Saturday, 1 May 2021

ಅರೆ ಈ ಸಂಯಮೀಂದ್ರ ಭುವನೇಂದ್ರ ankita varadagopala vittala bhuvanendra teertha stutih

 bhuvanendra teertha, rayara mutt stutih

ರಾಗ : ಸಾರಂಗ ತಾಳ : ಝಂಪೆ


ಅರೆ ಈ ಸಂಯಮೀಂದ್ರ 

ಭುವನೇಂದ್ರ ।

ಸೂರಿ ಸುಗುಣಾಬ್ಧಿ 

ಚಂದ್ರ ನೀರೆ ।। ಪಲ್ಲವಿ ।।


ದೇವಗುರು ಕವಿಯೆಂಬಿಯಾ ।

ಮೂಢತ್ವ ಸೇವಿಸುವ ಜನರೆಲ್ಲವೇ ।

ಪವಕರೆ ಇವರೆಂಬಿಯಾ ।

ಸರ್ವಭುಕು ಈ ಮಹಾತ್ಮರಲಿ 

ತೋರೆ ನೀರೆ ।। ಚರಣ ।।


ದುರ್ವಾದಿಗಳಿವರೆಂಬಿಯಾ 

ಕೋಪಗಳ ।

ಕಾರ್ಯಲೇಶಗಳಿಲ್ಲವೇ ।

ಊರ್ವೀಧರ 

ಶೇಷನೆಂಬಿಯಾ ।

ದ್ವಿರಸನವು ಓರ್ವರಿವರಿಗೆ 

ಪೇಳಿರೆ ನೀರೆ ।। ಚರಣ ।।


ವರದೇಂದ್ರ ಕರಕಮಲಜಾರೆನಿಸಿ ಈ ।

ಧರಿಯೊಳಗೆ ಮೆರೆವ ಧೀರಾ ।

ವರದಗೋಪಾಲವಿಠಲ ಪರನೆಂದು ।

ಬಿರಿದು ಡಂಗುರ ಹೊಯಿಸುವ ನೀರೆ ।। ಚರಣ ।।

***

No comments:

Post a Comment