ಹಿಂದಕ್ಕೆ ವನದಲ್ಲಿ ತಪವ ಮಾಡುತಲಿದ್ದೆ ಬಂದೊಬ್ಬ
ಮುನಿಯು ಹೇಳಿದನು
ತಂದೆತಾಯಿಗಳೆಮಲೋಕದೊಳಿಹರೆಂದು ಬಂದು
ಹೇಳಿದನೆ ಸುದ್ದಿಯನು 302
ಆತನ ವಾಕ್ಯವ ಕೇಳಿ ನಾ ವನದಲ್ಲಿ ಆಚರಿಸಿದೆ ತಪಗಳನು
ಖೇಚರದಲಿ ಸುರಕನ್ನಿಕೆ ಸುಳಿಯಲು ಆಕ್ಷಣ
ಬಿಂದು ಸಡಿಲಿದವು 303
ತಾವರೆ ಕಮಲದೊಳಿಟ್ಟು ನೀರೊಳು ಬಿಟ್ಟೆ
ಏನಾಯಿತೆಂದು ನಾನರಿಯೆ
ಕಾಲಾಂತರದಲಿ ತೇಲಿ ಬಂದನು ಕಂದ
ಪಾಲಿಸಿಕೊಂಡೆನು ತಂದು 304
ಕಂದನ ತಂದು ಇಂದಿಗೆ ಏಳೊರುಷವು ರಂಭೆ
ಬಂದಳು ನಮ್ಮ ಮಠಕೆ
ಹೇಳ ಬಂದೆನು ನಿಮ್ಮ ಕೂಡೆ ಈ ವಾರ್ತ್ತೆಯ
ಮಾಡಿ ನಿಮ್ಮನಕೆ ಬಂದುದನು 305
ಉತ್ತಮವೆನುತಲೆ ಬಂದರು ಮುನಿಗಳು
ಮತ್ಸ್ಯಲೋಚನೆ ಇಪ್ಪಯೆಡೆಗೆ
ಮತ್ತೊಬ್ಬ ಮುನಿಗಳು ಅರಸುತ್ತಲಿತ್ತ ಬಂದರು
ಅಕ್ಕಟ ವಿಧಿಯೆಂದಳಾಕೆ 306
ಮುನಿಗಳ ಕಾಣುತ್ತ ಮುಂದಕ್ಕೆ ಬಂದಳು
ಚರಣದ ಮೇಲೆÉರಗಿದಳು
ಮುಡಿ ಹಿಡಿದೆತ್ತಿ ಕೊಡಹಿ ಮೈಯ ಧೂಳನು ಬಡವಾದೆ
ಮಗಳೆ ನೀನೆಂದು 307
ಪತಿಸುತರಿಲ್ಲವೆ ಪಾಲಿಸುವರೆ ನಿನಗೆ
ಅತಿಉಗ್ರತಪವೇಕೆ ನಿನಗೆ
ಸಖಿಯರ ಸಹವಾಸಯಿಲ್ಲದೆ ಇರುವುದು ಮತವೆ
ಉತ್ತಮರಿಗ್ಹೇಳೆಂದ 308
ಕಡುಕೋಮಲಾಂಗಿ ನೀ ಅಡವಿಯಲಿಪ್ಪರೆ
ಹಡೆದವರಿಲ್ಲ ನೀನ್ಯಾರು
ಒಡಯರೊಬ್ಬರು ಇಲ್ಲದಿರುವುದುಚಿತವಲ್ಲ ನುಡಿ
ನಿನ್ನ ಮನದ ಸಂದೇಹ 309
ಸೂರ್ಯಕುಲದ ರಘುರಾಯ ನಮ್ಮಯ್ಯನು
ಆಳ್ವನಯೋಧ್ಯ ಪಟ್ಟಣವ
ಪೂರ್ವಾರ್ಜಿತದ ವಿಧಿ ಬಂದು ತುಡುಕಲು ಆಯಿತು
ಈ ವಿಧಿಯಾಗಿ 310
ಭೂತಳಪತಿ ರಘುರಾಯ ನಿಮ್ಮಯ್ಯನು
ಖ್ಯಾತಿಪಡೆದ ಮೂರು ಜಗದಿ
ಕಾಂತೆ ನೀ ಮಾಡಿದ ತಪ್ಪೇನು ಮನೆಯಿಂದ
