ಹನುಮಂತ ಪಾಹಿ ಹನುಮಂತ ||ಪ||
ಮುನಿವ್ಯಾಸ ಕರಕಮಲಾರ್ಚಿತ ಜಯವಂತ ||ಅಪ||
ಭೂಲೋಲಕೋಲಜ ಕೂಲ ಸುಮಂದಿರ
ಫಾಲಾಕ್ಷ ಪೌಲೋಮಿ ಪತಿವಂದಿತ ||
ಕಾಲಕಾಲದಿ ನಿನ್ನ ಓಲೈಸುವರ ಸಂಗ
ಪಾಲಿಸು ಕರುಣದಿ ಕಾಳೀ ಮನೋಹರ ||೧||
ಬಾಣರೂಪನೆ ಪಂಚಬಾಣ ನಿರ್ಜಿತನೇ ಷಟ್-
ಕೋಣ ಮಧ್ಯದಿ ಬಂದು ನೀ ನೆಲೆಸಿ ||
ಕ್ಷೋಣಿ ಗೀರ್ವಾಣ ಸುಶ್ರೇಣಿಯಿಂದರ್ಚನೆ
ಮಾಣದೆ ಕೈಗೊಂಬ ವಾಣೀಶ ಸ್ಥಾನಾರ್ಹ ||೨||
ಸಿಂಧುಬಂಧನ ಶ್ಯಾಮ ಸುಂದರ ವಿಠಲನ
ದ್ವಂದ್ವಪಾದಾರವಿಂದಕೆ ಮಧುಪ ||
ಎಂದೆನಿಸಿದ ಗುರು ಗಂಧವಾಹನ ನಿನಗೆ
ವಂದಿಸುವೆನು ಭವ ಬಂಧ ಬಿಡಿಸಿ ಕಾಯೋ ||೩||
***
hanumaMta pAhi hanumaMta ||pa||
munivyAsa karakamalArcita jayavaMta ||apa||
BUlOlakOlaja kUla sumaMdira
PAlAkSha paulOmi pativaMdita ||
kAlakAladi ninna Olaisuvara saMga
pAlisu karuNadi kALI manOhara ||1||
bANarUpane paMcabANa nirjitanE ShaT-
kONa madhyadi baMdu nI nelesi ||
kShONi gIrvANa suSrENiyiMdarcane
mANade kaigoMba vANISa sthAnArha ||2||
siMdhubaMdhana SyAma suMdara viThalana
dvaMdvapAdAraviMdake madhupa ||
eMdenisida guru gaMdhavAhana ninage
vaMdisuvenu Bava baMdha biDisi kAyO ||3||
***
ರಾಗ : ಶಂಕರಾಭರಣಂ ತಾಳ : ಅಟ್ಟ (raga tala may differ in audio)
ಹನುಮಂತ ಪಾಹಿ ಹನುಮಂತ ।
ಮುನಿವ್ಯಾಸ ಕರಕಮಲಾರ್ಚಿತ
ಜಯವಂತ ।। ಪಲ್ಲವಿ ।।
ಭೂಲೋಲ ಕೋಲಜಕೂಲ
ಸುಮಂದಿರ ।
ಫಾಲಾಕ್ಷ ಪೌಲೋಮಿಪತಿ
ವಂದಿತ ।
ಕಾಲಕಾಲದಿ ನಿನ್ನ
ಓಲೈಸುವರ ಸಂಗ ।
ಪಾಲಿಸು ಕರುಣದಿ
ಕಾಳೀ ಮನೋಹರ ।। ಚರಣ ।।
ಬಾಣ ರೂಪನೆ ಪಂಚ-
ಬಾಣ ನಿರ್ಜಿತನೆ । ಷ ।
ಟ್ಕೋಣ ಮಧ್ಯದಿ
ಬಂದು ನೀ ನೆಲೆಸಿ ।
ಕ್ಷೋಣೀಗೀರ್ವಾಣ ಸು-
ಶ್ರೇಣಿಯಿಂದರ್ಚನೆ ।
ಮಾಣದೆ ಕೈಕೊಂಬ
ವಾಣೀಶ ಸ್ಥಾನಾರ್ಹ ।। ಚರಣ ।।
ಸಿಂಧು ಬಂಧನ ಶ್ಯಾಮ-
ಸುಂದರವಿಠ್ಠಲನ ।
ದ್ವಂದ್ವ ಪಾದಾರವಿಂದಕೆ
ಮಧುಪ ।
ನೆಂದೆನಿಸಿದ ಗುರು
ಗಂಧವಾಹನ । ನಿನ ।
ಗೊಂದಿಸುವೆನು ಭವ-
ಬಂಧ ಬಿಡಿಸಿ ಕಾಯೋ ।। ಚರಣ ।।
***
ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ
ಶ್ರೀ ಶ್ಯಾಮಸುಂದರದಾಸರು ಹಂಪೆಯ ಚಕ್ರತೀರ್ಥದ ಬಳಿಯಿರುವ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಅಮೃತ ಹಸ್ತಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಯಂತ್ರೋದ್ಧಾರಕ ಮುಖ್ಯ ಪ್ರಾಣದೇವರ ಸನ್ನಿಧಿಗೆ ಬಂದು ಅಲ್ಲಿ ಸ್ಥಿರವಾಗಿ ನೆಲೆನಿಂತ ಯಂತ್ರೋದ್ಧಾರಕ ಹನುಮಂತರಾಯನನ್ನು ವರ್ಣಿಸಿದ್ದಾರೆ.
