jyeshta gowri haadu
ಪಂಕಜನಾಭಗೆ ಶಂಕಿಸಿ ಶರಣೆಂಬೆ | ಪಂಕಜೋದ್ಭವಗೆ ಶರಣೆಂಬೆ |
ಪಂಕಜೋದ್ಭವಗೆ ಶರಣೆಂದು ಪೇಳುವೆ ಅಂಬಿಕೆಗೆ ಕರವ ಮುಗಿವೆನು ||
ಹಿರಿಯ ಹೆಂಡತಿ ವೈದು ಮುಳ್ಳು ಬೇಲಿಯಲಿಟ್ಟು ಸಿರಿ ವೈದು ಕೊಟ್ಟು ಶ್ರೀಕಾಂತ |
ಸಿರಿವೈದುಕೊಟ್ಟು ಶ್ರೀಕಾಂತೆಂಬ ಅರಸಿಯ ಮನೆಯೊಳಗಿರುತಿದ್ದ ಅರಸು ||
ಹೊರಟನೆ ರಾಯ ತಾ ಮೃಗದ ಬೇಟೆಯನಾಡಿ ಕೆರೆ ಇಲ್ಲ ಭಾವಿ ಮೊದಲಿಲ್ಲ |
ಕೆರೆಯಿಲ್ಲ ಭಾವಿ ಮೊದಲಿಲ್ಲದಿದ್ದರೆ ಬಿಡುವೆ ನಾ ಪ್ರಾಣಗಳನೆಂದ ||
ಹೋಗುವ ದೂತನ ಬೇಗದಲಿ ಕರೆದರು | ಕರದಲ್ಲಿ ದಾರ ಕಟ್ಟಿ |
ಕರದಲ್ಲಿ ದಾರ ಕಟ್ಟಿ ಕೂಗಣಿ ಕುರುಳಿಯಲಿ ಉದಕ ಕೊಡುವೋರು ||
ಹಿಂದಕ್ಕೆ ತಿರುಗಿ ನೀ ನೋಡಬೇಡ ಎನುತಲಿ | ಹಿಂದಕ್ಕೆ ತಿರುಗಿ ಬಿಸಲಿಗೆ |
ಹಿಂದಕ್ಕೆ ತಿರುಗಿ ಬಿಸಲಿಗೆ ಕೂಗಣಿ ಒಡೆದು ನದಿಯಾಗಿ ಹರಿದೀತು ||
ನದಿಯ ನೀರನೆ ಕುಡಿದು ಕರೆದನು ದೂತನ್ನ | ಕರದಲ್ಲಿ ನೀನು ಕಟ್ಟಿದ್ದ |
ಕರದಲ್ಲಿ ನೀನು ಕಟ್ಟಿದ್ದ ದಾರವನು ಇದೇನೆಂದು ಬೆಸಗೊಂಡ ||
ನಾಗ ಕನ್ನಿಕೆಯರು ಲಕ್ಷ್ಮೀ ಧಾರವೆಂದು ಲಕ್ಷಣವುಳ್ಳ ಅರಸಿಗೆ |
ಲಕ್ಷಣವುಳ್ಳ ಅರಸಿಗೆ ಕೊಡು ಎಂದು ಕೊಟ್ಟರು ಲಕ್ಷ್ಮೀ ವರಗಳನು ||
ಬೇಟೆಯಾಡಿ ರಾಯ ಬಳಲಿ ಮನಿಗೆ ಬಂದ | ಬಂದು ರಾಣಿಯ ತೊಡೆಯ ಮೇಲೆ |
ಬಂದು ರಾಣಿಯ ತೊಡೆಯಮೇಲೆ ಮಲಗಲು ಧಾರ ಇದೇನೆಂದು ಬೆಸಗೊಂಡ್ಲು ||
ಕಾಂತೆಯ ಮೇಲೆ ಸುಕಾಂತೆಯ ತಂದೀರಿ ಕರದಲ್ಲಿ ನೀವು ಕಟ್ಟಿದ್ದ |
ಕರದಲ್ಲಿ ನೀವು ಕಟ್ಟಿದ್ದ ಧಾರದ ಮಹಿಮೆಗಳೆನಗೆ ತಿಳಿದೀತು ||
ದೃಷ್ಟಿಸಿ ಕಾಂತೆ ತಾ ಸಿಟ್ಟಿಲಿ ಹರಿದಳು ಹಿತ್ತಲಾಗಿದ್ದ ಪಡವಲ |
ಹಿತ್ತಲಾಗಿದ್ದ ಪಡವಲ ಬಳ್ಳಿಯ ಹಂದರದ ಮೇಲೆ ಎಸೆದಾಳು ||
ಒಣಗಿದ್ದ ಬಳ್ಳಿಯು ಚಿಗಿತು ಫಲವಾಯಿತು | ಅದು ಕಂಡು ರಾಯ ಮನದಲಿ |
ಅದು ಕಂಡು ರಾಯ ಮನದಲ್ಲಿ ಕ್ಲೇಶ ಪಡುತ್ತಿದ್ದ ||
ದಿನದ ಪಡಿಗಳಿಗಾಗಿ ಬಂದಳಾ ದಾಸಿಯು ಪಡುವಲ ಬಳ್ಳಿಯ ಮೇಲಿದ್ದ |
ಪಡುವಲ ಬಳ್ಳಿಯ ಮೇಲಿದ್ದ ಧಾರವನು ಕಂಡು ಸಂತೋಷ ಪಡುತಿದ್ಲು ||
ಕೈಯಲ್ಲಿ ಮುಟ್ಟಿದರೆ ಕಳ್ಳಿ ಎಂದಾರೆಂದು ಕಾಲಲ್ಲಿ ಮುಟ್ಟಿ ಲಕ್ಷ್ಮೀ ಧಾರ |
ಕಾಲಲ್ಲಿ ಮುಟ್ಟಿ ಲಕ್ಷ್ಮೀ ಧಾರವೆಂದು ಮರದ ಕೊನೆಯಲ್ಲಿ ತೆಗೆದಾಳು ||
