Audio by Vidwan Sumukh Moudgalya
ಶ್ರೀ ಗುರುಗೋಪಾಲದಾಸಾರ್ಯ ವಿರಚಿತ
ಶ್ರೀ ರಾಮದೇವರ ಆಪಾದಮಸ್ತಕಾ ವರ್ಣನಾ ಸ್ತೋತ್ರ
( ಐತಿಹಾಸಿಕ )
ರಾಗ : ಅಭೇರಿ ತಿಶ್ರನಡೆ
ರಾಮನ ನೋಡಿರೋ ರಘುಕುಲ
ಲಲಾಮನ ಪಾಡಿರೋ
ಶ್ರೀ ಮನೋಹರ ಅಜ ವ್ಯೋಮಾಳಕ ಸುರ
ಸ್ತೋಮನುತ ಗುಣಭೂಮ ॥ಪ॥
ಧರಣಿ ಸುತೀಶನ ಚರಣ ತಳಾರುಣ ಹೊಳಲೊ
ಮಾವಿನ ತಳಲೊ
ಸುರುಚಿರ ಹಲಕುಲಿಶಾಬ್ಜ ಪತಾಕದ ಗ್ಯರಿಯೋ
ಶುಭ ನಿಧಿ ಥ್ಯರಿಯೋ
ಸುರತಟನಿಯ ಜನಕನ ನಖ ಸಾಲ್ ಸಾಲ್ಬೆರಳೊ
ವನರುಹದರಳೊ
ಪೆರಡು ಯರಡು ಪೊಂಬ್ಯರಡು ಹಿಂಮಡ ಜಂಘೆ ಜಾನೊ
ದರ್ಪಣವೇನೋ ॥೧॥
ಶ್ರೀರಮಣನ ಶ್ರಿಂಗಾರ ಸುಪೆರೂರುಗಳೊ
ಕದಳಿಮರಗಳೊ
ಶೌರಿ ಜಘನ ಸುನಿತಂಬದಿ ಪೊಳೆವಾಂಬರವೊ
ಅರುಣಾಂಬರವೋ
ಚಾರುಮೇಖಳ ಕಂಚಿಗಳೊಪ್ಪುವ ಕಟಿ ಸ್ಥಳವೋ
ಸಿಂಹದಹೊಳಲೊ
ಮೂರುವಳಿ ವುದರದ ನಾಭಿ ಸುರೋಮಾವಳಿಯೊ
ತ್ರಿವೇಣಿ ಸುಳಿಯೋ ॥೨॥
ಕರುಣ ನಿಧಿಯ ವಕ್ಷ ಸ್ಥಳ ವಜ್ರದ ಖಣಿಯೋ
ರಮೆಯರ ಮನಿಯೋ
ಪರಿಪರಿಹಾರ ತ್ರಿರೇಖಾಂಕಿತ ಕಂಧರ
ಸುಂದರ ದರವೊ
ಅರಿಭಂಜನನ್ನುತ ಭುಜ ಬಾಹು ದಂಡಗಳೊ
ಕರಿ ಶುಂಡಗಳೋ
ಕರತಳಾಂಗುಲಿ ನಖ ವುರದಲಿ ಕೌಸ್ತುಭ ಮಣಿಯೋ
ವುದಿತ ದ್ಯುಮಣಿಯೊ ॥೩॥
ಚಂದಿರ ಬಿಂಬ ಸುಮುಖ ಚುಬಕಾಧರ ದೀಧಿತಿಯೊ
ಪವಳದ ಲತೆಯೊ
ಮಂದಸ್ಮಿತ ಮಾಯಾವಿಯ ವದನ ಪಲ್ಲುಗಳೋ
ಮಲ್ಲಿಗೆ ಮುಗಳೊ
ಸೌಂದರ್ಯದರಸ ನಿಮ್ಮ ಸುನಾಸದ ಕೊನಿಯೊ
ಸಂಪಿಗಿತ್ಯನಿಯೊ
ಇಂದಿರೇಶನ ಸುಕೃಪಾವಲೋಕನ ಯನಗಳೊ
ಪಂಕಜ ಯುಗಳೊ ॥೪॥
ಖಗ ರೂಡನ ಶುಭಯುಗ ಕಾಪೋಲ್ಗಳ ಸಿರಿಯೋ
ಕೂರ್ಮದ ಮರಿಯೊ
ನಗಧರನನುಪಮ ಕರ್ಣ ಕುಂಡಲ ದಿಧಿತಿಯೊ
ಇನ ಶಶಿ ತತಿಯೊ
ಜಗಮೋಹನ ಜನಕ ಭ್ರೂವಿಲಾಸಗಳೊ
ನಿಂಬದ ಯಸಳೊ
ಮೃಗಮ ದತಿಗರದಿಂದೊಪ್ಪುವ ಶೋಭನ ಫಣಿಯೊ
ಅರ ಶಶಿಗ್ಯಣಿಯೋ ॥೫॥
ಕುಂಡಲಿ ಶಯನನ ಕುಂತಲಾಳಕಗಳ ವಲವೋ
ಭೃಂಗದ ನಿಲವೊ
ಪಂಡಿತ ಪ್ರಿಯನ ಮಂಡಿಯಲೊಪ್ಪೊ ಮಕುಟವೊ
ರತ್ನಾ ಕಟಕವೊ
ಚಂಡವಿಕ್ರಮ ಶರತೂಣಿ ಸಾರಂಗ ಪಾಣಿ
ಗುಣಗಣ ಶ್ರೇಣಿ
ಚಂಡೀಶನ ಕೋದಂಡ ಖಂಡ ಖಂಡ್ರಿಸಿದ
ಖಳರ ದಂಡಿಸಿದಾ ॥೬॥
ಗುರು ಮುಖ ವಿಘ್ನಾ ಚರಿಸಿದ ಖಳರ ಶಿಕ್ಷಿಸಿದಾ
ಕ್ರತು ರಕ್ಷಿಸಿದಾ
ಗುರುವರದೇಂದ್ರರ ಕರಕಮಲಾರ್ಚಿತ ಚರಣಾ
ಮಾರುತಿ ಶರಣಾ
ಗುರುಕರುಣದಿ ತನ್ನನು ಭಜಿಸಲು ಜಯ ಕೊಡುವಾ
ರಿಪುಗಳ ಬಡಿವಾ
ಗುರುಗೋಪಾಲ ವಿಟ್ಠಲ ರಾಮ ನಂಮನು ಕಾವ
ಅತಿಮುದವೀವ ॥೭॥
*******
No comments:
Post a Comment