bhuvanendra teertha, rayara mutt stutih
ರಾಗ : ಕಾಂಬೋಧಿ ತಾಳ : ಝಂಪೆ
ಇಂದ್ರನಿಗಿಂತಧಿಕ
ಭುವನೇಂದ್ರರೆನ್ನಿ ಇದರ ।
ಅಂದವನು ವರ್ಣಿಸುವೆ
ಕೆಳೆಲವೋ ಕೆಳದಿ ।। ಪಲ್ಲವಿ ।।
ಸುರವರ್ಯನಾತ ಭೂಸುರ-
ವರ್ಯನೆಂದೀತ ।
ಪರಮ ಸುಖಿಯಾತ
ಪರ ಸುಖದನೀತ ।
ಕರದಲ್ಲಿ ವಜ್ರ ಧರಿದ
ವೀರನಾತ ।
ಪರಿಕರರ ಕರದಲ್ಲಿ
ವಿಡಿಸಿದ ವಜ್ರನೀತ ।। ಚರಣ ।।
ಶತಮನ್ಯುನಾತ ನಿರ್ಗತ
ಮನ್ಯು ನೀತ ಬಲು ।
ಜಿತ ಶತ್ರುನಾತ
ವರ್ಜಿತ ಶತ್ರುನೀತ ।
ಅತಿಶಯ ಸುಧಾ
ಪಾನ ಮಾಡಿದನಾತ ।
ಸಂತರಿಗೆ ಸಂತತ ಸುಧಾ
ಉಣಿಸುತಿಹನೀತ ।। ಚರಣ ।।
ಇಂದ್ರ ಪರಸತಿಯಿಂದ
ರಂಧ್ರ ಮೈಯಾದ । ಭುವ ।
ನೇಂದ್ರ ಸರ್ವೆಂದ್ರಿಯಂಗಳನ್ನು । ಜಯಿಸಿ ।
ವಂದಿಸುತ ವರದ
ಗೋಪಾಲವಿಠಲನ । ವೊಲಿ ।
ಮಿಂದ ಮೆರೆವರು
ಸಂಯಮೀಂದ್ರ ಗುಣಸಾಂದ್ರಾ ।। ಚರಣ ।।
****
No comments:
Post a Comment