Sunday 8 December 2019

ಶ್ರೀಮದನಂತಾ vijaya vittala ankita suladi ಆದಿ ಅನಂತ ಸುಳಾದಿ SRIMADANANTA AADI ANANTA SULADI


Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಆದಿ ಅನಂತ ಸುಳಾದಿ

 ರಾಗ ಶುದ್ಧಧನ್ಯಾಸಿ 

 ಧ್ರುವತಾಳ 

ಶ್ರೀಮದನಂತಾ ಶ್ರೀ ಲಕುಮಿಕಾಂತಾ ಆ -
ದಿ ಮಧ್ಯಂತರಹಿತ ಪರಮಕಾಂತ 
ತಾಮಸ ಖಳಹಂತ ಸರ್ವರಿಗೆ ಬಲವಂತ 
ರೋಮ ರೋಮ ಗುಣವಂತ ಬಲು ನಿಶ್ಚಿಂತ 
ನಾಮ ಪೊಗಳುವಂಥ ಜನರಿಗೆ ದಯವಂತ 
ಕಾಮಜನಕ ಅನಂತ ತಲ್ಪಾನಂತ ನಾಮಾ 
ಆದಿ ಅನಂತ ವಿಜಯವಿಠಲ ಸಂತ -
ತಾ ಮನ್ನಿಸುವಂತ ರಂಗ ನಿಶ್ಯಾಂತ ॥ 1 ॥

 ಮಟ್ಟತಾಳ 

ಜಯ ಜಯ ಜಯದೇವಾ ಜಯ ಜಯ ಸಂಜೀವಾ 
ಜಯ ಜಯ ಶ್ರೀಧವ ಜಯ ಭಕ್ತರಕಾವ 
ಜಯ ಅಘವನದಾವ ಜಯ ವರಗಳ ನೀವ 
ಜಯ ಭುವನ ಜೀವ ಜಯಗೋಕುಲ ಗೋವ 
ಜಯ ಜಯ ಜಯ ವಿಜಯವಿಠಲ ದೇವ 
ಜಯ ಜಯ ಅನಂತ ಜಯ ಜಯ ಧನಂ -
ಜಯನಾಗ್ರಜ ಪ್ರೀಯಾ ಜಯ ಜಯ ಮುನಿಗೇಯಾ ॥ 2 ॥

 ತ್ರಿವಿಡಿತಾಳ 

ಕ್ಷೀರವಾರಿಧಿಶಯನಾ ನೀರಜದಳನಯನಾ 
ಕಾರುಣ್ಯ ಮೂರುತಿ ಮೆರವ ಸತ್ಕೀರುತಿ 
ವಾರುಣಭಯಹಾರ ವಾರುಣಸಂಹಾರ 
ಕಾರಣ ಪುರುಷಾ ಭವತಾರಣ ಬಲುದೈವಾ 
ಚಾರು ನವನೀತ ಚೋರ, ನಾರಿಯರ ಜಾರಾ 
ವಾರವಾರಕ್ಕೆ ಕೃಪಾಪಾರಾವಾರವೆನಿಪಾ -
ಪಾರಾಮಹಿಮ ಗುಣವಾರಿಧಿ ನಿರ್ಗುಣ -
ಕಾರಾ ಶ್ರೀಮದಾನಂತಾ ತೋರುವಾ ನಿಜಾನಂತಾ 
ಸಾರಾ ವಿಜಯವಿಠಲಾ ದೂರಿದವರ ಕುಟಿಲಾ 
ಹಾರಿಸುವಾ ಕರುಣಿ ಸುರರ ಮಸ್ತಕಮಣಿ ॥ 3 ॥

 ಅಟ್ಟತಾಳ 

ವೃದ್ಧ ಭೂಸುರನಾಗಿ ಕೌಂಡಿಣ್ಯ ಮುನಿಪನ್ನ
ಶ್ರದ್ಧರಸಕೆ ವಲಿದ ಸಿದ್ಧ ಪ್ರಸಿದ್ಧ 
ಶುದ್ಧಾತ್ಮರು ಬಂದು ಯಾತ್ರಿಯಾ ಮಾಡಲು 
ಬಿದ್ದು ಹೋಹದ ಫಲಗಳನ್ನು ಇತ್ತು 
ಉದ್ಧಾರಗೈಸುವ ಉದಧಿ ಮಥನಸಿರಿ 
ಮುದ್ದುರಮಣ ಶ್ರೀಮದನಂತರೂಪ 
ಇದ್ದಲ್ಲಿ ಫಲವೀವ ವಿಜಯವಿಠಲ ಬಂದು 
ಸದ್ಭಾವದಲ್ಲಿರೆ ಭದ್ರವಾಗುವದೂ ॥ 4 ॥

 ಆದಿತಾಳ 

ಜ್ಞಾನಾನಂತಾ ಗುಣಾನಂತಾ 
ಧ್ಯಾನಾನಂತಾ ದಾನಾನಂತಾ 
ಮಾನಾನಂತ ಮೌನಾನಂತಾ 
ಅನಂತಾನಂತಾನಂತಾ 
ಅನಂತವರ್ನ ವಿಜಯವಿಠಲಾ 
ಅನಂತ ಎನ್ನ ಪ್ರಾಣಾನಂತಾ ॥ 5 ॥

 ಜತೆ 

ನಮೊ ನಮೊ ಅನಂತಾ ಆದಿ ಅನಂತಾ ನಿ -
ಗಮಪಾಲಾ ವಿಜಯವಿಠಲನಂತ ಸ್ವಾಮಿ ॥
*********

No comments:

Post a Comment