಿದ್ದರು.[೧೨] ಹರಿದಾಸ ಚಳುವಳಿಯಲ್ಲಿ,ಮಹಾರಾಷ್ಟ್ರದ ಪಂಢರಪುರದ ಭೀಮನದಿ ತೀರದಲ್ಲಿರುವ ವಿಠ್ಠಲನಾಥ ದೇವಸ್ತಾನ, ಕರ್ನಾಟಕದ ಹಂಪಿಯಲ್ಲಿನ ವಿಠ್ಠಲ ಸ್ವಾಮಿ ದೇವಸ್ತಾನ ಹಾಗು ಆಂಧ್ರ ಪ್ರದೇಶದತಿರುಮಲ ಬೆಟ್ಟದಲ್ಲಿರುವ ಶ್ರೀನಿವಾಸ ದೇವಸ್ತಾನ ಅತಿ ಪವಿತ್ರವಾದ ಸ್ಥಳಗಳು.
ಬೋಧಕರುಸಂಪಾದಿಸಿ
ಹರಿದಾಸರು' ಸಾಮಾನ್ಯವಾಗಿ ಕರ್ನಾಟಕದವರಾಗಿದರು, ಕೆಲವರನ್ನು ಹೊರಿತುಪಡಿಸಿ, ಜಯತೀರ್ಥ ಮಹಾರಾಷ್ಟ್ರದಪಂಢರಪುರದ ಹತ್ತಿರದ ಮಂಗಳ್ವೆಧೆ [೧೩] ಹಾಗು ಶ್ರೀ ನರಹರಿ ತೀರ್ಥ (ಮಧ್ವಾಚಾರ್ಯರ ಭಕ್ತ) ಇವರು ಆಂಧ್ರ ಪ್ರದೇಶ ಅಥವಾ ಒರಿಸ್ಸಾದವರು.[೧೪]
ಮಧ್ವಾಚಾರ್ಯ ಪಂಥದ ವಿಜಯನಗರ ಸಾಮ್ರಾಜ್ಯ ಕಾಲಮಾನದ ಹೆಸರುವಾಸಿ ಹರಿದಾಸರು:
ಮಾಧವತೀರ್ಥ - ೧೨೧೫–೧೩೫೦
ಅಕ್ಶೋಭ್ಯತೀರ್ಥ
ವಿಜಯೀಂದ್ರತೀರ್ಥ
ರಘೋತ್ತಮತೀರ್ಥ
ಶ್ರೀಪಾದರಾಯರು (೧೪೦೪ - ೧೫೦೨.)
ವ್ಯಾಸತೀರ್ಥರು (೧೪೪೭ - ೧೫೩೯)
ಪುರಂದರ ದಾಸ (೧೪೮೦-೧೫೬೪)
ಕನಕ ದಾಸ (೧೫೦೮ - ೧೬೦೬.)
ವಾದಿರಾಜತೀರ್ಥರು (೧೪೮೦ - ೧೬೦೦.).
