ರಾಗ : ಅಸಾವೇರಿ ತಾಳ : ಏಕ
ಅರಿಯಾರೋ ಅಂದಿಗ೦ದಿಗನ್ಯ । ಈ ।
ಧರೆಯೊಳಿರುವ ಮಹಿಮೆ ಘನ್ನ ।। ಪಲ್ಲವಿ ।।
ಮರುತಾವೇಶಯುತ ಉರಗಾಂಶರನ್ನ ।। ಅ ಪ ।।
ಪ್ರಹ್ಲಾದ ಬಾಹ್ಲೀಕ ವ್ಯಾಸನು ।
ಇಲ್ಲೀಗ ರಾಘವೇಂದ್ರ ।
ಉಲ್ಲಾಸ ಬಡುವನು ।। ಚರಣ ।।
ಇನ್ನೂರ ನಾಲ್ವತ್ತು ।
ಮುನ್ನೀಗ ಪೋದದ್ದು ।
ನನ್ನೂರ ಅರವತ್ತು ।
ಇನ್ನು ಉಳಿದಿಹದು ।। ಚರಣ ।।
ಎಲ್ಲೀ ನೋಡಲಿವ- ।
ರಿಲ್ಲದ ಸ್ಥಳವಿಲ್ಲ ।
ಬಲ್ಲಾ ಭಕುತಗೆ ।
ಅಲ್ಲಲ್ಲೇ ತೋರುವದು ।। ಚರಣ ।।
ಖುಲ್ಲ ನರರಿಗೆ ।
ಎಲ್ಲೆಲ್ಲಿ ಇಲ್ಲವೋ ।
ಸಲ್ಲೋದು ನಿಶ್ಚಯ ।
ಸುಳ್ಳಲ್ಲ ಈ ಮಾತು ।। ಚರಣ ।।
ದುಷ್ಟ ಜನರಿಗೆ ।
ಇಷ್ಟಾರ್ಥ ಕೊಡವೊನೊಮ್ಮೆ ।
ಶಿಷ್ಟ ಜನರಿಗ- ।
ಭೀಷ್ಟವ ಕೊಡುವುದು ।। ಚರಣ ।।
ಇವರ ಪೂಜಿಪ ಜನ ।
ದಿವಿಜರು ನಿಶ್ಚಯ ।
ಭುವನದೊಳಗೆ ಇನ್ನು ।
ಇವರಿಗೆ ಸರಿಯುಂಟೆ ।। ಚರಣ ।।
ಇವರನು ಒಲಿಸಲು ।
ಪವನನು ಒಲಿವನು ।
ದಿವಿಜಾರುತ್ತಮ । ಮಾ ।
ಧವ ತಾನೇ ಒಲಿವಾ ।। ಚರಣ ।।
ಅಮಿತ ಮಹಿಮರೆಂದು ।
ಪ್ರಮಿತರು ಪೇಳೋರು ।
ಸುಮತಿಗಳ ಮನಕೆ ।
ಗಮಿಸಿ ತಿಳಿಸುವುದು ।। ಚರಣ ।।
ದಾತಾ ಗುರು ಜಗ ।
ನ್ನಾಥ ವಿಠಲ ಬಹು ।
ಪ್ರೀತಿಯಿಂದಲಿ ಇವರ ।
ಖ್ಯಾತಿಯ ಮಾಡೋದು ।। ಚರಣ ।।
**
ರಾಗ : ಅಸಾವೇರಿ ತಾಳ : ಏಕ
ಅರಿಯಾರೋ ಅಂದಿಗ೦ದಿಗನ್ಯ । ಈ ।
ಧರೆಯೊಳಿರುವ ಮಹಿಮೆ ಘನ್ನ ।। ಪಲ್ಲವಿ ।।
ಮರುತಾವೇಶಯುತ ಉರಗಾಂಶರನ್ನ ।। ಅ ಪ ।।
ಪ್ರಹ್ಲಾದ ಬಾಹ್ಲೀಕ ವ್ಯಾಸನು ।
ಇಲ್ಲೀಗ ರಾಘವೇಂದ್ರ ।
ಉಲ್ಲಾಸ ಬಡುವನು ।। ಚರಣ ।।
ಇನ್ನೂರ ನಾಲ್ವತ್ತು ।
ಮುನ್ನೀಗ ಪೋದದ್ದು ।
ನನ್ನೂರ ಅರವತ್ತು ।
ಇನ್ನು ಉಳಿದಿಹದು ।। ಚರಣ ।।
ಎಲ್ಲೀ ನೋಡಲಿವ- ।
ರಿಲ್ಲದ ಸ್ಥಳವಿಲ್ಲ ।
ಬಲ್ಲಾ ಭಕುತಗೆ ।
ಅಲ್ಲಲ್ಲೇ ತೋರುವದು ।। ಚರಣ ।।
ಖುಲ್ಲ ನರರಿಗೆ ।
ಎಲ್ಲೆಲ್ಲಿ ಇಲ್ಲವೋ ।
ಸಲ್ಲೋದು ನಿಶ್ಚಯ ।
ಸುಳ್ಳಲ್ಲ ಈ ಮಾತು ।। ಚರಣ ।।
ದುಷ್ಟ ಜನರಿಗೆ ।
ಇಷ್ಟಾರ್ಥ ಕೊಡವೊನೊಮ್ಮೆ ।
ಶಿಷ್ಟ ಜನರಿಗ- ।
ಭೀಷ್ಟವ ಕೊಡುವುದು ।। ಚರಣ ।।
ಇವರ ಪೂಜಿಪ ಜನ ।
ದಿವಿಜರು ನಿಶ್ಚಯ ।
ಭುವನದೊಳಗೆ ಇನ್ನು ।
ಇವರಿಗೆ ಸರಿಯುಂಟೆ ।। ಚರಣ ।।
ಇವರನು ಒಲಿಸಲು ।
ಪವನನು ಒಲಿವನು ।
ದಿವಿಜಾರುತ್ತಮ । ಮಾ ।
ಧವ ತಾನೇ ಒಲಿವಾ ।। ಚರಣ ।।
ಅಮಿತ ಮಹಿಮರೆಂದು ।
ಪ್ರಮಿತರು ಪೇಳೋರು ।
ಸುಮತಿಗಳ ಮನಕೆ ।
ಗಮಿಸಿ ತಿಳಿಸುವುದು ।। ಚರಣ ।।
ದಾತಾ ಗುರು ಜಗ ।
ನ್ನಾಥ ವಿಠಲ ಬಹು ।
ಪ್ರೀತಿಯಿಂದಲಿ ಇವರ ।
ಖ್ಯಾತಿಯ ಮಾಡೋದು ।। ಚರಣ ।।
********
No comments:
Post a Comment