Audio by Vidwan Sumukh Moudgalya
ಶ್ರೀ ಜಗನ್ನಾಥದಾಸರ ರಚನೆ
ರಾಗ : ಮೋಹನ ಆದಿತಾಳ
ಮಧ್ವರಾಯರ ಪಾದ ನಂಬೋ ಸು-
ಸಿದ್ಧಾಂತ ಸಾರವ ಹೃದಯದಿ ತುಂಬೋ ॥ಪ॥
ಶತಕೋಟಿ ಜನ್ಮ ಸುಕೃತದಿ
ಅತುಳ ವೈಷ್ಣವಜನ್ಮ ದೊರಕಿತು ನಿಜದಿ
ಸತತ ಸಜ್ಜನ ಪಾದ ರಜದಿ ಮುಣುಗುತ
ದುರ್ವಿಷಯಗಳನು ನಿಗ್ರಹಿಸೊ ನೀ ತ್ವರದಿ ॥೧॥
ಸತ್ಯಂ ಜಗತ್ತಿದು ನೆಚ್ಚೊ ಸ-
ರ್ವೋತ್ತಮ ಹರಿಯೆಂಬೋ ಮಾತನು ಮೆಚ್ಚೊ
ಉತ್ತಮಾನಿಲ ಮತ ಹೆಚ್ಚೊ ನಿತ್ಯ
ಮಿಥ್ಯಾವಾದಿಯಮತಕನಲನ ಹಚ್ಚೊ ॥೨॥
ಈತನ ವಾಕ್ಯವೆ ಸರ್ವ ವೇದ
ಮಾತುಗಳೆಂದರಿಯೊ ವಿಷ್ಣು ಶರ್ವ
ಧಾತೃಗಳೊಂದೆಂಬ ದುರ್ವಾದಿ
ವ್ರಾತ ದುರ್ಗಜಕೆ ಕೇಸರಿಯಾಗಿರುವ ॥೩॥
ಮೋದದಿ ಬದರಿಕಾಶ್ರಮದಿ ಶ್ರೀ-
ಮದ್ಬಾದರಾಯಣನಂಘ್ರಿ ಸೇವಾ ಸಾಧನದಿ
ಸಾಧಿಸಿದನು ಪ್ರತಿಕ್ಷಣದಿ ಶತ
ಮೋದರಾಯನ ಪದ ಪರಮ ಸಂಭ್ರಮದಿ ॥೪॥
ವಟು ವೃಷ್ಟಿವಂಶ ಲಲಾಮ
ತಟಿತಾಭ ಜಗನ್ನಾಥವಿಠಲಗೆ ಪ್ರೇಮಾ
ಸ್ಫುಟರೂಪತ್ರಯನೆ ನಿಷ್ಕಾಮಾ ನಿ-
ಷ್ಕುಟಿಲ ಭಾರತಿರಮಣ ಹನುಮಂತ ಭೀಮ ॥೫॥
*********
No comments:
Post a Comment