ತೆಗೆದು ಧಾರವನು ಉಡಿಯೊಳಗಿಟ್ಟಳು ದಿನದ ಪಡಿಗಳನು ಕೇಳಿದರೆ |
ದಿನದ ಪಡಿಗಳನು ಕೇಳಿದರೆ ಚಾರಕರು ರಾಗಿ ಪಡಿ ತಂದು ಕೊಡುವೋರು ||
ರಾಗಿ ಪಡಿ ತಂದು ಕೊಡುವೋದು ರಾಯ ತಾ ನೋಡಿದ ನನಗಲ್ಲದರಸಿ ನಿಮಗೆಲ್ಲಿ |
ನನಗಲ್ಲದರಸಿ ನಿಮಗೆಲ್ಲಿ ಎಂದೆನುತ ರಾಯ ಕೋಪದಲಿ ನುಡಿದಾನು ||
ತರಿಸಿದ ರಾಯ ತಾ ಅಕ್ಕಿ ಗೋದಿ ಬೆಲ್ಲ ತರಿಸಿ ತುಂಬಿಸೀ ದಾಸೀಗೆ |
ತರಿಸಿ ತುಂಬಿಸೀ ದಾಸಿಗೆ ಹೊರಿಸಿ ಮನಿತನಕಾ ಕಳಿಸೀದ ||
ಒಕ್ಕಲಗಿತ್ತಿಯು ಹೊತ್ತಳು ಹೆಡಗಿಯನ್ನು ಮಿತ್ರೆ ಸುಕಾಂತೆ ಮನೆಗಾಗಿ
ಬಂದಿನ್ನು ಇಳಿಸವ್ವ ಭತ್ತದ ಹೆಡಗಿಯನು ||
ಅಂದ ಮಾತಿಗಾಗಿ ನೊಂದಾಗ ಮನದಲ್ಲಿ ಮಂದಿಯ ಒಳಗೆ
ನಗೆಗೇಡು ಮಾಡುವುದು ದಾಸಿ ನಿನಗಿದು ತರವೇನೆ||
ಚಕ್ಕಂದವಲ್ಲವೇ ತಾಯೇ ನೀ ಕೇಳವ್ವ ಒಡೆಯರು ಕೊಟ್ಟಂಥ ಪಡಿಗಳನು |
ಒಡೆಯರು ಕೊಟ್ಟಂಥ ಪಡಿಗಳ ನೋಡೆಂದು ಅಕ್ಕಿ ಗೋದಿಯನೆ ತೆಗೆದಾಳು ||
ತೆಗೆದು ಧಾರವನು ಹರದಿಗೆ ಕೊಟ್ಟಳು ಮಿತ್ರೆ ಸುಕಾಂತೆ ಧಾರದ |
ಮಿತ್ರೆ ಸುಕಾಂತೆ ಧಾರದ ತೊಡಕನ್ನು ಬಲ್ಲ ಹಿರಿಯರಿಗೆ ಅರುಹಿದಳು ||
ಭಾದ್ರಪದ ಶುದ್ಧ ಅಷ್ಟಮಿಯ ದಿನದಲ್ಲಿ ಮುತ್ತೈದೆ ನನಗೆ
ದೊರಕ್ಯಾಳು ಇಂದಿನ್ನು ಸೌಭಾಗ್ಯಳೆಂದು ನುಡಿದಾಳು ||
ಅರಸಿನ ಮನೆಗಾಗಿ ಬಂದಳೆ ಮಹಾಲಕ್ಷ್ಮೀ ವೃದ್ಧ ಮುತ್ತೈದೆ ರೂಪವನೆ |
ವೃದ್ಧ ಮುತ್ತೈದೆ ರೂಪವನೆ ತಕ್ಕೊಂಡು ಶ್ರೀಕಾಂತೆಯ ಬಳಿಗೆ ನಡೆತಂದ್ಲು ||
ಮಾಸಿದ್ದು ಉಟ್ಟಿದ್ದು ಮೈಲಿಗೆ ತೊಟ್ಟಿದ್ದು | ಸೂಸುವ ಮಾರೀ ಸಿಂಬಳದ |
ಸೂಸುವ ಮಾರೀ ಸಿಂಬಳದ ಜೋರಿನ್ನು | ಹೇಸಿ ಹೋಗೆಂದು ನುಡಿದಳು ||
ಅಂದ ಮಾತಿಗಾಗಿಗೆ ಕೊಡುವಳೆ ಶಾಪವ ಹಂದಿಯ ಮಾರಿ ಮಂದಿಯ |
ಹಂದಿಯ ಮಾರಿ ಮಂದಿಯ ರೂಪವು ಇಂದು ನಿನಭಂಗ ಧೃಢವಾಗಲಿ ||
ನುಡಿದ ಮಾತಿಗಾಗಿ ಕೊಡುವಳೆ ಶಾಪವ ಮಿತ್ರೆ ಸುಕಾಂತೆ ಮಿಂದ |
ಮಿತ್ರೆ ಸುಕಾಂತೆ ಮಿಂದ ನೀರೊಳು ಅಂದು ನಿನಭಂಗ ಧೃಢವಾಗ್ಲಿ ||
ಹಿರಿಯ ಹೆಂಡತಿ ಮನೆಗೆ ಬಂದಳಾ ಮಹಲಕ್ಷ್ಮೀ ವೃದ್ಧ ಮುತ್ತೈದೆ ರೂಪವನೆ|
ವೃದ್ಧ ಮುತ್ತೈದೆ ರೂಪವನೆ ತಕ್ಕೊಂಡು ಸುಕಾಂತಿದ್ದ ಬಳಿಗೆ ನಡೆತಂದ್ಲು ||
ಹರಸಿ ಮುತ್ತೈದೆಗೆ ಮುದದಿಂದ ಎರೆದಳು ಹದಿನಾರು ಎಳೆಯ ಧಾರವನು |
