sumateendra teertha rayara mutt yati stutih
ರಚನೆ : ಶ್ರೀ ಪ್ರಸನ್ನ ವೆಂಕಟದಾಸರು
ಸಲಹು ಸುಖತೀರ್ಥ ಮತ
ಜಲಧಿ ಚಂದ್ರ ।
ನಳನೀಶಾರ್ಚಕ ಇಂದ್ರ
ಇಳೆಗೆ ಸುಮತೀಂದ್ರ ಸಲಹು ।। ಪಲ್ಲವಿ ।।
ಅತುಳ ತತ್ತ್ವಾರ್ಥ ಗೋಪ್ರ-
ತತಿ ಸಂಪೂರ್ಣ । ದು ।
ರ್ಮತಿ ಮಾಯಿಮತ
ತಮ ವಿಷದಗುಣ ।
ಸತತ ವಿದ್ವತ್ ಕುಮುದ
ಪ್ರತಿಪಾಲಕನೆ । ಕರುಣಾ ।
ಮೃತ ಭರಿತ ವದನ ಖ-
ಚಿತ ಯಶೋಭರಣ ।। ಚರಣ ।।
ಸುಜ್ಞಾನ ಸುರಭಿಯುತ
ಅಜ್ಞ ಜಂಭಾರಿ ಛಳಿ । ವೈ ।
ರಾಗ್ಯ ಭಕುತ್ಯಾದಿ
ವಸು ಭಾಗ್ಯಶಾಲಿ ।
ಯಜ್ಞೇನ ಶುಕನ ಮತ-
ವಜ್ಞನ ದಂಭೋಳಿ ।
ವಾಗ್ರತ್ನಮಾಲಿ ಮುನಿವರ್ಗ
ಶುಭ ಮೌಳಿ ।। ಚರಣ ।।
ಧೀರ ಯೋಗೀ೦ದ್ರಕರ
ವಾರಿಜೋದ್ಭವ ಯೋಗಿ ।
ಸೂರೀ೦ದ್ರ ಭವಕಲ್ಪ-
ಭೂರುಹ ಸುತ್ಯಾಗಿ ।
ಧಾರುಣಿಗೆ ಪ್ರಸನ್ವೆಂಕಟ
ಮೂಲರಾಮ ಪ್ರಿಯವಾಗಿ ।
ಈರ ಮತ ಸ್ಥಾಪಿಸಿದೆ
ಮೀರಿ ಚೆನ್ನಾಗಿ ।। ಚರಣ ।।
****
No comments:
Post a Comment