ಟೊಳ್ಳ ರಾಜ ತೀರ್ಥ(೧೯೯೮-____)
ಬೆಳವಣಿಗೆ ಹಾಗು ಪೋಷಣೆಸಂಪಾದಿಸಿ
ಶ್ರೀಪಾದರಾಯರು, ವ್ಯಾಸತೀರ್ಥರು ಹಾಗುವಾದಿರಾಜತೀರ್ಥರನ್ನು "ಮೂರು ವ್ಯಾಪಕದ ಸಂತರು" (ಯತಿ ರಾಜ ತ್ರಯರು, ಸನ್ಯಾಸರಾದರು ಇವರಿಗೆ ಸಮಕಾಲೀನ ರಾಜರು ವಿಶೇಷ ಸಹಾಯವನ್ನೀಡಿದರು) ಎಂದು ಹರಿದಾಸ ಚಳುವಳಿ ಭಾವಿಸಲಾಗುತ್ತದೆ ಆದರೆ "ವೈಷ್ಣವ ಕವಿ ತ್ರಿಮೂರ್ತಿ" ಗಳ ಪಟ್ಟ ಶ್ರೀಪಾದರಾಯ, ಪುರಂದರದಾಸ ಹಾಗು ಕನಕದಾಸರದ್ದು. [೧೫]
ಕನ್ನಡ ಸಾಹಿತ್ಯಕ್ಕೆ ಕೊಡುಗೆಸಂಪಾದಿಸಿ
ಪುರಂದರ ದಾಸ
ಹರಿದಾಸ ಚಳುವಳಿ ಕನ್ನಡ ಸಾಹಿತ್ಯ ಭಕ್ತಿ ಸಾಹಿತ್ಯದ ರೂಪದಲ್ಲಿ ಮಹತ್ವದ ಕೊಡಿಗೆ ಮಾಡಿದೆ. ಭಕ್ತಿ ಚಳುವಳಿ ಇಂದ ಹುಟ್ಟಿದ ಸಾಹಿತ್ಯವನ್ನು ದಾಸ ಸಾಹಿತ್ಯ (ಅಥವಾದಾಸರ ಪದಗಳು - ದಾಸರ ಸಾಹಿತ್ಯ) ಎಂದು ಕರೆಯಲಾಗುತ್ತದ್ದೆ. ಜಗನ್ನಾಥದಾಸ, ವಿಜಯ ದಾಸ ಹಾಗು ಗೋಪಾಲದಾಸ,ಕನ್ನಡ ಸಾಹಿತ್ಯದ ಬೆಳವಣಿಗೆಗೆ ದುಡಿದ ಪ್ರಸಿದ್ದ ಕವಿಗಳು .[೧೬][೧೭]
ಇವರ ಲೇಖನಗಳನ್ನು ಮೂರು ಬಾಗದಲ್ಲಿ ವಿಂಗಡಿಸಬಹುದು:
ಕಾವ್ಯ
ತತ್ವ
ಸಾವ್ರತ್ರಿಕವಾದ ಒಡ್ಡವ.
(ಅಂಕಿತ ನಾಮ )ಸಂಪಾದಿಸಿ
ಪ್ರತಿಯೊಬ್ಬ ಹರಿದಾಸ ನು ಪ್ರತ್ಯೇಕವಾದ ಅಂಕಿತ ನಾಮದಿಂದ ಆತನ ಕಾವ್ಯವನ್ನು ಅಂಕಿತ ಗೊಳಿಸುತ್ತಿದ್ದರು . ಕೆಲವು ಪ್ರಖ್ಯಾತ ಹರಿದಾಸರ ಅಂಕಿತ ನಾಮಗಳು ಹೀಗಿವೆ:[೧೮]
ಹರಿದಾಸರು ಕಾಲ(ಕ್ರೀಸ್ತುಶಕ) ಅಂಕಿತ ನಾಮ
ನರಹರಿತೀರ್ಥರು ೧೩೨೪-೧೩೩೩ ನರಹರಿರಘುಪತಿ
ಶ್ರೀಪಾದರಾಯರು ೧೪೦೪-೧೫೦೨ ರಂಗವಿಠ್ಠಲ
ವ್ಯಾಸತೀರ್ಥರು ೧೪೬೦-೧೫೩೯ ಶ್ರೀಕೃಷ್ಣ
ವಾದಿರಾಜತೀರ್ಥರು ೧೪೮೦-೧೬೦೦ ಹಯವದನ
