Thursday 26 December 2019

ಜಯರಾಯ ಭವಹರಣ ಪಾಲಿಸೆಮ್ಮ ankita jayesha vittala JAYARAYA BHAVAHARANA PAALISEMMA

Audio by Vidwan Sumukh Moudgalya

ಶ್ರೀ ಜಯೇಶವಿಠಲ ದಾಸರ ಕೃತಿ 
(Sri. Attaji Venkatarayaru, Mysore 1850-1932)ರಾಗ : ಸರಸ್ವತಿ 
ತಾಳ : ತಿಶ್ರನಡೆ 

ಜಯರಾಯ ಭವಹರಣ ಪಾಲಿಸೆಮ್ಮ ॥ ಪ ॥
ಜಯದೇವಿಪತಿ ರೂಪಗುಣಕ್ರಿಯದಿ ರತ ಯತಿಯೇ ॥ ಅ ಪ ॥

ಅಮರೇಶ ಸ್ವರ್ಗಪದ ತೃಣ ಮಾಡಿ ಕ್ಷಿತಿಯಲ್ಲಿ ।
ಅಮಿತಮತಿ ಶ್ರೀಪಾದ ಸೇವೆಗಾಗಿ ॥
ಅಮಿತ ಸೌಭಾಗ್ಯದಿಂ ಪಶುವಾಗಿ ನೀನಂದು ।
ಭ್ರಮರವದ್ಗುರುಚರಣ ಕಮಲಮಧು ಸೇವಿಸಿದೆ ॥ 1 ॥

ತ್ರಿತಿಯೇಶರೆನಿಸುವಾ ಅಹಿಗರುಡ ಮಹರುದ್ರ ।
ಪ್ರತಿಕ್ಷಣದಿ ಅತಿಭಕುತಿಭಾರದಿಂದಾ ॥
ನತಿಸಿ ಸೇವಿಪ ಪರಮ ಗುರುಚರಣವಾಶ್ರೈಸಿದ ।
ಅತಿಸುಕೃತ ನಿಧಿ ನಮ್ಮ ಅತಿದಯದಿ ಈಕ್ಷಿಪುದು ॥ 2 ॥

ಶ್ರೀಭೂಮಿ ದುರ್ಗೇಶ ನಮಿತ ಮಂಗಳಮೂರ್ತಿ ।
ಶೋಭನಾನಂತ ಗುಣಕ್ರಿಯ ನಿವಹಗಳನು ॥
ಅದ್ಭುತದಿ ಧರಿಸಿಹಾ ಮಧ್ವಕೃತ ಗ್ರಂಥಗಳ ।
ಸದ್ಭಕ್ತಿಯಲಿ ಪೊತ್ತೆ ಸೌಭಾಗ್ಯನಿಧಿ ಗುರುವೇ ॥ 3 ॥

ಪವಮಾನರಾಯನಾ ಕೃಪೆಯೆಷ್ಟೋ ನಿನ್ನಲ್ಲಿ ।
ಅವನಿಯೊಳು ಸಿದ್ಧಾಂತಗ್ರಂಥಗಳ ಟೀಕಾ ॥
ಕವಿಶ್ರೇಷ್ಠರಿರಲಾಗಿ ನಿನ್ನಿಂದ ರಚಿಸಿದಾ ತ್ರಿ - ।
ಭುವನ ಮಾನ್ಯ ಧನ್ಯತಮ ಪೊರೆ ಎನ್ನಾ ॥ 4 ॥

ಪಾರ್ಥನಾಗಂದು ಶ್ರೀಯದುಪತಿಯ ಸಖ್ಯವನು ।
ಪೂರ್ತಿ ಪೊಂದಿದೆ ಸರ್ವ ಪುರುಷಾರ್ಥವೆಂದೂ ॥
ಸಾರ್ಥಮತಿಯಲಿ ಹರಿಯ ಒಲಿಸಿದಾ ಮಹನಿಪುಣ ।
ಪ್ರಾರ್ಥಿಸುವೆ ತವಪಾದಪಾಂಸು ರಕ್ಷಿಸಲೆಂದೂ ॥ 5 ॥

ದೇವಕೀಸುತ ನಿನ್ನ ಸಖನೆಂದು ಪವಮಾನ - ।
ದೇವ ನಿನ್ನಲಿ ಮಾಡ್ದ ಪರಮಪ್ರೀತಿ ॥
ಕೈವಲ್ಯಪತಿದಾಸ್ಯ ಪೂರ್ಣಪದ ಆರೂಢ ।
ಕೃಪೆ ಮಾಡೊ ಹರಿದಾಸಮಣಿ ಗುರುವೇ ॥ 6 ॥

ಭಾರತೀಪತಿಗೊಡೆಯ ಜಯೇಶವಿಟ್ಠಲನ ।
ವೈರಾಗ್ಯಶಿದ್ಧಿಯಲಿ ಏಕಾಂತ ಪೊಂದೀ ॥
ಭೂರಿ ಭಕ್ತಿಲಿ ಭಜಿಪ ಭವ ಕರುಣಸತ್ಪಾತ್ರ ।
ಸೂರಿ ಸುರಿ ದಯವೃಷ್ಟಿ ಹರಿಗುರುಗಳೊಲಿವಂತೆ ॥ 7 ॥
*****

No comments:

Post a Comment