ರಾಗ : ಕಾಂಬೋಧಿ ತಾಳ : ಝ೦ಪೆ
ಪೂರ್ವ ಜನ್ಮದ
ಪುಣ್ಯ ಫಲವೋ ।
ಸರ್ವದಾ ವ್ಯಾಸತತ್ತ್ವಜ್ಞರ
ಬಳಿಯ ವಾಸ ।। ಪಲ್ಲವಿ ।।
ಗಂಗಾದಿ ತೀರ್ಥಗಳ
ಮಿಂದ ಫಲವೇನೋ । ಶ್ರೀ ।
ರಂಗಾದಿಗಳಲ್ಲಿ
ಬಹು ದಿನವಿದ್ದೆನೋ ।
ಮಂಗಳಾತ್ಮಕರಾದ
ಮಾರಮಣನ ಭಕ್ತರನು ।
ಕಂಗಳಿಂದಲಿ ದಿನದಿನದಿ
ಕಾಂಬುವುದು ।। ಚರಣ ।।
ಸ್ನಾನ ಜಪ ವ್ಯಾಖ್ಯಾನ
ಮಾನಸದೊಳಗೆ ಹರಿ ।
ಧ್ಯಾನವನು ಮಾಡುತಾ-
ನಂದದಿಂದ ।
ಮೀನಾ ಕೂರುಮ
ವರಹ ನೃಸಿಂಹಾದಿಗಳ ।
ಅನಂತ ಮೂರ್ತಿಗಳ
ಧೇನಿಪರ ಸಂಗವನು ।। ಚರಣ ।।
ಪರಮ ಭಕುತಿಯಲಿ ಶ್ರೀ ಹರಿಯ
ಗುಣಗಳ ನೆನೆದು ।
ಪರವಶದಲ್ಲಿ ಮೈಮರೆದು ಕೃಷ್ಣಾ ।
ನರಹರೇ ಹರಿಯೆಂದು
ಹರಿಹರಿದು ಕುಣಿವ । ಶ್ರೀ ।
ಪರಮಹಂಸರ ಪಾದ
ಶರಣವಾಗಿಹುದು ।। ಚರಣ ।।
ಎಸು ದಿನವಿದ್ದರೂ
ಬೇಸರದೆ ನಿಜರನ್ನ ।
ಪೋಷಿಸುತ ಪರಮ
ಸಂತೋಷದಿಂದ ।
ವಾಸುದೇವ ಹಯಾಸ್ಯ
ದಾಸರಿಗೆ ಸಮವಾದ ।
ಏಸೇಸು ಸುಕೃತಿಗಳ
ಕಾಣೆ ಲೋಕದಲಿ ।। ಚರಣ ।।
ಪರಲೋಕ ಚಿಂತೆ ಇಲ್ಲದ
ಪಾಮರನ ನೋಡಿ ।
ಪರಮ ಕರುಣದಲಿ
ಕರೆದು ತಂದು ।
ವರದ ಗೋಪಾಲವಿಠಲನ
ವರ ಗುಣಗಳನು ।
ಒರೆದೊರೆದು ಪೇಳುತಿಹ
ಗುರು ಶಿರೋಮಣಿ ಸಂಗ ।। ಚರಣ ।।
****
No comments:
Post a Comment