ರಾಗ ಕಲಾವತಿ ಆದಿತಾಳ
Audio by Mrs. Nandini Sripad
ಶ್ರೀ ವಿಜಯದಾಸರ ಕೃತಿ
ಲಿಂಗಾ ಎನ್ನಂತರಂಗ ॥ ಪ ॥
ಮಂಗಳಾಂಗ ಸರ್ವೋತ್ತುಂಗ ರಾಮ ॥ಅ. ಪ.॥
ಮಂದಾಕಿನೀಧರಗೆ ಗಂಗಾಂಬು ಮಜ್ಜನವೆ
ಚಂದ್ರಮೌಳಿಗೆ ಗಂಧ ಕುಸುಮದರ್ಪಣೆಯೆ
ಇಂದು ರವಿನೇತ್ರನಿಗೆ ಕರ್ಪೂರದಾರತಿಯೆ
ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ॥1॥
ಘನವಿದ್ಯಾತುರನಿಗೆ ಮಂತ್ರಕಲಾಪವೆ
ಧನಪತಿಯ ಸಖಗೆ ಕೈಕಾಣಿಕೆಯೆ
ಮನೆರಜತ ಪರ್ವತಗೆ ಫಣಿಯ ಆಭರಣವೆ
ಮನೋನಿಯಾಮಕಗೆ ಎನ್ನ ಬಿನ್ನಪವೆ ॥ 2 ॥
ವೈರಾಗ್ಯನಿಧಿಗೆ ಈ ವಿಷಯ ಪದಾರ್ಥವೆ
ಗಿರಿಯೊಡತಿಯ ಪತಿಗೆ ಈ ಸ್ತೋತ್ರವೆ
ವೀರರಾಘವ ವಿಜಯವಿಠ್ಠಲನು ನಿಜಹಸ್ತ
ವಾರಿಜದಳದಿಂದ ನಿಲ್ಲಿಸಿದ ಶಿವ ಮಹಾ ॥ 3 ॥
***
ಲಿಂಗ ರಾಮಲಿಂಗ ಎನ್ನಂತರಂಗ
ಮಂಗಳಾಂಗನೆ ಸರ್ವೋತ್ತುಂಗನೇ ||ಪ||
ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ
ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ
ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ
ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ
ಘನ ವಿದ್ಯಾತುರಗೆ ಮಂತ್ರ ಕಲಾಪವೇ?
ಧನಪತಿಯ ಸಖಗೆ ಕೈಕಾಣಿಕೆಯೇ
ಮನೆ ರಜತ ಪರ್ವತಗೆ ಫಣಿಯ ಆಭರಣವೇ
ಮನೋ ನಿಯಾಮಕಗೆ ಎನ್ನ ಬಿನ್ನಹವೇ
ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೇ
ಗೌರಿಯ ರಮಣಗೆ ಈ ಸ್ತ್ರೋತ್ರವೇ
ವೀರ ರಾಘವ ವಿಜಯ ವಿಠಲನ ನಿಜ ಹಸ್ತ
ವಾರಿಜ ದಳದಿಂದ ಉದ್ಭವಿಸಿದ ||
***
linga ennanta ranga | ennanta ranga |
mangalangane sarvottama rama linga |
mandakini dharage ganganbu majjanave |chandramaulige gandha kusuma darpanaye
indu ravi netranige karpuradaratiye kandarpajanakage migilapekshaye | 1 |
ganavidya turanige mantrasallapave | ganapatiya sakage kaiyya kanikeye |
manarajata parvatage paniyabaranave | manoniyamakage enna binnapave | 2 |
vairagyanidhige i vishaya padarthave | gauriya ramanage i stotrave |
vira ragava vijaya vithalana nija hasta | varija daladinda nelesiha siva maha | 3 |
***
Linga ennantaranga ||p||
Mangalaangane sarvottama raama linga || a.p||
Mandakini dharage gangaambu majjanave| chandramoulige gandha kusumarpaneye|| indu ravi netranige karpuradaaratiye| kandarpajitage migilapeksheye..|| 1 ||
Ghana vidyaturanige mantrakalaapave| dhanapatiya sakhage kaikaanikeye| manerajata parvatage phaniya aabharanave | mano niyaamakage inna binnapave..|| 2 ||
Vairagyanidhige ee vijaya padaarthave | gouriya ramanage ee stotrave|| veeraraaghava vijaya vithalanna nijahasta | vaarijadaladinda nilisida shiva maha .. || 3 ||
***
ವಿಜಯದಾಸ
ಲಿಂಗಾ ಎನ್ನಂತರಂಗ ಪ
ಮಂಗಳಾಂಗ ಸರ್ವೋ-ತುಂಗನೆ ರಾಮ ಅ. ಪ.