ರಾಘವೇಂದ್ರತೀರ್ಥರು ೧೫೯೫-೧೬೭೧ ಧೀರವೇಣು ಗೋಪಾಲ
ಪುರಂದರದಾಸರು ೧೪೮೪-೧೫೬೪ ಪುರಂದರ ವಿಠ್ಠಲ
ಕನಕದಾಸರು ೧೫೦೮-೧೬೦೬ ಆದಿ ಕೇಶವ
ವಿಜಯದಾಸರು ೧೬೮೨-೧೭೫೫ ವಿಜಯ ವಿಠ್ಠಲ
ಗೋಪಾಲದಾಸರು ೧೭೨೨-೧೭೬೨ ಗೋಪಾಲ ವಿಠ್ಠಲ
ಹೆಳವನಕಟ್ಟೆ ಗಿರಿಯಮ್ಮನ ೧೮ನೆಯಶತಮಾನ ಹೆಳವನಕಟ್ಟೆ ರಂಗ
ಜಗನ್ನಾಥದಾಸರು ೧೭೨೭-೧೮೦೯ ಜಗನ್ನಾಥ
ವಿಠ್ಠಲಮಹಿಪತಿದಾಸರು ೧೬೧೧-೧೬೮೧ ಮಹಿಪತಿಪ್ರಸನ್ನ
ವೆಂಕಟದಾಸರು ೧೬೮೦-೧೭೫೨ ಪ್ರಸನ್ನ
ವೆಂಕಟವೇಣುಗೋಪಾಲದಾಸರು ೧೮ನೆಯ ಶತಮಾನ ವೇಣುಗೋಪಾಲ
ವಿಠ್ಠಲಮೋಹನದಾಸರು ೧೮ನೆಯಶತಮಾನ ಮೋಹನ ವಿಠ್ಠಲನೆಕ್ಕರ
ಕೃಷ್ಣದಾಸರು ೧೮ನೆಯಶತಮಾನ ವರಾಹತಿಮ್ಮಪ್ಪಗುರುಗೋವಿಂದದಾಸರು--
ಕರ್ನಾಟಕ ಸಂಗೀತಕ್ಕೆ ಕೊಡಿಗೆಸಂಪಾದಿಸಿ
ಹರಿದಾಸ ಚಳುವಳಿ ಕರ್ನಾಟಕ ಸಂಗೀತಬೆಳವಣಿಗೆಯನ್ನು ಹಿಂದೂಸ್ತಾನಿ ಇಂದ ಬೇರೆ ಒಂದು ಪ್ರತ್ಯೇಕ ರೀತಿಯಲ್ಲಿ ಮುದುವರಿಸಿತು, ಇದರಿಂದಾಗಿ ಭಾರತದ ಶಾಸ್ತ್ರೀಯ ಸಂಗೀತ ಒಂದು ನವೋದಯವಾಯಿತು. ಪುರಂದರ ದಾಸರನ್ನು (ಕರ್ನಾಟಕ ಸಂಗೀತ ಪಿತಾಮಹ)ಎನಲಾಗುತ್ತದ್ದೆ..[೧೯][೨೦][೨೧] ಅವರ ಕರ್ಯಗಾಳು ಈ ವಿಂಗಡಣೆಯಲ್ಲಿ ಬರುತ್ತದೆ: ಪದಗಳು , ಕೃತಿ ,ಉಗಾಭೋಗ , ಸುಳಾದಿ , ವ್ರುತ್ತನಾಮ , ದಂಡಕ , ತ್ರಿಪದಿ(ಮೂರು ಸಾಲಿನ ಕಾವ್ಯ), ಪಟ್ಟದಿ , ಸಾಂಗತ್ಯ "ಕೋಲಾಟ ಪಂಕಿನ"[೨೨] ಹಾಗು ರಗಳೆ .
ಇದನ್ನು ನೋಡಿಸಂಪಾದಿಸಿ
ದ್ವೈತವಿಜಯನಗರ ಸಾಮ್ರಾಜ್ಯಕರ್ನಾಟಕ ಸಂಗೀತ
ಬಾಹ್ಯ ಕೊಂಡಿಗಳು
ಟಿಪ್ಪಣಿಗಳು
ಉಲ್ಲೇಖಗಳು
Last edited ೯ days ago by an anonymous user
No comments:
Post a Comment