ಶ್ರೀಪಾದರಾಯರ ಕೃತಿ
ರಾಗ : ಚಾರುಕೇಶಿ ತಾಳ : ಖಂಡಛಾಪು
ಕಂಡೆನೋ ನಿನ್ನ ಸಕಲ ಸುರಕುಲ ಸಾರ್ವಭೌಮ
ಪಾಂಡವಪ್ರೀಯ ಕಾಯೋ ಪಶ್ಚಿಮ ರಂಗಧಾಮ ॥ಪ॥
ಸಕಲ ನಿಗಮ ಸುವೇದ್ದ್ಯಾ ಸಚ್ಚಿದಾನಂದ ರೂಪ
ನಿಖಿಳ ದಾನವ ಖಂಡನ ಸುಪ್ರತಾಪಾ
ಅಕಳಂಕಮಲದೀಪ್ಯ ದಿನಕರವಂಶದೀಪಾ
ಭಕುತಜನ ಹೃದಯಾಂಧಕಾರ ಹರಣ ದಿನಪಾ ॥೧॥
ಯೋಗಿಜನ ಹೃತ್ಪದ್ಮ ಮಂದಿರ ಇಂದಿರೇಶಾ
ನಾಗಶಾಯನ ನಿರಂಜನ ಅಮಿತಗುಣಕೋಶಾ
ಯಾಗರಕ್ಷಕ ಯಜ್ಞಪತ್ನಿ ಹೃದ್ಯಾಧೀಶಾ
ಭೋಗಿ ಭೂಷಣ ದಿವ್ಯಮಂಗಳಧಾಮ ಘೋಷಾ ॥೨॥
ನಿತ್ಯ ನಿರುಪಮ ನಿರತಿಶಯ ಸುಖ ದೋಷದೂರಾ
ಸತ್ಯ ಸದಮಲ ಚರಿತ ಮಂಗಳ ದಾನಶೂರಾ
ಭೃತ್ಯವತ್ಸಲ ಭುವನ ರಕ್ಷಕ ಸದ್ವಿಹಾರ
ಮುಕ್ತಿದಾಯಕ ಶ್ರೀ ರಂಗವಿಟ್ಠಲ ಖಳಸಂಹಾರ ॥೩॥
******
No comments:
Post a Comment