ಯಾತಕ್ಕೆ ಹೊರವಡಿಸಿದರು 311
ಹೆತ್ತ ತಾಯಿ ತಂದೆ ಆಜೆÉ್ಞೀಲಿ ನಾನಿದ್ದೆ ಚಿತ್ತ
ಚಂಚಲವಾಗದ್ಹಾಂಗೆ
ಮತ್ತೊಂದು ದಿವಸ ನೀರಾಟಕ್ಕೆ ಬಂದೆನು
ಮಿತ್ರೆಯರನೆ ಒಡಗೊಂಡು 312
ಗಂಗೇಲಿ ನೀರಾಟವಾಡುವ ಸಮಯದಿ
ಹಿಂದಣ ಪೂರ್ವಕಲ್ಪನೆಯೊ
ಕೆÀಂದಾವರೆಯಾಗಿ ಬಂದೆನ್ನ ಸೋಂಕಲು ನಿಂದವು
ಗರ್ಭ ಸ್ಥಿರವಾಗಿ 313
ಮೇಲುಭಾಗದಿಂದ ತೇಲಿಬಂದಿತು
ಪುಷ್ಪ ನೀರಾಟವಾಡುತ್ತಿದ್ದೆಡೆಗೆ
ಪಾವನ್ನಪಂಕಜ ಪರಿಮಳ ಪುಷ್ಪವ ಆಘ್ರಾಣಿಸಿದೆನು ಶೀಘ್ರದಲಿ 314
ಕೇಳಿ ಸೈರಿಸಲಾರದೆ ನಮ್ಮಯ್ಯನು ಊಳಿಗದವರ ಕರೆಸಿದನು
ಸೀಳಿಬನ್ನಿವಳನು ಎನುತಲೆ ಕಳುಹಿದ ಖೂಳರು ಎನ್ನುಳುಹಿದರು 315
ಅರಣ್ಯದೊಳಗೊಬ್ಬಳಳುತ ನಿಂತಿದ್ದೆನು ದೂರದಿ
ಕಂಡನೀ ಮುನಿಯು
ಕಾರುಣ್ಯದಿಂದಲೆ ತಾನು ಕರೆದು ಕೊಂಡ್ಹೋಗಿ
ನಾರಿಯ ಕೈಯೊಳಗಿತ್ತ 316
ತಾಯಿ ತಂದೆ ಅಂದದಿ ಪಾಲಿಸುತ್ತಿದ್ದರು ಬಾಲ
ಹುಟ್ಟಿದ ಮೂಗಿನಿಂದ
ನಾನು ಅಂಜಿ ಮಾನವರಪವಾದಕ್ಕೆ ನೀರೊಳು
ಶಿಶುವ ನೂಕಿದೆನು 317
ಭೂತ ಹುಟ್ಟಿತೆಂದು ಭೀತಿಯ ಪಡುವರು
ಮಾತನಾಡುವರು ಮೂಜಗದಿ
ಯಾತರೇ ಶಿಶುವೆಂದು ಜಲದೊಳು ನೂಕಿದೆ ಲೋಕ
ಲೋಕವ ಚರಿಸಿದೆನು 318
ಘಟ್ಟ ಬೆಟ್ಟವ ತಿರುಗೆ ಏಳು ವರುಷವು
ಹೊತ್ತಾರೆಬಂದೆ ಈ ಮಠಕೆ
ಪುಟ್ಟ ಬಾಲಕ ಎನ್ನ ನಿಂದಿರಗೊಡಿಸದೆ ಅಟ್ಟಿದ
ಹೋಗು ಹೋಗೆನುತ 319
ಪರಸತಿಯಾರೆಂದು ಬೈವನು ನಮ್ಮಯ್ಯನು
ಇರಬೇಡ ಹೋಗು ಹೋಗೆನುತ
ಹೊರವಡಿಸಿದ ಎನ್ನ ಈ ವನಕೆ ಬಂದೆನು ಮರಳಿ
ಬಂದೆನ್ನ ಕರೆಯುವಿರಿ 320
ತಾಯೆ ನೀ ಪತಿವ್ರತೆ ಈ ಮುನಿ ವೀರ್ಯವ
ತಾವರೆಕಮಲದೊಳಿಟ್ಟು
