Monday, 29 March 2021

ಜಯ ಜಯ ವೈಷ್ಣವ ಪಯೋನಿಧಿ ಚಂದ್ರಗೆ ankita prasanna


ಜಯ ಜಯ ವೈಷ್ಣವ ಪಯನಿಧಿ ಚಂದ್ರಗೆ

ಜಯ ಜಯ ವ್ಯಾಸಯತೀಂದ್ರರಿಗೆ ||ಪ||


ಜಯ ಜಯ ವರ ಕರ್ಣಾಟಕ ಪತಿಗೆ

ಜಯ ಸಿಂಹಾಸನವೇರಿದಗೆ ||ಅ.ಪ||


ನಾಕು ಶಾಸ್ತ್ರಗಳ ಪಾರಂಗತರಿಗೆ

ಕಾಕುಮತಗಳನು ತುಳಿದವಗೆ

ಆ ಕಮಲಾಪತಿ ಭಕುತವರೇಣ್ಯಗೆ

ಶ್ರೀಕರ ಚಂದ್ರಿಕಾಚಾರ್ಯರಿಗೆ ||1||


ಹನುಮನ ಭಾಷ್ಯವ ಅಣಿಮಾಡಿದಗೆ

ಹನುಮಗೆ ಭವನಗಳನು ಕಟ್ಟಿದಗೆ

ಹನುಮನ ಯಂತ್ರದಿ ಬಿಗಿದಪ್ಪಿದಗೆ

ಮುನಿತ್ರಯದಲಿ ಸೇರಿದ ದೊರೆಗೆ ||2||


ಮಾಯಾವಾದಗಳನು ಗೆಲಿದವಗೆ

ಸ್ವೀಯಮತವ ಸ್ಥಾಪಿಸಿದವಗೆ

ನ್ಯಾಯಾಮೃತಧಾರೆಯ ಅಭಿಷೇಕದಿ

ಆ ಯದುಪತಿಯನು ಕುಣಿಸಿದಗೆ ||3||


ಚಕ್ರಧರನ ಸುಳುಗಳ ತಿಳಿದವಗೆ

ಮಿಕ್ಕಮತಗಳನು ಅಳಿದವಗೆ

ವಕ್ರಯುಕುತಿಗಳನು ತುಕ್ಕುಡಗೈಯ್ಯವ

ತರ್ಕ ತಾಂಡವದಿ ನಲಿದವಗೆ ||4||


ಕೃಷ್ಣದೇವರಾಯನ ಕುಲಪತಿಗೆ

ಕಷ್ಟದ ಕುಹಯೋಗವ ಕೊಂದವಗೆ

ಶಿಷ್ಟಜನಗಳಿಗೆ ಇಷ್ಟಾರ್ಥಗಳನು

ವೃಷ್ಟಿಯಗೈವ ಪ್ರಸನ್ನರಿಗೆ ||5||

***

jaya jaya vaiShNava payanidhi caMdrage

jaya jaya vyAsayatIndrarige ||pa||


jaya jaya vara karNATaka patige

jaya siMhAsanavEridage ||a.pa||


nAku SAstragaLa pArangatarige

kAkumatagaLanu tuLidavage

A kamalApati BakutavarENyage

SrIkara candrikAcAryarige ||1||


hanumana BAShyava aNimADidage

hanumage BavanagaLanu kaTTidage

hanumana yantradi bigidappidage

munitrayadali sErida dorege ||2||


mAyAvAdagaLanu gelidavage

svIyamatava sthApisidavage

nyAyAmRutadhAreya aBiShEkadi

A yadupatiyanu kuNisidage ||3||


cakradharana suLugaLa tiLidavage

mikkamatagaLanu aLidavage

vakrayukutigaLanu tukkuDagaiyyava

tarka tAnDavadi nalidavage ||4||


kRuShNadEvarAyana kulapatige

kaShTada kuhayOgava kondavage

SiShTajanagaLige iShTArthagaLanu

vRuShTiyagaiva prasannarige ||5||

***


 By Prasanna teertharu

ಜಯ ಜಯ ವೈಷ್ಣವ ಪಯೋನಿಧಿ ಚಂದ್ರಗೆ Jaya jaya vaishnava payonidhi chandrage 


No comments:

Post a Comment