Saturday, 1 May 2021

ರಾಮೇಶ್ವರನ ನೋಡೋ ಹೇ ಮಾನವ ankita shyamasundara

 " ಶ್ರೀ ರಾಮೇಶ್ವರ ಕ್ಷೇತ್ರಸ್ಥ ಶ್ರೀ ರಾಮೇಶ್ವರನ ಸ್ತೋತ್ರ "

ರಾಗ : ಮಾಲಕೌಂಸ   ತ್ರಿತಾಳ


ರಾಮೇಶ್ವರನ ನೋಡೋ -

ಹೇ ಮಾನವ ।

ರಾಮೇಶ್ವರನ ನೋಡೋ

ನೇಮದಿ ಕೊಂಡಾಡೊ ।

ನೀ ಮಾಡಿದಂಥ ಪಾಪ -

ಸ್ತೋಮಗಳ ಈಡ್ಯಾಡೋ ।। ಪಲ್ಲವಿ ।।


ಘೋರಾಘದೂರವು

ಭಯವಾರಿಧಿ

ಮಧ್ಯದಲ್ಲಿ ।

ನಾರಶೂರ ರಘುವೀರನು

ಸ್ಥಾಪಿಸಿದ ।। ಚರಣ ।।


ಚಿತ್ತಶುದ್ಧಿಲಿ ಬಂದ ಭೃತ್ಯ

ಜನರ ಬ್ರಹ್ಮ-

ಹತ್ಯಾದಿ ದೋಷ ಕ

ಳೆದು ಉತ್ತಮ

ಗತಿ ಕೊಡುವ ।। ಚರಣ ।।


ಶ್ರೀ ಶ್ಯಾಮಸುಂದರ

ದಾಶರಥಿಯ ಮಹಿಮೆ ।

ಲೇಸಾಗಿ ಸತಿಗೆ

ಪೇಳ್ದ ಭೇಶ

ಶೇಖರನಾದ ।। ಚರಣ ।।

****

No comments:

Post a Comment