Saturday, 1 May 2021

ಗುರುಗಳ ನೋಡಿರೈ ಉತ್ತಮ ವರಗಳ ಬೇಡಿರೈ ankita pranesha vittala bhuvanendra teertha stutih

 bhuvanendra teertha, rayara mutt stutih

ರಾಗ : ಭೈರವಿ ತಾಳ : ಆದಿ

ಗುರುಗಳ ನೋಡಿರೈ । ಉತ್ತಮ ।

ವರಗಳ ಬೇಡಿರೈ ।। ಪಲ್ಲವಿ ।।


ದುರುಳ ತಿಮಿರ ದಿವಾಕರ ।

ಶರಣರ ಸುರತರು ।

ವರದೇಂದ್ರರ ಕರ ಪಂಕಜರುಹ ।। ಅ. ಪ ।।


ಮಂಗಳ ಸ್ವರೂಪ 

ಮಧ್ವಮತಾಂಬುದಿ ಸೋಮ ।

ಸದ್ಗುಣ ಸೋಮ ।

ಪಿಂಗಳನಿಭ ಸಂನ್ಯಾಸ 

ಕುಲೋತ್ತಮ ।

ನೀತಾ ಲೋಕ ವಿಖ್ಯಾತ ।।

ಸಂಗರಹಿತ ಕೌಪೀನ 

ಕಮಂಡಲ ಧರ ।

ದೋಷ ವಿದೂರಾ ।

ಮಂಗಳೆ ಪತಿ ಪದ ಭಜಕ ।

ಅಘೋರಗ ವೀಂದ್ರ 

ಶ್ರೀ ಭುವನೇಂದ್ರಾ ।। ಚರಣ ।।


ಜನ್ಮಾರಭ್ಯವು ಲೌಕಿಕ 

ಸ್ವಪ್ನದೊಳಿರಿಯಾ ।

ಭೂಸುರ ವರ್ಯಾ ।

ಸುಮ್ಮನೆ ಈ ಪದ 

ಪದವಿಯು ಜಗದೊಳು ।

ಬಹುದು ಆರಿಗೆ ಅಹುದು ।।

ಬೊಮ್ಮನ ಸಂತತಿಯಿದು 

ಪುಸಿಯಲ್ಲ ಸತ್ಯಾ ।

ಭಜಿಸಿರಿ ನಿತ್ಯಾ ।

ಎಮ್ಮ ಬಳಿಯೊಳಿಹ 

ದುಷ್ಟಮತೇ೦ಧನ ।

ದಾವಾ ಸೌಖ್ಯವನೀವಾ ।। ಚರಣ ।।


ಧಾರುಣಿಯೊಳು ವಿಸ್ತರಿದ 

ಸ್ವಮತವ ।

ಧೀತ ಗುಣ ಗಂಭೀರಾ ।

ಆರಿಂದೊಶ ಚರಿತೆಯ 

ಪೂರ್ತಿಸಿ ।

ಪೇಳ್ದದಕೆ ಬಹುಸುಖಿ 

ಮನಕೆ ।।

ಶ್ರೀ ರಾಘವೇಂದ್ರರನುಗ್ರಹ ।

ಪಾರಾವಾರದೊಳಗೆ 

ವಿಹಾರಾ ।

ಘೋರಿಸುತಿಹ ಸಂಸಾರ 

ಸಮುದ್ರಕೆ ।

ಮುನಿಯೂ ಯತಿ 

ಶಿರೋಮಣಿಯೂ ।। ಚರಣ ।।


ಚರಕಾಲ ಸುಕೃತ 

ದೊರಕಲು ।

ವದಗುವುದು 

ಸೇವೆಯಿವರದು ।

ಮರಳೊಂದ್ಯೋಚಿಸದೆ ।

ಶರಣಾಗತರಾಗೀ 

ಚಿಂತೆಯ ನೀಗಿ ।।

ಎರವಿಲ್ಲದೆ ದುಃಖವ 

ಪರಿಹರಿಪರು ।

ಹತ್ತೇ ಕರೆವರು ಮತ್ತೇ ।

ಸಿರಿ ಪೂರ್ಣಾಯು 

ಸುತಾದಿ ।

ವಿಷಯಗಳ ಕೊಡುವ 

ದುರಿತವ ತರಿವ ।। ಚರಣ ।।


ತವಕದೊಳಿವರ 

ಪದಾಬ್ಜವ ।

ಸೇವಿಪ ಭಕ್ತ 

ಜೀವನ್ಮುಕ್ತಾ ।

ಕುವಲಯದೊಳ-

ಗೀಗಿವರಿಗೆ ।

ಸರಿಯಾರಿಲ್ಲ 

ಕೇಳಿರಿ ಸೊಲ್ಲಾ ।।

ಅವನೀಶರು 

ಎಂಬಾಹ್ವಯ ।

ತಿಳಿಯಲಿಕುಂಟೇ 

ಅಧಿಕರುವುಂಟೇ ।

ಇವರಿಗೆರಗದಿರೆ 

ಒಲಿಯನು ।

ಶ್ರೀ ಪ್ರಾಣೇಶವಿಠಲನು 

ಲೇಶಾ ।। ಚರಣ ।।

***

No comments:

Post a Comment