ಹದಿನಾರು ಎಳೆಯ ಧಾರವನೆ ಗಂಟು ಹಾಕಿ ಮುದದಿಂದ ಆರತಿಯ ಬೆಳಗಿದಳು||
ಮರುದಿನ ಅಷ್ಟಮಿಯಲ್ಲಿ ಮೂಲ ನಕ್ಷತ್ರದಲ್ಲಿ ಒಡನೆ ಮಿಕ್ಕಂಥ ಅಷ್ಟಮಿಯ ಶೇಷವನು |
ಒಡನೆ ಮಿಕ್ಕಂಥ ಅಷ್ಟಮಿಯ ಶೇಷವನು ಒಡನೆ ಮಹಾಲಕ್ಷ್ಮೀ ಉಣುತಿದ್ಲು ||
ಭೋಗುಳ್ಳ ಅರಸುತನ ರಾಜ್ಯವನೆ ಕಳಕೊಂಡು ಪಾದಚಾರಿಯಾಗಿ ಪರಮ |
ಪಾದಚಾರಿಯಾಗಿ ಪರಮ ಕಷ್ಟದಿಂದ ಭೂಮಿಯಲಿ ಕೃತಘ್ನಗೆ ನೆರಳಿಲ್ಲ ||
ಭೂಮಂಡಲೇಶನಾದ ಗಂಡನ ಕಾಣದೆ ಬೆಂಡಾಗಿ ರಾಯ
ಬಳಲುತಿಪ್ಪುದು ಕಂಡು ತಂಗಿಗೆ ವಿಶಾಪ ಕೊಟ್ಟಳು ಅಣ್ಣಿಗೇರಿಯಲ್ಲಿ ಅಮೃತ||
ಭೂಮಿಯಲ್ಲಿ ಲಕ್ಷ್ಮೀದೇವಿಯ ಕಥೆಯ ಮಾಡಿದನು |
ಮಾಡಿದನು ತಿರುಮಲ ಲಕ್ಷಣವುಳ್ಳವರು ಕಿವಿಗೊಟ್ಟು ಕೇಳೆ ಹರಿಒಲಿವ ||
****
pankajanABage Sankisi SaraNeMbe | pankajOdBavage SaraNeMbe |
pankajOdBavage SaraNendu pELuve aMbikege karava mugivenu ||
hiriya henDati vaidu muLLu bEliyaliTTu siri vaidu koTTu SrIkAnta |
sirivaidukoTTu SrIkAnteMba arasiya maneyoLagirutidda arasu ||
horaTane rAya tA mRugada bETeyanADi kere illa BAvi modalilla |
kereyilla BAvi modalilladiddare biDuve nA prANagaLaneMda ||
hOguva dUtana bEgadali karedaru | karadalli dAra kaTTi |
karadalli dAra kaTTi kUgaNi kuruLiyali udaka koDuvOru ||
hindakke tirugi nI nODabEDa enutali | hindakke tirugi bisalige |
hindakke tirugi bisalige kUgaNi oDedu nadiyAgi haridItu ||
nadiya nIrane kuDidu karedanu dUtanna | karadalli nInu kaTTidda |
karadalli nInu kaTTidda dAravanu idEneMdu besagoMDa ||
nAga kannikeyaru lakShmI dhAravendu lakShaNavuLLa arasige |
lakShaNavuLLa arasige koDu endu koTTaru lakShmI varagaLanu ||
bETeyADi rAya baLali manige banda | bandu rANiya toDeya mEle |