ನೀರೊಳು ಬಿಟ್ಟನು ನಿನ್ನ ಕೈಸೇರಿತು ಬಾಲ
ಹುಟ್ಟಿದ ಮೂಗಿನಿಂದ 321
ತಪ್ಪಿಲ್ಲ ತಾಯೆ ನೀ ಕರ್ಪೂರಗಂಧಿನಿ
ಒಪ್ಪಿಕೊ ಈ ಮುನಿವರನ
ಋಷಿಗಳೆಲ್ಲರು ಕೂಡಿ ಸಕಲ ಸಂಭ್ರಮದಿಂದ ಇತ್ತರೆ
ಮುನಿಯ ಕೈಯೊಳಗೆ 322
ಬಂದಪನಿಂದ್ಯವ ಹಿಂದುಗಳೆಯದೆ ತಂದೆತಾಯಿಗಳುಲ್ಲಂಘಿಸಿ
ಇಂದು ಈತನ ಒಡಗೂಡುವುದುಚಿತವೆ
ಧರೆಯೊಳು ಜನಕೆ ಸಮ್ಮತವೆ 323
ಪರಿಹರಿಸಿಕೊಳ್ಳದೆ ಎನ್ನಪನಿಂದ್ಯವ
ಹಡೆದವರರಿಯದಂ[ದ]ದಲಿ
ಮರಳಿ ಈತನ ಒಡಗೂಡುವುದುಚಿತವೆ ಧರೆಯೊಳು
ಜನಕೆ ಸಮ್ಮತವೆ 324
ಸತ್ಯವಾಡಿದಳು ಚಂದ್ರಾವತಿ ಎನುತಲೆ ಮತ್ತೆ
ಯೋಚಿಸಿ ತಮ್ಮ ಮನದಿ
ಹೆತ್ತವರರಿಕೇಲಿ ಮಾಡುವ ಮದುವೆಯ
ಕನ್ಯಾರ್ಥಿಗಳಾಗಿ ಹೋಗುವೆವು 325
ತಾಯಿ ತಂದೆ[ಯ] ಕೇಳಿ ಬಾಹೆವು ನಾವ್ ಹೋಗಿ
ಬಾಲಕನೊಡಗೊಂಡು ಹೋಗು
ನಾರಿಯತ್ತ ಕಳುಹಿ ತಾವ್‍ಇತ್ತ ಬಂದರು
ಭೋರನಯೋಧ್ಯಾಪಟ್ಟಣಕೆ 326
ಬಿಗಿದು ಕಟ್ಟಿದ ಜಡೆ ಕೈಲಿ ಕೃಷ್ಣಾಜಿನ
ಮೃಡನಂತೆ ಮೈಗೆ ಶ್ರೀಗಂಧ
ಗಡಿ ಮಿತಿಯಿಲ್ಲದೆ ಬಂದರು ಮುನಿಗಳು
ಒಡನೆ ಅಯೋಧ್ಯಾಪಟ್ಟಣಕೆ 327
ಬತ್ತಿಗಟ್ಟಿದ ಜಡೆ ಬಾಡಿದ ನಯನವು ಎತ್ತಿದ
ಊಧ್ರ್ವ ಬಾಹುಗಳು
ಕೃಷ್ಣಾಜಿನವನು ಕರದಿ ಪಿಡಿದು ಮುನಿಶ್ರೇಷ್ಠರೆಲ್ಲರು
ನಡೆತರಲು 328
ಎತ್ತಲಿಂದಲೆ ಬಂದಿತೀಋಷಿಗಳ ಸ್ತೋಮ
ನೃಪೋತ್ತಮ ನಿಮ್ಮ ಪಟ್ಟಣಕೆ
ಮುತ್ತಿಗೆ ಹಾಕುವಂದದಿ ಬಂದು ನಿಂದವೆ ಮತ್ತೇನು
ಇದಕೆ ಉಪಾಯ 329
ಮುನಿಗಳ ಕಾಣುತ ಮುಂದಕ್ಕೆ ಬಂದನು ಚರಣದÀ
ಮೇಲೆ ಎರಗಿದನು
ಒಡಗೊಂಡು ಬಂದು ಗದ್ದುಗೆ ಮೇಲೆ ಕುಳ್ಳಿರಿಸಿ ಮಡದಿ
ಸಹವಾಗಿ ಪೂಜಿಸಿದ 330