ಮಂದಾಕಿನೀಧರಗೆ ಗಂಗಾಂಬು ಮಜ್ಜನವೆ
ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೆ
ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ರಾಮಾ 1
ಘನವಿದ್ಯಾತುರಗೆ ಮಂತ್ರಕಲಾಪವೆ
ಧನವತಿಯ ಸಖಗೆ ಕೈಕಾಣಿಕೆಯೆ
ಮನೆರಜತ ಪರ್ವತಗೆ ಫಣಿಯ ಆಭರಣವೆ
ಮನೋ ನಿಯಾಮಕಗೆನ್ನ ಬಿನ್ನಹವೆ ರಾಮಾ2
ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೆ
ಗೌರಿಯ ರಮಣಗೆ ಈ ಸ್ತೋತ್ರವೆ
ವೀರ ರಾಘವ ವಿಜಯವಿಠ್ಠಲ ನಿಜಹಸ್ತ
ವಾರಿಜದಳದಿಂದುದ್ಭವಿಸಿದ ಮಹಾ 3
*********
ಶ್ರೀ ವಿಜಯದಾಸರ ಕೃತಿ
ರಾಗ ಕಲಾವತಿ ಆದಿತಾಳ
ಲಿಂಗ ಎನ್ನಂತರಂಗ । ಮಂಗ - ॥ ಪ ॥
ಳಾಂಗ ಸರ್ವೋತ್ತುಂಗ । ರಾಮ - ॥ ಅ ಪ ॥
ಅರ್ಥ :- ಲಿಂಗ = ರಾಮಲಿಂಗ (ಬ್ರಹ್ಮಶಿರಃಛೇದದಿಂದ ಪ್ರಾಪ್ತವಾದ ಬ್ರಹ್ಮಹತ್ಯಾದೋಷ ಪರಿಹಾರಕ್ಕಾಗಿ, ರಾಮೇಶ್ವರದಲ್ಲಿ ಶ್ರೀರಾಮನಿಂದ ರಾಮಸೇತುವಿನ ನಿತ್ಯದರ್ಶನಕ್ಕಾಗಿ , ಲಿಂಗರೂಪದಿಂದ ಪ್ರತಿಷ್ಠಿತನಾದ ಶಿವ); ಎನ್ನಂತರಂಗ = ನನ್ನ ಮನೋನಿಯಾಮಕನಾಗಿ ಮನಸ್ಸಿನಲ್ಲಿರುವವನು; ಮಂಗಳಾಂಗ = ಮಂಗಳ ಸ್ವರೂಪನು (ಶಿವ = ಮಂಗಳ), ಸರ್ವೋತ್ತುಂಗ = ಇಂದ್ರಾದಿ ಸರ್ವದೇವತೆಗಳಿಗಿಂತ ಶ್ರೇಷ್ಠನು; ರಾಮ = ಪ್ರಾರಂಭದಲ್ಲಿರುವ ' ಲಿಂಗ ' ಶಬ್ದದೊಡನೆ ಅನ್ವಯ.
ಮಂದಾಕಿನೀಧರಗೆ ಗಂಗಾಂಬುಮಜ್ಜನವೆ
ಚಂದ್ರಮೌಳಿಗೆ ಗಂಧಕುಸುಮದರ್ಪಣೆಯೇ ।
ಇಂದುರವಿನೇತ್ರನಿಗೆ ಕರ್ಪೂರದಾರತಿಯೆ
ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ॥ 1 ॥
ಅರ್ಥ :- ಮಂದಾಕಿನೀಧರಗೆ = ಭಾಗೀರಥಿಯನ್ನು ತಲೆಯಲ್ಲಿ ಧರಿಸಿದವನಿಗೆ; ಗಂಗಾಂಬುಮಜ್ಜನವೆ = ಗಂಗಾಜಲದ ಅಭಿಷೇಕವೇ ! (ಕಾಶಿಯಿಂದ ಗಂಗಾಜಲವನ್ನು ತಂದು ರಾಮೇಶ್ವರದಲ್ಲಿ ರಾಮಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಶಿವನಿಗೆ ಯಾವ ಆಧಿಕ್ಯವೂ ಇಲ್ಲ - ಅಧಿಕಪ್ರಯೋಜನವೂ ಇಲ್ಲ - ಹರಿಭಕ್ತರಿಗೆ ಇದರಿಂದ ವಿಷ್ಣುಪಾದೋದಕದ (ಗಂಗೆಯ) ಮಹಾತ್ಮ್ಯಜ್ಞಾಪಕ ಮಾತ್ರ; ಪಾದೋದಕವನ್ನು ಶಿರಸಾ ಧರಿಸಿ ಶಿವನು ' ಶಿವ 