ಶ್ರೀ ಜಯೇಶವಿಠಲ ದಾಸರ ಕೃತಿ
ರಾಗ ಮುಖಾರಿ ಖಂಡಛಾಪುತಾಳ
ಕಪ್ಪುಗೊರಳನ ಬಿಂಬ ಅಪ್ಪ ಸಲಹೋ ॥ ಪ ॥
ಕ್ಷಿಪ್ರ ಕೃಪೆ ವೃಷ್ಟಿಗೈ ಅಪ್ರತಿಮ ದಯವನಧಿ ॥ ಅ ಪ ॥
ದಿವಿಜದಾನವಗಣವ ತೃಣಮಾಡಿ ಆಳುವ ।
ಪವನಾಂಶ ಪಾವನ್ನ ಜ್ಞಾನ ಶರಧಿ ॥
ನವವಿಧಾ ಹರಿಭಕ್ತಿ ರಸಸಿಂಧು ಸೌಭಾಗ್ಯ ।
ನಿಧಿ ಎನ್ನ ಮನದಿ ನೆಲೆಯಾಗಿ ನಿಲ್ಲಯ್ಯ ॥ 1 ॥
ನಿತ್ಯಮಂಗಳೆ ಲಕ್ಷ್ಮೀಧವ ಶೌರಿಮೂರ್ತಿಯನು ।
ನಿತ್ಯೋತ್ಸವದಿ ಹೃದಯಕಮಲದಲ್ಲಿ ॥
ನಿತ್ಯಪೂಜಿಪ ಹರಿಯ ಭೃತ್ಯ ಮಸ್ತಕಮಣಿಯೆ ।
ಚಿತ್ತದಲಿ ಕೂತೆನ್ನ ಹರಿಯ ತೋರಿಸು ಸ್ವಾಮಿ ॥ 2 ॥
ಸಾರತಮ ಹರಿಯೆಂದು ಜಗಕೆ ತೋರಿದ ಗುರುವೆ ।
ಭಾರ ನಿನ್ನದು ಸ್ವಾಮಿ ಕಾಯೊ ಎನ್ನ ॥
ಮಾರಪಿತ ಜಯೇಶವಿಠಲನ ಪೂರ್ಣೊಲುಮೆ ।
ವಾರಿಧಿ ವಿಹಾರ ತವ ಎಡಬಿಡದೆ ಇರಿಸೆನ್ನ ॥ 3 ॥
********
Kappu KOraLana bimba appa salahO...
Composition on Sri Appavaru by Sri Jayesha Vittala dasaru
*********
No comments:
Post a Comment