ದಾರಿತಪ್ಪಿ ದಯವಿಟ್ಟು ಬಂದಿರಿ ಎನ್ನ ಗೃಹವು
ಪಾವನವಾಯಿತೆಂದು
ಷೋಡಶೋಪಚಾರವ ಮಾಡಿದ ರಾಯನು ಬಹಳ
ಪರಿಯಿಂದಲೊಂದಿಸಿದ 331
ಬೇಡ ಬಂದೆವು ನಿನ್ನ ಮಗಳ ಉದ್ದಾಳಿಕಗೆ
ಮಾಡದೆ ಎರಡು ಮನಸನು
ಕಾಲತೊಳೆದು ಕನ್ಯಾದಾನವ ಮಾಡಿದರೆ ಮೇಲೆ
ಬಹುದು ಪುಣ್ಯ ನಿನಗೆ 332
ಕನ್ಯಾರ್ಥಿಯಾಗಿ ಬಂದೆವು ನಿನ್ನ ಮಗಳಿಗೆ
ಚೆನ್ನಾಗಿ ನೋಡು ಈವರನ
ಮನ್ನಿಸಿ ಕಾಲತೊಳೆದು ಧಾರೆಯೆರೆದರೆ
ನಿನ್ನ ಸುಕೃತಕೆಣೆಯುಂಟೆ 333
ಹೆಣ್ಣೆಂಬೊ ಮಾತಿಗೆ ಮನದಲ್ಲಿ ನೊಂದನು
ಕಣ್ಣಲ್ಲಿ ಜಲವ ತುಂಬಿದನು
ಹೊನ್ನು ಹಣವು ಬೇಡಿದೊಸ್ತುವ ಕೊಡುವೆನು
ಕನ್ನಿಕಿಲ್ಲೆನ್ನ ಮನೆಯಲಿ 334
ಹಣಹೊನ್ನು ನಮ್ಮಗೇಕೆ ಅಡವಿಯಲಿರ್ಪೆವು
ಕೊಡು ನಿನ್ನ ಮಗಳ ಶೀಘ್ರದಲಿ
ಸಿಡಿಮಿಡಿಗೊಂಡರೆ ಬಿಡುವೋರು ನಾವಲ್ಲ ತಡೆಯದೆ
ಕೊಡು ನಿನ್ನ ಮಗಳ 335
ಹಿಂದಕ್ಕೆ ಕನ್ನಿಕಿದ್ದಳು ಎನ್ನ ಮನೆಯಲ್ಲಿ ಕೊಂದು
ಬಂದೆನು ಅಡವಿಯಲಿ
ಇಂದುಶೇಖರನಾಣೆ ಇಟ್ಟುಕೊಂಡಿದ್ದರೆ ಎಂದು
ಚರಣವನೆ ಮುಟ್ಟಿದನು 336
ಮಗಳ ತೋರಿಸಿದರೆ ಕೊಡುವದು ಸತ್ಯವೆ
ಬಡಮುನಿಯೆಂದು ಯೋಚಿಸದೆ
ನುಡಿನಿನ್ನ ಮನದ ಸಂಕಲ್ಪವನೆಂದಿನ್ನು
ಒಡಂಬಡಿಸಿದರು ಭೂಪತಿಯ 337
ಅರಣ್ಯದಲಿ ಕೊಂದು ಬಂದ ಕುಮಾರಿಯ
ತೋರುವದಗಣಿತಾಶ್ಚರ್ಯ
ಧಾರೆಯನೆರೆದು ಕೊಡುವೆ ಈ ಕ್ಷಣದಲಿ
ದೇವಾಬ್ರಾಹ್ಮರು ಮೆಚ್ಚುವಂತೆ 338
ಮರೆತು ಮಲಗಿದ್ದಾಗ ಸುರರಡ್ಡÀ ಸುಳಿದರೊ
ಸುರರೊ ನರರೊ ಕಿನ್ನರರೊ
ಅರಿಯದೆ ಕಳುಹಿದೆ ಅಜ್ಞಾನತನದಲಿ
ಹಿರಿಯರಿಲ್ಲವೆ ನಿನ್ನ ಮನೆಯ 339
ಪುತ್ರಿಯ ಕೊಲುವರೆ ಕ್ಷತ್ರಿಯ ಮತದಲಿ ಹತ್ಯಾ
ಮಾಡುವರೆ ಸ್ತ್ರೀಯರನು