'ನಾದನು; ಗಂಗಾಭಿಷೇಕದಿಂದ ಶ್ರೀವಿಷ್ಣು ಮಹಿಮಾ ಪ್ರಚಾರಕನು ತಾನೆಂಬ ವಿಶೇಷತೃಪ್ತಿ - ಅದರಿಂದ ಅಭಿಷೇಕ ಮಾಡಿದವರ ಮೇಲೆ ಅನುಗ್ರಹ; ಚಂದ್ರಮೌಳಿಗೆ = (ತಂಪಿಗೆ ಪ್ರಸಿದ್ಧನಾದ) ಚಂದ್ರನನ್ನು ತಲೆಯಲ್ಲಿಟ್ಟವಗೆ; ಗಂಧಕುಸುಮದರ್ಪಣೆಯೇ = ದೇಹವನ್ನು ತಂಪುಗೊಳಿಸಿ ಸುಖಜನಕವಾಗುವ ಪುಷ್ಫಾದಿಗಳ ಅರ್ಪಣೆಯಿಂದೇನು ? (ಭಕ್ತಿಯಿಂದಲ್ಲದೇ ಗಂಧಾದಿಗಳಿಂದ ತೃಪ್ತಿಗೊಳಿಸಲಾರದವನು); ಇಂದುರವಿನೇತ್ರನಿಗೆ = ಚಂದ್ರಸೂರ್ಯರನ್ನೇ ಕಣ್ಣಲ್ಲುಳ್ಳವನಿಗೆ, (ಈ ದೇವತೆಗಳು ರುದ್ರದೇವನ ದೇಹದಲ್ಲಿ ಆಜ್ಞಾಧಾರಕರಾಗಿರುವಾಗ - ನಿಯಾಮಕತ್ವರಹಿತರಾಗಿರಲು , ಆದೀತೇ?) , ಕರ್ಪೂರದಾರತಿಯೇ = ಕರ್ಪೂರದ ಆರತಿಯಿಂದ ಪ್ರಕಾಶವೇ? ಮಿಗಿಲಾಪೇಕ್ಷೆಯೇ = ಬೇರೆ ವಿಷಯಗಳ (ಭೋಗದ) ಕಾಮನೆಯೆ? ಕಂದರ್ಪಜಿತಗೆ = (ಅಂಗ ಸಂಗದ ಕಾಮನೆಗಿಂತ ಪ್ರಬಲ ವಿಷಯಕಾಮವಿಲ್ಲ - ಅದನ್ನು ಪ್ರಚೋದಿಸುವ) ಕಾಮನನ್ನೇ ಗೆದ್ದವಗೆ , (ಬೇರಾವ ವಿಷಯದ ಆಶೆಯಿರಬಹುದು? - ಆದ್ದರಿಂದ ಬೇರಾವ ವಸ್ತುಗಳನ್ನು ಅರ್ಪಿಸಿ, ಶಿವನನ್ನು ತುಷ್ಟಿಗೊಳಿಸಲಾದೀತು?); ರಾಮ(ಲಿಂಗ) - ಇಂಥ ರಾಮಲಿಂಗನು ನನ್ನ ಅಂತರಂಗನು.
ಘನವಿದ್ಯಾತುರನಿಗೆ ಮಂತ್ರಕಲಾಪವೆ
ಧನಪತಿಯ ಸಖಗೆ ಕೈಕಾಣಿಕೆಯೆ ।
ಮನೆರಜತಪರ್ವತಗೆ ಫಣಿಯ ಆಭರಣವೆ
ಮನೋನಿಯಾಮಕಗೆ ಎನ್ನ ಬಿನ್ನಪವೇ ॥ 2 ॥
ಅರ್ಥ :- ಘನವಿದ್ಯಾತುರನಿಗೆ = ನಿರಂತರ ಬ್ರಹ್ಮವಿದ್ಯೆಯಲ್ಲಿ ಆಸಕ್ತನಾದವಗೆ; ಮಂತ್ರಕಲಾಪವೆ = ಮಂತ್ರೋಚ್ಚಾರದ (ವೇದಪಠನೆಗಳಿಂದ) ಸೇವೆಯೇ? ; ಧನಪತಿಯ ಸಖಗೆ = ಕುಬೇರ ಮಿತ್ರನಿಗೆ ( ಕುಬೇರಸ್ತ್ರ್ಯಂಬಕಸಖಃ ); ಕೈಕಾಣಿಕೆಯೇ = ಕೈಯಿಂದ ಎತ್ತಿಕೊಡುವ ದಕ್ಷಿಣೆಯೆ? ಮನೆರಜತಪರ್ವತಗೆ = ಬೆಳ್ಳಿಪರ್ವತವೇ ಮನೆಯಾಗುಳ್ಳವಗೆ; ಫಣಿಯ ಆಭರಣವೆ = ಹೊಳೆಯುವ (ಥಳಥಳಿಸುವ) ಸರ್ಪವು ಆಭರಣವಾದೀತೇ? (ಮುಂದೆ ಬರಲಿರುವ ಶೇಷಪದವಿಯೇ ತನಗೆ ಭೂಷಣವೆಂಬುದರ ದ್ಯೋತಕವಿರಬೇಕು - ಸರ್ಪಗಳನ್ನು ಮೈಗೆ ಬಿಗಿದಿರುವುದು) , ಮನೋನಿಯಾಮಕಗೆ = ಮನಃಪ್ರೇರಕನಿಗೆ , ಎನ್ನ ಬಿನ್ನಪವೇ = ನಾನು ಮಾಡಿಕೊಳ್ಳುವ ಆತನಿಗೆ ತಿಳಿಯದ ವಿಜ್ಞಾಪನೆಯೇನಿದೆ?
