Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಮಧ್ವಮತ ಸ್ತೋತ್ರ ಸುಳಾದಿ
ರಾಗ ಕಲ್ಯಾಣಿ
ಧ್ರುವತಾಳ
ಅದ್ವೈತ ಮತವನು ಅದ್ವರ ಮಾಡುವ |
ನ ದ್ವೇಷವನ್ನು ಬಳಿಸು ಸದ್ವಚನವ ಕೇಳು
ದ್ವೈತ ಮತದಲ್ಲಿ ಸದ್ವೈಷ್ಣೋತ್ತಮನಾಗು
ಸದ್ವಿಚಾರದಲ್ಲಿ ತದ್ವಿಧಿಯಾಚರಿಸು
ಮಧ್ವರಾಯರ ಪಾದದ್ವಯವ ಭಜಿಸಿ
ಊರ್ಧ್ವ ಲೋಕಕೆ ಪೋಗುವ ದ್ವಾರಮಾಡು |
ಅದ್ವೈತ ಮಹಿಮ ದಾನವದ್ವಂಸಿ ವಿಜಯವಿಠ್ಠಲ
ವಿದ್ವತ್ತಮನ ನೀ ಹೃದ್ವನಜದೊಳಗಿರಿಸೊ ॥ 1 ॥
ಮಟ್ಟತಾಳ
ತೃಣ ಮೊದಲು ನೋಡು ವನಜಭವ ಸಹಿತ|
ಗಣಿತ ಗುಣಿತ ಮಾಡೆ ಜನನ ಮರಣ ಉಂಟು|
ವನಜನಾಭನ ದರುಶನದಿಂದವರವರ|
ಮನುಜೋತ್ತಮ ವಿಡಿದು|
ನಿನಗಿಂದೊಂದೆರಡು ಗುಣವಧಿಕದಿಂದ|
ಗುಣದಿಂದಧಿಕರು ವನಜನಂದನನ|
ತನಕ ನಮಿಸುತಿರು|
ಜನ್ಮಜನ್ಮದ ನಾಮಾ ವಿಜಯವಿಠ್ಠಲನ್ನ
ಅನುಸರಿಸಿ ಕಾಲನ ಪುರವಗೆಲ್ಲೊ ॥ 2 ॥
ತ್ರಿವಿಡಿತಾಳ
ಪಯೋರತಿಯೇ ಯತ್ರ ತತ್ರಾಪಿ ಭಗವಾನ್|
ಅಯೋರಿತ ಅನಾದ್ಯಾಯ ಆಗಮಗಣ ಸಂಖ್ಯಾತೇ|
ಯಯೋ ಶ್ರದ್ಧಾಪುರುಷ ಯಿತಿ ಮುಕ್ತಿ ವಾಚಾ
ವಾಯು ಮತವೇ ಮತವೆಂದು ಪೇಳುತಲಿವೆ|
ಬಾಯ ಬಡಕನಾಗಿ ಭಯಭಕ್ತಿ ಇಲ್ಲದೆ|
ದಾಯಾದ್ಯರಂತೆ ಕೊಂಡಾಡಿದರೆ|
ನಾಯಿ ಬಾಯಿಗೆ ಬಿದ್ದ ಆ ಯಂಜಲ ಅರಿವೇ|
ಘಾಯ ವಡದಂತೆ ಯಮನ ಬಳಿಯಾ
ಕಾಯ ಖಂಡ್ರಿಸಿಕೊಂಡು ನೋಯುವದೆ ಸಿದ್ಧ|
ಜಯಂತ ನಾಮ ಶ್ರೀವಿಜಯವಿಠ್ಠಲನ್ನ |
ಪ್ರೀಯವಾದ ಮತ ಪೊಂದಿ ಜಯವಂತರಾಗಿರೋ ॥ 3 ॥
ಅಟ್ಟತಾಳ
ಆಲೋಚಿಸಿ ನೋಡಿ ವೈಷ್ಣವರ ಮತ |
ದಾಳುಗಳು ಬರುವ ಕಿರಣ ಮಾಲೆ|
ತುಳಸಿ ಗಳದಲ್ಲಿ ಪದುಮಹಾರ|
ಮೇಲೆ ದ್ವಾದಶ ಪುಂಢ್ರ ಚಕ್ರಾಂಕಿತ |
ಬಾಲರವಿಯಂತೆ ಪೊಳೆಯುತ್ತ ಚರಿಸಲು|
ಸೋಲುವದು ಸುಮನಸರ ಗಣ |
ಆಳಾವಾದು ಇವರ ಇವರ ಮಹಿಮೆಗೆಂದು|
ಕಾಲನ್ನ ದೂತರು ನಡಗುವರು|
ಹೇಳಲೆ ಇದಕೆ ಸಾಕ್ಷಿ ಪ್ರಲ್ಹಾದನು |
ಶೂಲಿ ಭಕ್ತನ ಬಾಧಿಯ ಗೆದ್ದನು|
ಹಾಳು ಮತವ ಬಿಡು ಹಗಲಿಳಿದ್ದರು|
ಘಾಳಿಗಿಕ್ಕಿದ ದೀಪದೋಪಾದಿಯೊ|
ಬಾಳು ಸರ್ವದಾ ವಿಜಯವಿಠ್ಠಲನ್ನ |
ಆಳಾಗಿ ಸೇವಿಸೊ ಅರಸಾಗಿ ಭುಂಜಿಸೊ ॥ 4 ॥
ಆದಿತಾಳ
ಉದ್ದಕೆ ಪೋದಕೆ ಊರು ಸೇರುವ
ಉದ್ದಿನಷ್ಟು ಭಯವಿಲ್ಲದೆ ಮುಗ್ಧ ನಡ್ಡ|
ಬಿದ್ದು ಪೋದರೆ ಅದ್ವಾನ ಅಡಿವಿ ಸೇರುವ |
ಕದ್ದು ತಿಂಬುವರೊಳಗಾಡಿ ಶುದ್ಧಿ ಇಲ್ಲದೆ ಮುಣುಗುವ|
ಸಿದ್ಧವಿದು ಸರ್ವದಲ್ಲಿ ಬುದ್ಧಿವಂತರು ಕೇಳುವದು|
ಛುದ್ರ ಮಾರ್ಗದೂರ ಕಳದು ಶ್ರದ್ಧಾ ಭಕುತಿಯಿಂದ|
ಉದ್ಧವಾದುದನು ಕರಿಸಿ ಉದ್ಧಾರಾಗುವದು|
ಸಿದ್ಧ ಸಾಧನ ವಿಜಯವಿಠ್ಠಲನ್ನ ತದ್ಧಾಸರ ವೊಡಗೂಡಿ|
ಪೊದ್ದು ತೊರದು ನಡೆದರೆ ಗತಿಗೆ ಪದ್ಯೆಗಳೆವ ನಿತ್ಯವಾಗಿ ॥ 5 ॥
ಜತೆ
ಆಗ್ರಮತವ ಬಿಟ್ಟು ಅಘ್ಘವಾಗದಿರಿ|
ಅಗ್ರಜನಾಮ ವಿಜಯವಿಠ್ಠಲನು ಮೆಚ್ಚ ॥
***********
No comments:
Post a Comment