ಅತ್ಯಂತ ಬಲ್ಲ ಮಂತ್ರಿಗಳಿಲ್ಲ್ಲ ನಿನ್ನಲ್ಲಿ
ತತ್ತ್ವಭೋಧನೆಯ ಮಾಡುವರೆ 340
ಕೊರಳ ಕೊಯ್ಯೆಂದು ನೀ ಕಳುಹಿದೆ ಮಗಳನು
ಉಳುಹೆ ಹೋದರು ಅಡವಿಯಲಿ
ಸಮಿಧೆಗೋಸ್ಕರ ಇತ್ತ ಬಂದು ನಾಕಂಡೆನು
ಕರೆದೊಯ್ದೆ ಎನ್ನ ಆಶ್ರಮಕೆ 341
ನಾರಿಗೆ ನವಮಾಸ ತುಂಬಲು ಆಕ್ಷಣ ಮೇಲೆ
ಬಂದಿತು ಪ್ರಸವ ಕಾಲ
ನಾಲ್ಕು ವೇದಗಳನು ಸ್ವರದಿಂದಲಳುತಲೆ ಬಾಲ
ಹುಟ್ಟಿದ ಮೂಗಿನಿಂದ 342
ಕಾರಣಿಕದ ಶಿಶುವೆಂದು ನಾವರಿತೆವು ನೀರನೆರೆದು ಸಲಹಿದೆವು
ಬೇರೊಂದು ಪರ್ಣಶಾಲೆಯಲಿ ಇಟ್ಟಿದ್ದೆವು ನಾರಿ
ತಾನರ್ಧರಾತ್ರೆಯಲಿ 343
ಬಾಲಸಹಿತ ಚಂದ್ರಾವತಿಯಿಲ್ಲವೆನುತಲೆ
ಚಾಲುವರಿದೆವು ಮನದೊಳಗೆ
ನೀರೊಳು ಕಂದ ಬಂದನೆ ಸೂರ್ಯೋದಯಕ್ಕೆ
ಸ್ನಾನವ ಮಾಡುತಿದ್ದೆಡೆಗೆ 344
ತಂದೇಳುವರುಷ ಪರಿಯಂತರ ಸಲಹಿದ
ಇಂದು ಸತಿಯ ಕಂಡನೀತ
ಒಂದಾಯಿತಿದಕೇನು ಮನದ ಸಂಶಯಗಳು
ಬಂದಳು ನಿನ್ನ ಕುಮಾರಿ 345
ಮುನಿಗಳ ಮಾತನೆಲ್ಲವ ಕೇಳಿ ರಾಯನು
ಮನದಲ್ಲಿ ಸಂತೋಷ ತಾಳಿ
ತನುಜೆಯ ಕರೆದೊಯ್ದ ದೂತರೆಲ್ಲರ ಕರೆಸಿ
ಅನುನಯದಿಂದ ಕೇಳಿದನು 346
ಹಿಂದಕೆ ಸಿಟ್ಟಿನಿಂದಲೆ ಕೋಮಲಾಂಗಿಯ
ಕೊಂದು ಬಾರೆಂದು ಅಟ್ಟಿದೆನು
ಇಂದು ಪ್ರಸ್ತಾಪ ಬಂದರೆ ನಿಮ್ಮ ಕರೆಸಿದೆ
ಸಂದೇಹವಿಲ್ಲದುಸುರೆಂದ 347
ಜೀಯ ಹಸಾದ ನಿಮ್ಮಪ್ಪಣೆ ಪ್ರಕಾರ ಒಯ್ದೆವು ಬಾಯಾರುತಲೆ
ನ್ಯಾಯವೊ ಅನ್ಯಾಯವೊ ಎನುತಲಿ ತಂಗಿ
ಒಡಗೊಂಡು ತೆರಳಿದೆವು 348
ತಳಿಲ ಹಾಸಿಗೆ ಮೇಲೆ ಮಲಗಿಸಲಾಕೆಗೆ ಘಳಿಲನೆ
ನಿದ್ರೆ ಬಂದೊದಗೆ
(last few lines missing, incomplet?)
****
No comments:
Post a Comment