ಕೊಡಿಸೊ ಅಂಕಿತವಾ ಗುರುರಾಯಾ ನಿನ್ನ
ಅಡಿಗಡಿಗೆರಗಿ ನಾ ಬೇಡುವೆನಯ್ಯಾ ಪ
ಕರುಣಾಸಾಗರನೆಂದು ಬಂದೆ ನಿನ್ನ ಚರಣವ ನಂಬಿ
ನಾ ಶರಣೆಂಬೆ ತಂದೆ
ಮರಿಯದೆ ಬಹು ತ್ವರದಿಂದೆ ನಿನ್ನಾ
ದರುಶನ ನುಡಿಯ ಪಾಲಿಸೋದಯದಿಂದ 1
ಕಡುಭಕ್ತಿಯಿಂದ ನಾ ಬೇಡಿಕೊಂಬೆ ಕೊಡುವ ಕರ್ತನು
ಎಂದು ಬಿಡದಲೇ ಕಾಡಿ
ಕಡೆಹಾಯಿಸದೆನ್ನನು ನೋಡಿ ಕೈಬಿಡಬ್ಯಾಡೊ ಕರುಣಿಸೋ
ನೀ ದಯ ಮಾಡಿ 2
ಕೊಡು ದಿವ್ಯ ಭಕುತಿ ವೈರಾಗ್ಯ ನಿನ್ನ ಅಡಿಗಳ ಸಾಕ್ಷಿ ನಾ
ಬೇಡ್ವೆ ಈ ಭಾಗ್ಯ
ಕಡೆಸೊ ಅe್ಞÁನವ ಯೋಚಿಸಿ ಕಷ್ಟ ಬಡಿಸಿ ಸುಮ್ಮನೆ
ನೋಡುವದೇನೊ ಯೋಗಿ 3
ದುಷ್ಟ ಪಾಪಿಷ್ಟನು ನಾನು ಅದನಷ್ಟು ಕ್ಷಮಿಸಿ
ಇಷ್ಟಾ ಪೂರೈಸೋ ನೀನು
ಇಷ್ಟಕೆ ದಯಬಾರದೇನೋ ದಯಾದೃಷ್ಟಿಯಿಂದಲಿ
ನೋಡೊ ಸುರ ಕಾಮಧೇನು 4
ಇಂದು ಇದ್ದವ ನಾಳೆಗಿಲ್ಲ ಇನ್ನು ಮುಂದೆ ಸಿಗುವುದು
ಅಂತರ್ಯಾಮಿ ಬಲ್ಲ
ಹನುಮೇಶವಿಠಲನ ಬಾಲಾ ನೀನು ಇಂದೆ
ಇತ್ತರೆ ನಿನ್ನ ಕೇಳ್ವರಿಲ್ಲಾ 5
****
No comments:
Post a Comment