Sunday, 23 May 2021

ನರಸಿಂಹ ನಿನ್ನ ಪಾದ ಸರಸಿಜಕ್ಕೆ ಎರಗೀ ankita janardhana vittala

ರಾಗ – : ತಾಳ – 


ನರಸಿಂಹ ನಿನ್ನ ಪಾದ ಸರಸಿಜಕ್ಕೆ ಎರಗೀ l

ಅರಸುವೆ ನಾನಾ ಪರಿಯಾರುಕ್ತಿ ಪರಾಕೇ ll ಪ ll


ಪ್ರಹ್ಲಾದ ವರದನೇ ಪ್ರಣವಾ ಮೂರುತಿಯೇ l

ಆಹ್ಲಾದವೀಯೊ ಭಕ್ತಾ ಮನೋಸಾರಥಿಯೇ l

ವಹಿಸಿದೆ ನಿನಗೆನ್ನ ವಪುವಾಹತಿಯೇ l

ಸಹಿಸು ಎನ್ನಪರಾಧ ಸಾರ ಚರಿತೀಯೇ ll 1 ll


ಶ್ರೇಷ್ಠ ದ್ವೀಭುಜದಿಂದ ಇಷ್ಟಾರ್ಥಗೊಡುವೆ l

ಅಷ್ಟಕರ್ತೃತ್ವ ಷಡ್ಗುಣಾದಿಯ ಧನವಾ l

ನಿಷ್ಠಿವುಳ್ಳಾ ಜನಕ್ಕೆ ನೀ ನಿತ್ಯ ಕಾಡುವೆ l

ಸೃಷ್ಟಿಪಾಲಕ ಎನ್ನ ಪೊರೆವ ಸುರತರುವೇ ll 2 ll


.ಕಾಮಕ್ರೋಧಗಳೆಂಬೊ ಖಳರಾ ನೀ ತರಿದು l

ಸ್ವಾಮಿ ಪಾಲಿಸೊ ನಿನ್ನ ಭೃತ್ಯನೆಂದರಿದೂ l

ಭೂಮಿಯೊಳಗೆ ಹೇಮಾರಿಪುವರಿ ಬೀರಿದು l

ಆ ಮಹಾ ಜನಾರ್ದನವಿಟ್ಠಲನೆಂದರಿದೂ ll 3 ll

***

 

No comments:

Post a Comment