Tuesday, 13 April 2021

ಹರಿದಾಸ ಕುಲತಿಲಕರ ಶ್ರೀಪಾದವ ಭಜಿಸುವೆ ankita karunesha vittala

ಹರಿದಾಸ ಕುಲತಿಲಕರ ಶ್ರೀಪಾದವ ಭಜಿಸುವೆ |

ಶ್ರೀರಂಗನಾಥ ಪಾದಾಂಬುಜ ಭೃಂಗ ಶ್ರೀಪಾದರಾಜರ ll ಪ ll


ಸ್ವರ್ಣವರ್ಣತೀರ್ಥ ಕರಕಮಲ ಸಂಜಾತರ|

ಪೂರ್ಣಪ್ರಜ್ಞ ಮತಾಂಬುಧಿ 

ಪೂರ್ಣಚಂದ್ರರ ll 1 ll


ಧಾರುಣಿಯೊಳು ವರಧ್ರುವನವತಾರ |

ಹರಿತತ್ವ ಸಾರಿದ ಪರಮ ಭಾಗವತರ ll 2 ll


ವಾದದಲಿ ಶೂರರ ವಾಗ್ವಜ್ರ ವಿಖ್ಯಾತರ |

ಮುದದಿಂದ ಮಧ್ವನಾಮ ರಚಿಸಿದ ಮುನಿವರ್ಯರ ll 3 ll


ಕನ್ನಡದಲಿ ನವವಿಧಭಕ್ತಿಯ ಹೊನ್ನುಡಿಕಾರರ |

ಉನ್ನತವಾದ ಪದ ಪದ್ಯ ಸುಳಾದ್ಯುಗಾಭೋಗಗಳ

ಕವಿಕುಲವರ್ಯರ ll 4 ll


ದಂಡಕವನು ಬರೆದು ನರಸಿಂಹಗರ್ಪಿಸಿದ ಯತಿವರೇಣ್ಯರ |

ಕೊಂಡಾಡಿ ಕರುಣೇಶವಿಠಲನಾರಾಧಿಸಿದ ಸಂತಕುಲವರ್ಯರ ll 5 ll

***


No comments:

Post a Comment