susheelendra teertha rayara mutt yati 1926 stutih
ರಾಗ : ಧನ್ಯಾಸಿ ತಾಳ : ಝ೦ಪೆ
ದಾನಿಗಳೊಳು ಪ್ರತಿಗಾಣೆನೊ ನಿನಗೆ । ಸ ।
ನ್ಮಾನಿ ಶ್ರೀ ಸುಶೀಲೇಂದ್ರ ।। ಪಲ್ಲವಿ ।।
ನೀನೇವೆ ಗತಿಯೆಂದ ।
ದೀನರ ಮನೋಭೀಷ್ಟ ।
ಸಾನುರಾಗದಿ ಕೊಡುವಿ ಕೈಪಿಡಿವಿ ।। ಆ. ಪ ।।
ಶ್ರೀ ಸುಕೃತೀಂದ್ರ
ಸಂಯಮಿಗಳಿಂದ ।
ಲಿ ಸಂನ್ಯಾಸತ್ವ ಸ್ವೀಕರಿಸಿ ।
ಭೂಸುತೆ ಪತಿ ಮೂಲ
ದಾಶರಥಿಯ ಪಾದ ।
ಲೇಸಾಗಿ ಒಲಿಸಿದಿ
ನೀ ಸುಜ್ಞಾನಿ ।। ಚರಣ ।।
ಕರಿವರದನ ಪೂರ್ಣ
ಕರುಣವ ಪಡೆದು । ದಿನ ।
ಕರನಂತೆ ರಾಜಿಸುತ ।
ಗುರು ರಾಘವೇಂದ್ರಾಖ್ಯ
ಸುರಧೇನುವಿಗೆ ಪುಟ್ಟ ।
ಕರುವೆನಿಸುತ ಮೆರೆದಿ
ಭೂವಲಯದಿ ।। ಚರಣ ।।
ಮೋದತೀರ್ಥಾಗಮ
ಸಾಧು ಸಜ್ಜನರಿಂದ ।
ಶೋಧಿಸಿ ಬಹು ವಿಧದಿ ।
ಮೇದಿನಿಯೋಳ್ ಪಂಚಭೇದ
ಶಿಷ್ಯರಿಗೆಲ್ಲ ।
ಬೋಧಿಸುತಲಿ ಪೊರೆದಿ
ದಯಾ೦ಬುಧಿ ।। ಚರಣ ।।
ಮಂದಾಕಿನಿಗೆ ಸಮ-
ವೆಂದೆನಿಸುವ ವರದಾ ।
ಸಿಂಧು ತೀರದಿ ನೆಲಸೀ ।
ಮಂದಾರಕುಜದಂತೆ
ಮಂದ ಜನರಿಗೆ । ಕ ।
ರ್ಮಂದಿಪ ವರಗಳನು
ನೀಡುವಿ ನೀನು ।। ಚರಣ ।।
ಶ್ರೀ ಶ್ಯಾಮಸುಂದರವಿಠಲನ
ವಾಸಿಸುವ । ರೌ ।
ಪ್ಯಾಸನ ವರ ಕ್ಷೇತ್ರದಿ ।
ದೇಶ ದೇಶದಿ ಬಂದ
ಭೂಸುರರಿಗೆ । ಧನ
ರಾಶಿಸೂರೆ ಮಾಡಿದಿ
ಸನ್ಮೋದದಿ ।। ಚರಣ ।।
****
No comments:
Post a Comment