ವೈರಾಗ್ಯನಿಧಿಗೆ ಈ ವಿಷಯಪದಾರ್ಥವೆ
ಗಿರಿವೊಡತಿಯ ಪತಿಗೆ ಈ ಸ್ತೋತ್ರವೇ ।
ವೀರರಾಘವ ವಿಜಯವಿಟ್ಠಲನು ನಿಜಹಸ್ತ -
ವಾರಿಜದಳದಿಂದ ನಿಲ್ಲಿಸಿದ ಶಿವ ಮಹಾ - ॥ 3 ॥
ಅರ್ಥ :- ವೈರಾಗ್ಯನಿಧಿಗೆ = ವಿರಕ್ತಶಿಖಾಮಣಿಗೆ (ಕಾಮಜಯಿಗೆ); ಈ ವಿಷಯ ಪದಾರ್ಥವೆ = ನಾವು ಅರ್ಪಿಸಬಹುದಾದ ವಸ್ತುಗಳು ತೃಪ್ತಿಗೊಳಿಸುವ ಸಾಮರ್ಥ್ಯವಳ್ಳವುಗಳೇ? ಗಿರಿವೊಡತಿಯ ಪತಿಗೆ = ಕೈಲಾಸಪರ್ವತದ ಯಜಮಾನಿಯಾದ ಉಮಾಪತಿಗೆ; ಈ ಸ್ತೋತ್ರವೇ = (ವಾಗಭಿಮಾನಿನಿಯಾದ ಉಮೆಯ ಪತಿಗೆ) ನಮ್ಮ ವಾಗಿಂದ್ರಿಯ ಪ್ರವೃತ್ತಗಳಾದ ಸ್ತೋತ್ರಗಳಿಂದೇನು? ವೀರರಾಘವ ವಿಜಯವಿಟ್ಠಲನು = ಶ್ರೀರಾಮಚಂದ್ರಾಭಿನ್ನನಾದ ವಿಜಯವಿಟ್ಠಲನು; ನಿಜಹಸ್ತವಾರಿಜದಳದಿಂದ ನಿಲ್ಲಿಸಿದ ಶಿವಮಹಾ(ಲಿಂಗ) = ಸ್ವಂತ ಕರಪದ್ಮದಿಂದ (ದಳದಿಂದ - ಏಕದೇಶದಿಂದ - ಬೆರಳುಗಳಿಂದ) ಪ್ರತಿಷ್ಠಿಸಿದ ಶಿವನಾದ ಮಹಾಲಿಂಗರೂಪನು (ನನ್ನ ಅಂತರಂಗನು).
ವ್ಯಾಖ್ಯಾನ :
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
************
ಲಿಂಗ ರಾಮಲಿಂಗ ಎನ್ನಂತರಂಗ
ಮಂಗಳಾಂಗನೆ ಸರ್ವೋತ್ತುಂಗನೇ ||ಪಲ್ಲವಿ||
ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ
ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ
ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ
ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ||೧||
ಘನ ವಿದ್ಯಾತುರಗೆ ಮಂತ್ರ ಕಲಾಪವೇ
ಧನಪತಿಯ ಸಖಗೆ ಕೈಕಾಣಿಕೆಯೇ ?
ಮನೆ ರಜತ ಪರ್ವತಗೆ ಫಣಿಯ ಆಭರಣವೇ
ಮನೋ ನಿಯಾಮಕಗೆ ಎನ್ನ ಬಿನ್ನಹವೇ ? ||೨||
ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೇ
ಗೌರಿಯ ರಮಣಗೆ ಈ ಸ್ತ್ರೋತ್ರವೇ
ವೀರ ರಾಘವ ವಿಜಯ ವಿಠಲನ ನಿಜ ಹಸ್ತ
ವಾರಿಜ ದಳದಿಂದ ಉದ್ಭವಿಸಿದ ||೩||
********
No comments:
Post a Comment