Sunday 5 December 2021

ಸಿಂಹವಾಹನನಾಗಿ ನಿಂತಳೆ ಪಾರ್ವತಿಯು ankita madhwesha krishna SIMHAVAAHANANAAGI NINTALE PAARVATIYU



 ಬಾದಾಮಿಯ ಬನಶಂಕರಿ ದೇವಿ


ಸಿಂಹವಾಹನನಾಗಿ  ನಿಂತಳೆ ಪಾರ್ವತಿಯು

 ಬಾದಾಮಿ ಕ್ಷೇತ್ರದಿ  ಬನಶಂಕರಿಯಾಗಿ||ಪಲ್ಲ||


 ಬಾಗಲಕೋಟೆಯ ಬಳಿ ಬಾದಾಮಿ  ಕ್ಷೇತ್ರದಿ 

 ನೆಲಸಿದ ಳು ತಾನು ಬನಶಂಕರಿ  ಆಗಿ

 ಮಳೆ ಬರದೆ ಬೆಳೆ ಇರದೆ ಕ್ಷಾಮ ಬಂದಿರಲು

ಬೇಡ ಬಂದರು ಪುರದ ಜನರು||೧||


ಯಜ್ಞ ಯಾಗಾದಿಗಳು ನಿಂತು ಹೋಗಿರಲು

ಬದುಕು ಕಷ್ಟವಾಗಿ ಜನ ಬಳಲುತಲಿರಲು

ಜಲನೀಡಿ ಕಾಪಾಡೆಂದು   ದೇವಿಯ ಬೇಡಲು

ಪ್ರಸನ್ನಳದ ದೇವಿ ಮಳೆಯನ ಸುರಿಸೆ||೨||


 ಭೂದೇವಿಗೆ ನೀರಿನ ದಾಹ ತೀರಿಸೆ

 ತನುವಿನ ಶಾಖದಿ ತರಕಾರಿ ಸೃಷ್ಟಿಸಿ

ಶಾಕಾಂಬರಿಯೆಂದು ಪ್ರಸಿಧ್ಧ ಹೆಸರು ಪೊಂದಿ

ವಿಜೃಂಭಿಸಿದಳು ಬಾದಿಮಿಯಲ್ಲಿ||೩||


 ಹರಿದ್ರ ತೀರ್ಥವು, ತೈಲತೀರ್ಥವು

ಪದ್ಮತೀರ್ಥ ಮತ್ತು ಕ್ಷಮತೀರ್ಥ ವೆಂದು

ಅನೇಕ ತೀರ್ಥಗಳು ಸೃಷ್ಟಿಯಾಗಿ

ಹಚ್ಚ ಹಸುರಿಂದ ಕಂಗೊಳಿಸದವು||೪||


 ಬನ ಶಂಕರಿ ಜಾತ್ರೆ ಪುಷ್ಯ ಮಾಸದ ಪೌರ್ಣಮಿ 

ಅದ್ದೂರಿಯಿಂದ ಜರುಗುವುದು

 108 ಬಗೆ ತರಕಾರಿಗಳ ಖಾದ್ಯ ಮಾಡಿ

 ದೇವಿಗೆ ಅರ್ಪಿಸಿ ನಮಿಸುವರು||೫||


 ವಿರಾಜಮಾನಳಾಗಿರುವ ಪಾರ್ವತಿ ದೇವಿಗೆ

ಶರಣು ಹೋದರೆ ಕಷ್ಟಗಳು ತೀರುವವು

 ಕರ್ನಾಟಕ  ಮಹರಾಷ್ಟ್ರ ಮುಂತಾದ ಕಡೆಯಿಂದ 

ಭಕ್ತಿಯಿಂದ ಜನರು ಬಂದು  ಸೇರುವರು ||೬||


  ಸುಂದರವಾದ  ಕೋಟೆ, ತುಂಬಿ ಹರಿವ ಕಲ್ಯಾಣಿ 

 ಚಾಳುಕ್ಯರ ಕಾಲದ ಶಿಲ್ಪ ಕಲಾಕೃತಿಗಳು

ತೆಂಗು ಬಾಳೆಯದೆಲೆ ವೀಳೆದೆಲೆಯ ತೋಟಗಳು

ಮಧ್ವೇಶಕೃಷ್ಣ ನ ದಯದಿ ಕಂಗೊಳಿಸುವವು||೭||

*******


No comments:

Post a Comment