bandu rANiya toDeyamEle malagalu dhAra idEnendu besagonDlu ||
kAnteya mEle sukAnteya tandIri karadalli nIvu kaTTidda |
karadalli nIvu kaTTidda dhArada mahimegaLenage tiLidItu ||
dRuShTisi kAnte tA siTTili haridaLu hittalAgidda paDavala |
hittalAgidda paDavala baLLiya handarada mEle esedALu ||
oNagidda baLLiyu cigitu PalavAyitu | adu kaMDu rAya manadali |
adu kanDu rAya manadalli klESa paDuttidda ||
dinada paDigaLigAgi bandaLA dAsiyu paDuvala baLLiya mElidda |
paDuvala baLLiya mElidda dhAravanu kanDu santOSha paDutidlu ||
kaiyalli muTTidare kaLLi endArendu kAlalli muTTi lakShmI dhAra |
kAlalli muTTi lakShmI dhAravendu marada koneyalli tegedALu ||
tegedu dhAravanu uDiyoLagiTTaLu dinada paDigaLanu kELidare |
dinada paDigaLanu kELidare cArakaru rAgi paDi tandu koDuvOru ||
rAgi paDi tandu koDuvOdu rAya tA nODida nanagalladarasi nimagelli |
nanagalladarasi nimagelli endenuta rAya kOpadali nuDidAnu ||
tarisida rAya tA akki gOdi bella tarisi tuMbisI dAsIge |
tarisi tuMbisI dAsige horisi manitanakA kaLisIda ||
okkalagittiyu hottaLu heDagiyannu mitre sukAnte manegAgi
bandinnu iLisavva Battada heDagiyanu ||
anda mAtigAgi nondAga manadalli mandiya oLage
nagegEDu mADuvudu dAsi ninagidu taravEne||
cakkandavallavE tAyE nI kELavva oDeyaru koTTantha paDigaLanu |
oDeyaru koTTantha paDigaLa nODendu akki gOdiyane tegedALu ||
tegedu dhAravanu haradige koTTaLu mitre sukAnte dhArada |
