traditional gowri pooje haadu
ಪೂಜೆ ಮಾಡೋಣ ಬನ್ನಿರೇ
ಶ್ರೀ ಗೌರಿಯ ಪೂಜೆ ಮಾಡೋಣ ಬನ್ನಿರೇ||ಪ||
ಪೂಜೆ ಮಾಡೋಣ ಬನ್ನಿ ಮೂರ್ಜಗ ಜನನಿಯಾ
ರಾಜರಾಜೇಶ್ವರಿ ಎನುತಾ ಶ್ರೀ ವರಗೌರಿಯ ||ಅ.ಪ||
ಊರು ಸಿಂಗಾರವಾಗಲಿ ಉತ್ತಮ ತಳಿರು ತೋರಣ ಕಟ್ಟಲಿ
ತಾಯಿ ಗೌರಿಯು ತಾ ಬರುವಂಥ ಸಮಯಕೆ ಕಾಯಿ ಒಡೆದು ಕದಲಾರತಿ ಎತ್ತಿರೇ||೧||
ಮಿಂದು ಮಡಿಯನ್ನುಟ್ಟು ಪೂಜಾದ್ರವ್ಯಗಳಿಂದ ವಿಪ್ರರ ಕರೆಯಿಸುತಾ
ಛಂದುಳ್ಳ ದೀಪದ ಸಾಲು ಬೆಳಕಿನಿಂದ ಇಂದುಮುಖಿ ಗೌರಿಯ ಇಂದು ಪೂಜಿಸುವೆ ನಾನು||೨||
ಹಸ್ತಪಾದವ ತೊಳೆದು ವಸ್ತ್ರದಲೊರಸಿ ಆಚಮನವ ಮಾಡಿಸಿ
ಕತ್ತರಿಸಿದಡಿಕೆ ಬಿಳಿಎಲೆ ಏಲಕ್ಕಿ ಕಸ್ತೂರಿ ಬೆರೆಸಿದ ಮುತ್ತಿನ ಸುಣ್ಣವಿಟ್ಟು||೩||
ಗಂಧ ಅಕ್ಷತೆ ಪುಷ್ಪವು ಗೆಜ್ಜೆಯವಸ್ತ್ರ ಛಂದಾದ ಅರಶಿನ ಕುಂಕುಮ
ಅಂದದ ಕರಿಮಣಿ ಬಿಚ್ಚೋಲೆ ಬಳೆಯನಿಟ್ಟು ಮಂದಾರ ಮಲ್ಲಿಗೆಯ ಮಾಲೆಯ ಮುಡಿಸುತಾ||೪||
ಮಂದಾರ ಸೇವಂತಿಗೆ ಜಾಜಿ ಪುಷ್ಪಗಳ ತಂದು ಕೇದಿಗೆಯನು ಮುಡಿಸುತಾ
ಛಂದುಳ್ಳ ಮರುಗ ದವನ ಪುನ್ನಾಗವನು ಅಂಬೆ ಸಮರ್ಪಿಸುವೆ ಇಂದು ಸ್ವೀಕರಿಸಮ್ಮಾ||೫||
ಸಾಲು ದೀವಿಗೆ ಹಚ್ಚುತಾ ಪುಷ್ಪಗಳಿಂದಲಿ ಶ್ರೀಗೌರಿಯ ಪೂಜಿಸಿ
ಪಾಲುಮಾಡಿದ ಕಾಯಿ ಫಲ ಗೌರಿಗರ್ಪಿಸಿ ದುಂಡುಮಲ್ಲಿಗೆ ಮಾಲೆ ದಂಡೆಯ ಮುಡಿಸುತಾ||೬||
ಹೋಳಿಗೆ ಹೊಸಬೆಣ್ಣೆಯು ಕಾಸಿದ ತುಪ್ಪ ಸಾರು ಸಾಸಿವೆಗಾಯ್ಗಳು
ಅರ್ತಿಯಿಂದ ಅರ್ಪಿಸುವೆ ವರಗೌರಿ ದಯದಿಂದ ಆರೋಗಣೆ ಮಾಡುತಲಿ ಎನ್ನ ಹರಸು ನಿತ್ಯ||೭||
ತಾಂಬೂಲವ ಕೊಡುವೆನೇ ಅಂಬುಜಪಾಣಿಯೇ ಮಂಗಳದಾಯಕಿಯೇ
ಹಿಂಗದ ಸೌಭಾಗ್ಯವನು ಕೊಟ್ಟು ಮಗಳೆಂದು ಮುಂದೆ ಕರೆದೆನ್ನ ಕರಪಿಡಿದು ಸಲುಹಬೇಕು||೮||
pUje mADONa bannirE
SrI gauriya pUje mADONa bannirE||pa||
pUje mADONa banni mUrjaga jananiyA
rAjarAjESvari enutA SrI varagauriya ||a.pa||
Uru singAravAgali uttama taLiru tOraNa kaTTali
tAyi gauriyu tA baruvantha samayake kAyi oDedu kadalArati ettirE||1||
mindu maDiyannuTTu pUjAdravyagaLinda viprara kareyisutA
CanduLLa dIpada sAlu beLakininda indumuKi gauriya indu pUjisuve nAnu||2||
hastapAdava toLedu vastradalorasi Acamanava mADisi
kattarisidaDike biLi^^ele Elakki kastUri beresida muttina suNNaviTTu||3||
gandha akShate puShpavu gejjeyavastra CandAda araSina kuMkuma
andada karimaNi biccOle baLeyaniTTu mandAra malligeya mAleya muDisutA||4||
mandAra sEvantige jAji puShpagaLa tandu kEdigeyanu muDisutA
CanduLLa maruga davana punnAgavanu aMbe samarpisuve indu svIkarisammA||5||
sAlu dIvige haccutA puShpagaLindali SrIgauriya pUjisi
pAlumADida kAyi Pala gaurigarpisi dunDumallige mAle danDeya muDisutA||6||
hOLige hosabeNNeyu kAsida tuppa sAru sAsivegAygaLu
artiyinda arpisuve varagauri dayadinda ArOgaNe mADutali enna harasu nitya||7||
tAMbUlava koDuvenE aMbujapANiyE mangaLadAyakiyE
hingada sauBAgyavanu koTTu magaLendu munde karedenna karapiDidu saluhabEku||8||
***
No comments:
Post a Comment