ಮೂರು ಜಗವ ಕುಣಿಸುವಂಥ ಗಾರುಡಿಗ ಇವ ದಾರಕ್ಕ
ನಾರಾಯಣನಲ್ಲವೇನೆ ನಾರಿ ಕೇಳೆ ತಂಗಿ ಪ.
ವಾರಿಧಿಯೊಳಾಡುವ ವಿಚಾರ ಮಾಡೆ ಅಕ್ಕ
ಧೀರ ಬಲುಗಂಭೀರ ಮತ್ಸ್ಯವತಾರ ಕಾಣೆ ತಂಗಿ 1
ಹತ್ತೂ ನಾಲ್ಕು ರತ್ನವ ತೆಗೆದು ಮತ್ತೆ ಇವ ದಾರಕ್ಕ
ರತ್ನ ಕುಂಚದ ಹೇಮಗಿರಿಯನೆತ್ತಿದ ಕೂರ್ಮ ಕಾಣೆ ತಂಗಿ 2
ಧರಣಿಯ ಸುರುಳಿ ಸುತ್ತಿದಂಥ ಅರಸ ಇವ ದಾರಕ್ಕ
ಅರಿಯದ ಭಕ್ತರ ಮೊರೆಗೋಡುವ ವರಾಹ ಕಾಣೆ ತಂಗಿ 3
ನಂಬಿದವರ ಕಂಬದೊಳು ಎಂಬೆ ಇವ ದಾರಕ್ಕ
ರಂಭೆ ಹೇಮದ ಬೊಂಬೆ ನರಸಿಂಹ ಕಾಣೆ ತಂಗಿ 4
ಕದ್ದು ಅಡ್ಡ ಬಿದ್ದನ ಕಣ್ಣ ಇರಿದ ಇವ ದಾರಕ್ಕ
ಮುದ್ದು ಮುಖದ ಪ್ರಸನ್ನನಾದ ವಾಮನ ಕಾಣೆ ತಂಗಿ 5
ಆ ಮಾತೃ ದ್ರೋಹವ ಮಾಡಿದವ ಇವ ದಾರಕ್ಕ
ಶಾಮ ಸಾರ್ವಭೌಮ ಪರಶುರಾಮ ಕಾಣೆ ತಂಗಿ 6
ಕಾಮಿನಿಯ ಪೋಗಿ ತಂದ ಭೀಮ ಇವ ದಾರಕ್ಕ
ಕಾಮಿತಾರ್ಥವನೀವ ಶ್ರೀ ರಾಮ ಕಾಣೆ ತಂಗಿ 7
ಗೊಲ್ಲತೇರ ಗಲ್ಲವ ಪಿಡಿದ ಚೆಲುವ ಇವ ದಾರಕ್ಕ
ಬಲ್ಲಿದ ಮಲ್ಲರ ಮರ್ದಿಸಿದಂಥ ಕಳ್ಳ ಕೃಷ್ಣ ಕಾಣೆ ತಂಗಿ 8
ತ್ರಿಪುರದೊಳು ಚಪಲಾಕ್ಷಿಯರ ವಿಪರೀತವ ಮಾಡಿದನಕ್ಕ
ಅಪರಿಮಿತ ಮಹಿಮನಿವ ಚಪಲ ಬೌದ್ಧ ಕಾಣೆ ತಂಗಿ 9
ಕುದುರೆಯೇರಿ ಎದುರಿಗೆ ಬರುವ ಚದುರ ಇವ ದಾರಕ್ಕ
ಮಧುವನಿಕ್ಕಿದ ಮಧುರಾಪುರದ ಚದುರ ಕಲ್ಕಿ ತಂಗಿ 10
ಇಂದುವದನ ಮೂರ್ತಿ ಗೋವಿಂದ ಇವ ದಾರಕ್ಕ
ನಂದನ ಕಂದ ಹೆಳವನಕಟ್ಟೆ ರಂಗ ಕಾಣೆ ತಂಗಿ11
***
mUru jagava kuNisuvaMtha gAruDiga iva yArakka|
nArAyaNanallavEna nAri kELa taMgi ||pa||
dhareya suraLi suttidaMtha arasu iMva yArakka|
ariyada Baktara moreyana kELda varAha kELtaMgi ||1||
kudureyanEri edurige baruva cadura iMva yArakka|
madhurA purada kadanava hikkida kalkyanu kELtaMgi ||2||
iMdu vadana mUrti gOviMda iMva yArakka|
naMdana kaMda heLavana kaTTe raMga kELtaMgi ||3||
***
ಮೂರು ಜಗವ ಕುಣಿಸುವಂಥ ಗಾರುಡಿಗ ಇವ ಯಾರಕ್ಕ|
ನಾರಾಯಣನಲ್ಲವೇನ ನಾರಿ ಕೇಳ ತಂಗಿ ||ಪ||
ಧರೆಯ ಸುರಳಿ ಸುತ್ತಿದಂಥ ಅರಸು ಇಂವ ಯಾರಕ್ಕ|
ಅರಿಯದ ಭಕ್ತರ ಮೊರೆಯನ ಕೇಳ್ದ ವರಾಹ ಕೇಳ್ತಂಗಿ ||೧||
ಕುದುರೆಯನೇರಿ ಎದುರಿಗೆ ಬರುವ ಚದುರ ಇಂವ ಯಾರಕ್ಕ|
ಮಧುರಾ ಪುರದ ಕದನವ ಹಿಕ್ಕಿದ ಕಲ್ಕ್ಯನು ಕೇಳ್ತಂಗಿ ||೨||
ಇಂದು ವದನ ಮೂರ್ತಿ ಗೋವಿಂದ ಇಂವ ಯಾರಕ್ಕ|
ನಂದನ ಕಂದ ಹೆಳವನ ಕಟ್ಟೆ ರಂಗ ಕೇಳ್ತಂಗಿ ||೩||
****
No comments:
Post a Comment