mitre sukAnte dhArada toDakannu balla hiriyarige aruhidaLu ||
BAdrapada Suddha aShTamiya dinadalli muttaide nanage
dorakyALu indinnu sauBAgyaLendu nuDidALu ||
arasina manegAgi bandaLe mahAlakShmI vRuddha muttaide rUpavane |
vRuddha muttaide rUpavane takkonDu SrIkAnteya baLige naDetandlu ||
mAsiddu uTTiddu mailige toTTiddu | sUsuva mArI siMbaLada |
sUsuva mArI siMbaLada jOrinnu | hEsi hOgeMdu nuDidaLu ||
anda mAtigAgige koDuvaLe SApava handiya mAri mandiya |
handiya mAri mandiya rUpavu indu ninaBanga dhRuDhavAgali ||
nuDida mAtigAgi koDuvaLe SApava mitre sukAnte minda |
mitre sukAnte minda nIroLu andu ninaBanga dhRuDhavAgli ||
hiriya henDati manege bandaLA mahalakShmI vRuddha muttaide rUpavane|
vRuddha muttaide rUpavane takkonDu sukAntidda baLige naDetaMdlu ||
harasi muttaidege mudadinda eredaLu hadinAru eLeya dhAravanu |
hadinAru eLeya dhAravane ganTu hAki mudadinda Aratiya beLagidaLu||
marudina aShTamiyalli mUla nakShatradalli oDane mikkantha aShTamiya SEShavanu |
oDane mikkantha aShTamiya SEShavanu oDane mahAlakShmI uNutidlu ||
BOguLLa arasutana rAjyavane kaLakobDu pAdacAriyAgi parama |
pAdacAriyAgi parama kaShTadinda BUmiyali kRutaGnage neraLilla ||
BUmaMDalESanAda ganDana kANade benDAgi rAya
baLalutippudu kanDu tangige viSApa koTTaLu aNNigEriyalli amRuta||
BUmiyalli lakShmIdEviya katheya mADidanu |
mADidanu tirumala lakShaNavuLLavaru kivigoTTu kELe hari^^oliva ||
****
No comments:
Post a Comment