Friday, 28 May 2021

ನಿನ್ನ ನೋಡಿ ಧನ್ಯನಾದೆನೋ ಶ್ರೀ ವೇದವ್ಯಾಸ ankita gurugovinda vittala

ನಿನ್ನ ನೋಡಿ ಧನ್ಯನಾದೆನೋ l

ಶ್ರೀ ವೇದವ್ಯಾಸ 

ನಿನ್ನ ನೋಡಿ ಧನ್ಯನಾದೆನೋ ll ಪ ll


ನಿನ್ನ ನೋಡಿ ಧನ್ಯನಾದೆ l 

ಯಜ್ಞಕುಂಡ ದೇಶದಲ್ಲಿ l

ಘನ್ನ ಮಹಿಮ ಪೂರ್ಣ ಸಂ- l

ಪನ್ನ ಮೂರುತಿ ಬಾದರಾಯಣ ll ಅ ಪ ll


ಯಾದವಾರ್ಯ ಮೌನಿ ಶಿಲ್ಪಿ l 

ಶ್ರೀದ ನಿನ್ನ ನವ ಸುಮೂರ್ತಿ l

ಮೋದದಿಂದ ರಚಿಸಿ ತಿದ್ದಿ l 

ಪಾದ ಭಜಿಸಿ ಅರ್ಚಿಸಿರುವ ll 1 ll


ನವ ಸುಮೂರ್ತಿಗಳಲಿ ನಿನ್ನ l

ನವ ಸುಭಕ್ತಿಗಳನು ಬೇಡೆ ll

ನವ ಸುಮಹಿಮೆ ತೋರೆ ಕರಗ l ಳವಲಂಬನದಿ ದಯವ ತೋರ್ದ ll 2 ll


ಅಷ್ಟು ಮೂರ್ತಿಗಳಲಿ ತಮ್ಮ l

ಇಷ್ಟ ಮೂರ್ತಿಯನ್ನೆ ಇರಿಸಿ ll ಅಷ್ಟದಿಗಿಭದಂತೆ ಮೆರೆದ l

ಅಷ್ಟ ಶಿಷ್ಟರಿಗಿತ್ತ ಮುನಿಯು ll 3 ll


ಗುರ್ಜುರೀ ಬಂಕಾಪುರ l ಪು

ಮರ್ಜಿ ಕಾಡಣೀಯು ll

ಘರ್ಜಿಪ ಉದ್ಗಾವಿ ಕಲ್ಲಾಪುರ | ನಿರ್ಜರ ಅಂಘೇರಿ ಮಣೂರ ll 4 ll


ತರ್ಕ ಮುದ್ರ ಅಭಯ ಹಸ್ತ l 

ಅರ್ಕಾನಂತ ಭಾಸ ಗಾತ್ರ ll

ಶರ್ಕ ರಾಕ್ಷ ಮುಖರ ವಿನುತ l

ವಕ್ರ ಮನದ ಜನಕ ಅಮಿತ್ರ ll 5 ll


ಯೋಗ ಪಟ್ಟಕ ವಸನ ಚೆಲ್ವ l ಯೋಗದಾಸನ ಕೂರ್ಮದುಪರಿ ll|ನಾಗನಂತೆ ಪೋಲ್ವ ಜಟಾ l 

ಸೋಗಿನಿಂದ ಮೆರೆವ ದೇವ ll 6 ll


ಯಜ್ಞ ಕುಂಡ ಕ್ಷೇತ್ರ ಮೂರ್ತಿ l

ಯಜ್ಞ ಭೋಕ್ತ ತ್ರಯ ಸುಮೂರ್ತಿ ll

ಯಜ್ಞ ಗುರು ಗೋವಿಂದ ವಿಠಲ l 

ಭಗ್ನ ಗೈಸೊ ಮಾಯ ಪಟಲ ll 7 ll

***


No comments:

Post a Comment