ಭೂಲೋಲ = ಭೂದೇವಿ ರಮಣ
ಕೋಲ = ಹಂದಿ
ಕೊಲಾಜ = ವರಾಹದೇವರ ಕೋರೆದಾಡೆಗಳಿಂದ ಉದ್ಭವವಾದ ತುಂಗಭದ್ರಾ ನದಿ
ಕೂಲಸ್ಥ ಮಂದಿರ = ನದಿಯ ತೀರದಿ ( ಚಕ್ರತೀರ್ಥದ ಸಮೀಪ )
ಪಾಲಾಕ್ಷ = ರುದ್ರದೇವರು ( ಹಣೆಯಲ್ಲಿ ಕಣ್ಣುಳ್ಳವರು )
ಪೌಲೋಮಿಪತಿ = ಶಚೀಪತಿ ಇಂದ್ರದೇವರು
ಓಲೈಸುವ = ಸೇವಿಸುವ
ಕಾಳೀ ಮನೋಹರ = ಕಾಳೀ ನಾಮಕ ಭಾರತೀದೇವಿಯರ
ಪತಿಪಂಚ ಬಾಣ = ಅಶೋಕಾದಿ ಪಂಚ ಪುಷ್ಪಗಳನ್ನು ಬಾಣವನ್ನಗಿ ಉಳ್ಳ ಮನ್ಮಥನನ್ನು
ನಿರ್ಜಿತನೆ = ಗೆದ್ದವರು ' ಅಜೇಯರು ( ಅಂದರೆ ಜಿತೇಂದ್ರಿಯರು )
ಷಟ್ಕೋಣ = ಶ್ರೀ ವ್ಯಾಸರಾಜರು ಯಂತ್ರೋದ್ಧಾರಕ ಪ್ರಾಣದೇವರನ್ನು ಪ್ರತಿಷ್ಠಾಪಿಸಿದ್ದಾರೆ.
ಆ ಷಟ್ಕೋಣ. ಅದರ ಸುತ್ತಲೂ ವಲಯಾಕಾರ.
ಅದರ ಸುತ್ತಲೂ ಪದ್ಮದಳಗಳು.
ಅದರ ಮೇಲೆ ಒಂದಕ್ಕೊಂದು ಹಣೆದುಕೊಂಡಿರುವ ಹನ್ನೆರಡು ಕಪಿಗಳಿಂದ ಯಂತ್ರ ಬಿಗಿಯಲ್ಪಟ್ಟಿದೆ.
ಯಂತ್ರದ ಮಧ್ಯದಲ್ಲಿ ಜಪಮಾಲಾಧಾರಿಗಳಾಗಿ, ಯೋಗಾಸನಾರೂಢರಾಗಿ, ಶ್ರೀ ಮುಖ್ಯ ಪ್ರಾಣದೇವರು ಧ್ಯಾನ ಮಗ್ನರಾಗಿದ್ದಾರೆ.
ಇದುವೇ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ದಿವ್ಯ ಭವ್ಯ ಚಿತ್ರಣ.
ಶ್ರೀ ಶ್ಯಾಮಸುಂದರದಾಸರ ಹೆಸರಿಗೆ ತಕ್ಕಂತೆ ಅವರ ವದನಾರವಿಂದದಲ್ಲಿ ಹೊರಹೊಮ್ಮಿದ ಸುಂದರವಾದ ಸ್ತೋತ್ರ ಪದ!
****
ಮುನಿವ್ಯಾಸ ಕರಕಮಲಾರ್ಚಿತ ಜಯವಂತ ।। pa। ।
ಭೂಲೋಲ ಕೋಲಜಕೂಲ ಸುಮಂದಿರ ।
ಫಾಲಾಕ್ಷ ಪೌಲೋಮಿಪತಿ ವಂದಿತ ।
ಕಾಲಕಾಲದಿ ನಿನ್ನ ಓಲೈಸುವರ ಸಂಗ ।
ಪಾಲಿಸು ಕರುಣದಿ ಕಾಳೀ ಮನೋಹರ ।। 1 ।।
ಬಾಣ ರೂಪನೆ ಪಂಚಬಾಣ ನಿರ್ಜಿತನೆ । ಷ ।
ಟ್ಕೋಣ ಮಧ್ಯದಿ ಬಂದು ನೀ ನೆಲೆಸಿ ।
ಕ್ಷೋಣೀಗೀರ್ವಾಣ ಸುಶ್ರೇಣಿಯಿಂದರ್ಚನೆ ।
ಮಾಣದೆ ಕೈಕೊಂಬ ವಾಣೀಶ ಸ್ಥಾನಾರ್ಹ ।। 2।।
ಸಿಂಧು ಬಂಧನ ಶ್ಯಾಮಸುಂದರವಿಠ್ಠಲನ ।
ದ್ವಂದ್ವ ಪಾದಾರವಿಂದಕೆ ಮಧುಪ ।
ನೆಂದೆನಿಸಿದ ಗುರು ಗಂಧವಾಹನ । ನಿನ ।
ಗೊಂದಿಸುವೆನು ಭಾವಬಂಧ ಬಿಡಿಸಿ ಕಾಯೋ ।। 3 ।।
****
No comments:
Post a Comment