Monday, 29 March 2021

ಎನ್ನ ಪಾಲಿಸೋ ಗುರು ವಿಷ್ಣುತೀರ್ಥ ankita others vishnu teertha stutih

 ಎನ್ನ ಪಾಲಿಸೋ ಗುರು ವಿಷ್ಣುತೀರ್ಥ    

ಘನ್ನ ಮಹಿಮ ಜಯತೀರ್ಥ ಪ್ರೀತಿಪಾತ್ರ


ಸಿದ್ಧಪುರಿಯಲಿ ಜನಿಸಿ ಜಯತೀರ್ಥನೆನಿಸಿ ರಾಯರ ಕಾರುಣ್ಯದಿ ಗುರುವನೆ ಪಡೆದೆ | ಬಿಂಬ ಪೂಜೆಯ ಮಾಡೆ ಹರಿಯೊಲಿದು ಗುರುಸುತನ ಪೀಡೆಕಳೆದೆ ||೧||


ಭಾರತೀಶನ ತೋರಿದೆ ಶಿಷ್ಯರಿಗೆ ನಂದಿವಾಹನನ ತೋರಿಸಿದೆಯೋ ನೀನವರಿಗೆ | ಕಲಿರೂಪವ ನೋಡಬಯಸಲವರಿಗೆ ಕಲಿಯ ಸ್ವರೂಪವ ತೋರಿಸಿದೆ  ||೨||


ಸುಧೆಯ ಸ್ವಾದವ ನೂರೆಂಟು ಬಾರಿ ಭಾಗವತರಿಗುಣಿಸಿದೆ ಮೋದಪುರೀಶ   | ಸತ್ಯವರ ಕುವರನೆನಿಸಿ ವರದ ವಿಷ್ಣುತೀರ್ಥನೆಂದೆನಿಸಿದೆಯೋ ಲೋಕದಿ ||೩||


ಚತುರಾಶ್ರಮಗಳ ಪಾಲಿಸಿದೆ ಚತುರ್ವಿಧ ಪುರುಷಾರ್ಥಗಳ ಕರುಣಿಸುವೆಯೋ | ಕುಶನದಿಯ ತೀರದಿ ನೆಲೆಸಿ  ಚಿಂತಿಪರ ಚಿಂತಾಮಣಿಯೆಂದೆನಿದೆಯೊ ಗುರುವೆ||೪||


ಸಾರೋದ್ಧಾರಗಳ ಜಗಕೆ ನೀನಿತ್ತೆ ಆಧ್ಯಾತ್ಮ ಸಾಧಕರಿಗೆ ರಸರಂಜನಿಯನಿತ್ತೆ | ಮುದ್ದು ಶ್ರೀ ರಾಮನ  ಕಾರುಣ್ಯದಿ  ಅವಧೂತ ಶಿರೋಮಣಿ ಎಂದೆನಿಸಿ ಬದರೀಶನ ಧ್ಯಾನದೊಳಿಪ್ಪೆ ||೫||

******


ಮಾದನೂರ ವಿಷ್ಣುತೀರ್ಥ ಗುರುಭ್ಯೋ ನಮ:


ಪುತ್ರರತ್ನಗಳ ರಕ್ಷಿಸಿದೆ (ಬ್ರಹ್ಮಚರ್ಯ ಮತ್ತು ಗ್ರಹಸ್ಥಾಶ್ರಮ) 

ಅಸಿಪತ್ರ ವೃತವನಾಚರಿಸಿದೆ (ವಾನಪ್ರಸ್ಥಾಶ್ರಮ) 

ಸತ್ಪಾತ್ರರಿಗೆ ಪತ್ರಗಳನೆ ಬರೆದು (ಸಂನ್ಯಾಸಾಶ್ರಮ) 

ತಾಪತ್ರಯಗಳೆದುರಿಸುವ ದಾರಿ ತೋರಿದೆ

ಬದರೀಶ ಕೃಪಾಪಾತ್ರ ವಿಷ್ಣುತೀರ್ಥರೆ 

ಮುದ್ದು ಶ್ರೀ ರಾಮನ ಕೃಪೆಗೆ ಪಾತ್ರನೆನಿಸೆನ್ನ ||

******



No comments:

Post a Comment