Saturday, 20 February 2021

ಏನು ಹೇಳಲಿ ಗೋಪಿ ನಿನ್ನ ಮಗನ purandara vittala ENU HELALI GOPI NINNA MAGANA


 



ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ ॥ ಪ ॥
ಮಾನ ತಪ್ಪಿ ಬಂದ ಮನೆಯೊಳಗೆ ಗೋಪಿ ॥ ಅ ಪ ॥

ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ ।
ಅಡಗಿದ್ದನೆ ದೊಡ್ಡ ಕೊಡದೊಳಗೆ ॥
ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ ।
ಬಡವರ ಮಗನೇನೆ ಹೊಡೆಯಲಿಕ್ಕೆ ಗೋಪಿ ॥ 1 ॥

ಅಳಿಯನ ವೇಷದಿ ಮಗಳ ಕರೆಯ ಬಂದ ।
ಕಲಹ ಮಾಡಿ ತಾ ಕಳಿಸೆಂದ ॥
ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ ।
ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ ॥ 2 ॥

ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ ।
ಪುಟ್ಟಿಸಬೇಡಿರೆ ಅನ್ಯಾಯವ ॥
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ ।
ದೃಷ್ಟಿಸಿ ನೋಡಿರೆ ತೊಟ್ಟಿಲಿನೊಳಗೆ ॥ 3 ॥ 
***
 ರಾಗ ಆನಂದಭೈರವಿ  ಆದಿತಾಳ  (raga, tala may differ in audio)

No comments:

Post a Comment