" ಶ್ರೀ ನೃಸಿಂಹದೇವರ ಸ್ವಪ್ನ ಸೂಚನೆ "
ರಾಗ : ಪೂರ್ವೀ ತಾಳ : ತ್ರಿವಿಡಿ
ಬಾರೋ ಶ್ರೀ ನರಹರಿಯೇ ।
ಭವ ಬಂಧ ಮೋಚಕ
ಬಾ ಬಾ ಬಾ ।। ಪಲ್ಲವಿ ।।
ನಂದ ಗೋಪನ
ಕಂದ ಹರಿ ಮುಕುಂದಾ ।
ಸುಂದರ ಮಂಧರೋದ್ಧರ ಧಾರಾ ।
ಸಿಂಧುಶಯನ ಗೋ-
ವಿಂದ ಇಂದಿನಾ ।
ಮಂದಮತಿಗೆ ಸ್ವಾನಂದವೀಯಲು
ಬಾ ಬಾ ಬಾ ।। ಅ ಪ ।।
ಗಾಡಾಂಧಕಾರದೊಳು
ಸ್ವೇಚ್ಛೆಯಲಿ ನಾ ।
ಕಿಡಿಗೇಡಿ ಜೀವನಾನಾಗಲು ।
ನೀಡದಂದಲಿಪ್ಪ
ಲಿಂಗದೊಳಾಡು ।।
ತಾಡುತ ದೂಡಿ ಯೆನ್ನೆನು ।
ಬೇಡಿಗೊಳಿಸಿ ಕಾಡೊಳಟ್ಟದಿ ।
ನಾಡ ರಕ್ಷಿಪ ಗಾಡಿಕಾರನೇ ।। ಚರಣ ।।
ಏಸು ಜನ್ಮಗಳ್ಹೋದವೋ
ಈ ವಿಧದಿ । ಮು ।
ನ್ನೇಸು ಜನ್ಮಗಳು ಳಿದವೋ ।
ದಾಸ ನೀನಿಹೆ ಕ್ಲೇಶದಿಂದಲಿ ।।
ಘಾಸಿಯಾಗುವೆ ಮೋಸ ಮಾಡದೆ ।
ಶ್ರೀಶ ನೀ ಭವ ಪಾಶ । ಕಡದೆ ।
ನ್ನಾಶೆ ಪೂರ್ತಿಸೋ
ವಾಸುದೇವನೇ ।। ಚರಣ ।।
ಪ್ರಾರಬ್ಧವದು ಯಾವುದೋ
ನಿನ್ನಿಚ್ಛೆಯಿಲ್ಲದೆ ।
ಬೇರಿಹುದಲ್ಲವದು ।
ದಾರಿಗಾಣೆನೋ
ದೂರ ನೋಡದೆ ।।
ಪಾರ ಮಾಡ್ವದನಂತ
ಮಹಿಮನೆ ।
ಸೇರಿಸೆನ್ನ ರಮೇಶ ಪಾದಕೆ ।
ಮಾರಪಿತ ಗುರು -
ಶ್ರೀಶ ವಿಠ್ಠಲ।। ಚರಣ ।।
****
No comments:
Post a Comment